ಹಾಸನ,ಮೇ,8,2026 (www.justkannada.in): ತಮಿಳುನಾಡು ವಿಧಾನಸಭೆ ಚುನಾವಣೆ ವೇಳೆ ಭರಪೂರ ಉಚಿತಗಳನ್ನ ಘೋಷಣೆ ಮಾಡಿ 108 ಸ್ಥಾನಗಳನ್ನ ಗೆದ್ದು ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ವಿಜಯ್ ನೇತೃತ್ವದ ಟಿವಿಕೆ ಪಕ್ಷವು ಸರ್ಕಾರ ರಚನೆಗೆ ತೀವ್ರ ಕಸರತ್ತು ನಡೆಸುತ್ತಿದೆ.
ಈ ಮಧ್ಯೆ ಚುನಾವಣಾ ಪ್ರಣಾಳಿಕೆಯಲ್ಲಿ ವಿಜಯ್ ಘೋಷಿಸಿರುವ ಉಚಿತಗಳ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ವಿಜಯ್ ರನ್ನು ದೇವರೇ ಕಾಪಾಡಬೇಕು ಎಂದಿದ್ದಾರೆ.
ಹಾಸನ ಜಿಲ್ಲೆ ಹೊಳೇನರಸೀಪುರ ತಾಲ್ಲೂಕಿನ ಮಾವಿನಕೆರೆಯಲ್ಲಿ ಇಂದು ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ತಮಿಳುನಾಡು ರಾಜ್ಯದ ಬಜೆಟ್ 3.30 ಲಕ್ಷ ಕೋಟಿ ರೂ.ಇದೆ. ವಿಜಯ್ ಅವರ ಉಚಿತ ಯೋಜನೆಗೆ 6 ಲಕ್ಷ ಕೋಟಿ ರೂ ಬೇಕು. ಅದಕ್ಕೆ ಹೇಗೆ ಹಣ ಹೊಂದಿಸುತ್ತಾರೆ ಕಾದು ನೋಡೋಣ. ಎಂದರು.
ಕೇರಳ ಪಶ್ಚಿಮ ಬಂಗಾಳ ಫಲಿತಾಂಶದ ಬಗ್ಗೆ ಸಾಕಷ್ಟು ನಿರೀಕ್ಷೆ ಇತ್ತು. ತಮಿಳುನಾಡಿನಲ್ಲಿ ಡಿಎಂಕೆ ಅಧಿಕಾರಕ್ಕೆ ಬರುತ್ತೆ ಅಂತಾ ಇತ್ತು. ವಿಜಯ್ ಪಕ್ಷಕ್ಕೆ ಇಷ್ಟೊಂದು ದೊಡ್ಡ ಮಟ್ಟದ ಗೆಲುವು ಸಿಕ್ಕಿದೆ ಎಂದು ಹೆಚ್ ಡಿಕೆ ನುಡಿದರು.
Key words: Free announcement,Tamilnadu, Vijay, Union Minister, HDK
The post ಉಚಿತ ಘೋಷಣೆ: ವಿಜಯ್ ರನ್ನು ದೇವರೇ ಕಾಪಾಡಬೇಕು ಎಂದ ಕೇಂದ್ರ ಸಚಿವ HDK appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.





