7
May, 2026

A News 365Times Venture

7
Thursday
May, 2026

A News 365Times Venture

ಆಧಾರ ರಹಿತ ಆರೋಪ: ಟಿ.ಆರ್ ಚಂದ್ರಶೇಖರ್ ವಿರುದ್ದ ಕ್ರಮಕ್ಕೆ ಮೈಸೂರು ವಿವಿ ಸಿಂಡಿಕೇಟ್ ಸಭೆಯಲ್ಲಿ ತೀರ್ಮಾನ

Date:

ಮೈಸೂರು,ಮೇ,5,2026 (www.justkannada.in): ಮೈಸೂರು ವಿಶ್ವವಿದ್ಯಾನಿಲಯದ ಆಡಳಿತ, ಟೆಂಡರ್ ಪ್ರಕ್ರಿಯೆ ಮತ್ತು ಆರ್ಥಿಕ ವಿಚಾರಗಳಿಗೆ ಸಂಬಂಧಿಸಿದಂತೆ ಸಿಂಡಿಕೇಟ್ ಸದಸ್ಯ ಟಿ.ಆರ್. ಚಂದ್ರಶೇಖರ್  ಆಧಾರ ರಹಿತ ಆರೋಪ ಮಾಡುತ್ತಿದ್ದಾರೆಂದು ಸಿಂಡಿಕೇಟ್‌ ನ 3ನೇ ಸಾಮಾನ್ಯ ಸಭೆಯಲ್ಲಿ ಖಂಡಿಸಿ ಈ ಸಂಬಂಧ ಕ್ರಮ ಕೈಗೊಳ್ಳಲು ತೀರ್ಮಾನಿಸಿದೆ.

ಸಿಂಡಿಕೇಟ್‌ನ 3ನೇ ಸಾಮಾನ್ಯ ಸಭೆ ಮೈಸೂರಿನ ಕ್ರಾಫರ್ಡ್ ಭವನದಲ್ಲಿ ನಡೆಯಿತು. ಸಭೆಯಲ್ಲಿ ವಿಶ್ವವಿದ್ಯಾನಿಲಯದ ಪ್ರತಿಷ್ಠೆ ಹಾಗೂ ಆಡಳಿತಕ್ಕೆ ಧಕ್ಕೆ ತರುತ್ತಿರುವ ಕೆಲವು ಗಂಭೀರ ವಿಚಾರಗಳ ಬಗ್ಗೆ ಚರ್ಚೆ ನಡೆಯಿತು.

ಸಿಂಡಿಕೇಟ್ ಸದಸ್ಯ ಟಿ.ಆರ್. ಚಂದ್ರಶೇಖರ್ ಅವರು ವಿಶ್ವವಿದ್ಯಾನಿಲಯದ ಆಡಳಿತ, ಟೆಂಡರ್ ಪ್ರಕ್ರಿಯೆ ಮತ್ತು ಆರ್ಥಿಕ ವಿಚಾರಗಳಿಗೆ ಸಂಬಂಧಿಸಿದಂತೆ ಮಾಡುತ್ತಿರುವ ಆರೋಪಗಳು ಆಧಾರರಹಿತ, ದುರುದ್ದೇಶಪೂರಿತ ಹಾಗೂ ಅಧಿಕೃತ ದಾಖಲೆಗಳಿಲ್ಲದವು ಎಂದು ಸಭೆ ಅಭಿಪ್ರಾಯಪಟ್ಟಿತು. ವಿಶ್ವವಿದ್ಯಾನಿಲಯದ ಅಧಿಕಾರಿಗಳ ಬಳಿ ಸ್ಪಷ್ಟನೆ ಪಡೆಯದೆ, ಮಾಧ್ಯಮಗಳು ಮತ್ತು ಜಾಲತಾಣಗಳ ಮೂಲಕ ಸುಳ್ಳು ಆರೋಪಗಳನ್ನು ಮಾಡುತ್ತಿರುವುದನ್ನು ಸಭೆ ಖಂಡಿಸಿತು.

ವಿಶ್ವವಿದ್ಯಾನಿಲಯದ ಅಧಿಕೃತ ಲೋಗೋ ಮತ್ತು ಹೆಸರಿನ ದುರ್ಬಳಕೆ ಮೂಲಕ ಸಂಸ್ಥೆಯ ಘನತೆಗೆ ಧಕ್ಕೆ ಉಂಟಾಗುತ್ತಿದೆ ಎಂದು ಸಭೆ ಆತಂಕ ವ್ಯಕ್ತಪಡಿಸಿತು. ಇಂತಹ ಹೇಳಿಕೆಗಳಿಂದ ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಯಾಗುತ್ತಿದ್ದು, ವಿಶ್ವವಿದ್ಯಾನಿಲಯದ ಪ್ರತಿಷ್ಠೆಗೆ ಹಾನಿಯಾಗಿದೆ ಎಂದು ತಿಳಿಸಲಾಯಿತು.

ಈ ಹಿನ್ನೆಲೆಯಲ್ಲಿ, ಟಿ.ಆರ್. ಚಂದ್ರಶೇಖರ್ ಅವರ ನಡವಳಿಕೆಯನ್ನು ಸರ್ವಾನುಮತದಿಂದ ಖಂಡಿಸಿ, ಕರ್ನಾಟಕ ಸರ್ಕಾರ ಹಾಗೂ ಕುಲಾಧಿಪತಿಗಳಿಗೆ ವರದಿ ಸಲ್ಲಿಸಿ ಕಾನೂನುಬದ್ಧ ಕ್ರಮ ಕೈಗೊಳ್ಳುವಂತೆ ಸಿಂಡಿಕೇಟ್ ಸಭೆ ತೀರ್ಮಾನಿಸಿದೆ.

ಇದೇ ವೇಳೆ, ಟಿ.ಆರ್. ಚಂದ್ರಶೇಖರ್ ಅವರು ವಿಶ್ವವಿದ್ಯಾನಿಲಯದ ಅಧಿಕೃತ ಕಾರ್ಯನಿರ್ವಾಹಕ ಅಧಿಕಾರಿಯಲ್ಲ ಎಂದು ಸ್ಪಷ್ಟಪಡಿಸಿರುವ ಕುಲಸಚಿವರು, ಅವರು ನೀಡುತ್ತಿರುವ ಹೇಳಿಕೆಗಳು ವಿಶ್ವವಿದ್ಯಾನಿಲಯದ ಅಧಿಕೃತ ನಿಲುವಲ್ಲ ಎಂದು ಸಾರ್ವಜನಿಕರು ಮತ್ತು ಮಾಧ್ಯಮಗಳಿಗೆ ಮನವಿ ಮಾಡಿದ್ದಾರೆ.

ENGLISH SUMMARY..

University of Mysore Syndicate’s 3rd General Meeting was held on May 6 at Crawford Hall in Mysuru. The meeting strongly condemned Syndicate member T.R. Chandrashekhar for allegedly making baseless and unverified allegations against the university administration and statutory officials through media platforms.

The Syndicate stated that the corruption and tender irregularity allegations lacked official evidence and were damaging the university’s reputation. It also accused him of misusing the university’s name and logo and spreading misinformation without following official procedures.

The Syndicate unanimously resolved to submit a detailed report to the Karnataka government and the Chancellor, seeking appropriate legal action against him. The Registrar clarified that T.R. Chandrashekhar is not an official executive authority of the university, and his statements do not represent the university’s official stand.

Key words: Baseless allegation, TR Chandrasekhar, Mysore University, Syndicate meeting

The post ಆಧಾರ ರಹಿತ ಆರೋಪ: ಟಿ.ಆರ್ ಚಂದ್ರಶೇಖರ್ ವಿರುದ್ದ ಕ್ರಮಕ್ಕೆ ಮೈಸೂರು ವಿವಿ ಸಿಂಡಿಕೇಟ್ ಸಭೆಯಲ್ಲಿ ತೀರ್ಮಾನ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

അടുത്ത പ്രതിപക്ഷ നേതാവ് ആരാകും? കെ.എൻ ബാലഗോപാൽ പരിഗണനയിലെന്ന് റിപ്പോർട്ടുകൾ

നിയമസഭാ തെരെഞ്ഞെടുപ്പിന് ശേഷം കോൺഗ്രസിലും യു.ഡി.എഫിലും മുഖ്യമന്ത്രി ആരാകുമെന്ന ചർച്ചകൾ സജീവമാകുമ്പോൾ...

தவெக: “அடுத்த எம்.ஜி.ஆர்; அதிமுக ஆதரவளித்து…" – ஆளுநருக்கு வேண்டுகோள் விடுக்கும் தம்பி ராமையா

தமிழகத்தில் நடந்து முடிந்த தேர்தல் முடிவுகளைத் தொடர்ந்து ஏற்பட்டுள்ள அரசியல் சூழலில்,...

Watermelon Case: పుచ్చకాయ తిని నలుగురు మృతి.. ఫోరెన్సిక్ నివేదికలో షాకింగ్ నిజం..

Watermelon Case: పుచ్చకాయ తిని ముంబైకి చెందిన నలుగురు కుటుంబ సభ్యులు...

നിന്റെ കുഴലൂത്ത് ലീഗിനെതിരെ വേണ്ട; മാത്യു കുഴൽനാടനെതിരെ യൂത്ത് ലീഗിന്റെ പോസ്റ്റർ

കണ്ണൂർ: മാത്യു കുഴൽനാടനെതിരെ പോസ്റ്റർ പതിപ്പിച്ച് യൂത്ത് ലീഗ്. നിൻ്റെ കുഴലൂത്ത്...