ಬೆಂಗಳೂರು,ಏಪ್ರಿಲ್,24,2026 (www.justkannada.in): ಒಳಮೀಸಲಾತಿ ಹಂಚಿಕೆಗೆ ಸಂಬಂಧ ಇಂದು ಅಂತಿಮ ನಿರ್ಧಾರ ಕೈಗೊಳ್ಳಲಾಗಿದ್ದು ಸಭೆಯಲ್ಲಿ ಎಲ್ಲರೂ ಸರ್ವಾನುಮತದಿಂದ ಒಪ್ಪಿಗೆ ನೀಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಇಂದು ಒಳಮೀಸಲಾತಿ ಸಂಬಂದ ವಿಶೇಷ ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಇಂದು ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಪ್ರವರ್ಗ ಎ 5.25, ಪ್ರವರ್ಗ ಬಿ5.25 ಮತ್ತು ಪ್ರವರ್ಗ ಸಿ 4.5 ರೀತಿಯಾಗಿ ಒಳಮೀಲಾತಿ ವರ್ಗೀಕರಣ ಮಾಡಲಾಗಿದೆ. ಈ ನಿರ್ಧಾರಕ್ಕೆ ಸರ್ವಾನುಮತದುಂದ ಒಪ್ಪಿಕೊಳ್ಳಲಾಗಿದೆ. ಯಾವುದೇ ಅಪಸ್ವರ ಇಲ್ಲದೆಯೇ ಸಂಪುಟದಲ್ಲಿ ಒಪ್ಪಿಕೊಳ್ಳಲಾಗಿದೆ ಎಂದರು.
56 432 ಹುದ್ದೆಗಳ ಭರ್ತಿಗೆ ಇದೇ ಅನುಪಾತ ಅನ್ವಯ..
ನ್ಯಾಯಾಲಯದ ಮುಂದಿನ ಆದೇಶದವರೆಗೆ ಇದೇ ಅನುಪಾತ ಅನ್ವಯವಾಗಲಿದೆ. ನೇಮಕಾತಿ ವೇಳೆ ಇದೇ ಅನುಪಾತವನ್ನ ಅನುಸರಿಸುತ್ತೇವೆ. ಬಜೆಟ್ ನಲ್ಲಿ 56,432 ಹುದ್ದೆಗಳನ್ನ ಭರ್ತಿ ಮಾಡುವುದಾಗಿ ಘೋಷಣೆ ಮಾಡಿದ್ದವು. ನೇಮಕಾತಿ ಅಧಿಸೂಚನೆ ಮತ್ತೊಮ್ಮೆ ಪ್ರಕಟ ಮಾಡುತ್ತೇವೆ. ಈ ಹುದ್ದೆಗಳ ಭರ್ತಿ ವೇಳೆ ಇದೇ ಅನುಪಾತ ಅನ್ವಯ ಮಾಡುತ್ತೇವೆ ಎಂದರು.
Key words: Internal reservation, ratio, filling, 56,432 posts, CM Siddaramaiah
The post ಒಳಮೀಸಲಾತಿ ಹಂಚಿಕೆಗೆ ಸರ್ವಾನುಮತದಿಂದ ಒಪ್ಪಿಗೆ: 56,432 ಹುದ್ದೆಗಳ ಭರ್ತಿಗೆ ಇದೇ ಅನುಪಾತ ಅನ್ವಯ- ಸಿಎಂ ಸಿದ್ದರಾಮಯ್ಯ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.





