ಮೈಸೂರು,ಏಪ್ರಿಲ್,23,2026 (www.justkannada.in) : ನಂಜನಗೂಡು ನಗರದಲ್ಲಿರುವ ಶ್ರೀ ಗುರುಮಲ್ಲೇಶ್ವರ ಖಾಸಗಿ ಶಾಲೆಯಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾಭ್ಯಾಸ ಮಾಡುತ್ತಿದ್ದ ಬಾಲಕಿ ಪ್ರಥಮ ದರ್ಜೆಯಲ್ಲಿ ಪಾಸ್ ಆಗಿದ್ದರೂ ಕೂಡ ಕಡಿಮೆ ಅಂಕ ಬಂದಿದೆ ಎಂದು ಮನನೊಂದು ನೇಣಿಗೆ ಶರಣಾಗಿರುವ ದಾರುಣ ಘಟನೆ ನಡೆದಿದೆ.
ನಂಜನಗೂಡು ತಾಲೂಕಿನ ಕುರಹಟ್ಟಿ ಗ್ರಾಮದ ಮಂಜು @ ಶಿವಕುಮಾರ್ ಮತ್ತು ಸವಿತಾ ದಂಪತಿಗಳ ಪುತ್ರಿ ತ್ರಿಶಾಲ 16 ವರ್ಷದ ಮೃತ ಬಾಲಕಿ. ನಂಜನಗೂಡು ನಗರದ ಗುರುಮಲ್ಲೇಶ್ವರ ಖಾಸಗಿ ಪ್ರೌಢಶಾಲೆಯಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾಭ್ಯಾಸ ಮಾಡಿ ಫಲಿತಾಂಶಕ್ಕಾಗಿ ಕಾಯುತ್ತಿದ್ದಳು.
ಇಂದು ಎಸ್ ಎಸ್ ಎಲ್ ಸಿ ಫಲಿತಾಂಶ ಬಂದ ಬಳಿಕ ಬರೋಬರಿ 440 ಅಂಕಗಳನ್ನು ಗಳಿಸಿಕೊಂಡು ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದ ಮೃತ ಬಾಲಕಿ ತ್ರಿಶಾಲ ನಾನು ಪರೀಕ್ಷೆಯನ್ನು ಡಿಸ್ಟಿಂಕ್ಷನ್ ಬರುವ ಮಟ್ಟಕ್ಕೆ ಬರೆದಿದ್ದೇನೆ. ಪ್ರಥಮ ದರ್ಜೆಯಲ್ಲಿ ತೆರ್ಗಡೆಯಾಗಿರುವುದು ಕಡಿಮೆ ಅಂಕ ಎಂದು ಮನನೊಂದು ಮನೆಯಲ್ಲಿ ಯಾರು ಇಲ್ಲದ ಸಮಯ ನೋಡಿ ನೇಣಿಗೆ ಶರಣಾಗಿದ್ದಾಳೆ. ಬಾಲಕಿಯ ಸಾವಿನಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟುವಂತಿದೆ.
ENGLISH SUMMARY..
Student Suicide in Nanjangud Taluk
A tragic incident was reported from Kurahatti village in Nanjangud taluk of Mysuru district, where a student named Trishala died by suicide after being distressed over scoring below 440 marks in her exams.
According to reports, she was upset about her marks and hanged herself at her residence. Police have visited the spot, registered a case, and begun an investigation.
Note: Students should remember that marks are not everything, and seeking support from family or counselors during difficult times is important.
Key words: SSLC results, Girl , suicide, passing, first grade
The post SSLC ಫಲಿತಾಂಶ: ಪ್ರಥಮ ದರ್ಜೆಯಲ್ಲಿ ಪಾಸ್ ಆದ್ರೂ ನೇಣಿಗೆ ಶರಣಾದ ಬಾಲಕಿ..! appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.





