23
April, 2026

A News 365Times Venture

23
Thursday
April, 2026

A News 365Times Venture

ಬೆಂಗಳೂರಿಗೆ ‘ಧಾರವಾಡ ಆಕಾಶವಾಣಿ ಕೇಂದ್ರ’ ಸ್ಥಳಾಂತರ ನಿರ್ಧಾರ ವಾಪಸ್

Date:

ಧಾರವಾಡ,ಏಪ್ರಿಲ್,22,2026 (www.justkannada.in):  ಬೆಂಗಳೂರಿಗೆ ಧಾರವಾಡ ಆಕಾಶವಾಣಿ ಪ್ರಾದೇಶಿಕ ಕೇಂದ್ರ ಸ್ಥಳಾಂತರ ನಿರ್ಧಾರವನ್ನು ಪ್ರಸಾರ ಭಾರತಿ ಹಿಂತೆಗೆದುಕೊಳ್ಳಲು ಮುಂದಾಗಿದೆ.

ಈ ಕುರಿತು ಸ್ಥಳಾಂತರಿಸದಂತೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ಅವರು ಆದೇಶ ಹೊರಡಿಸಿದ್ದಾರೆ. ಧಾರವಾಡ ಸಂಸದ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು  ಧಾರವಾಡ ಆಕಾಶವಾಣಿ ಪ್ರಾದೇಶಿಕ ಕೇಂದ್ರವನ್ನು ಧಾರವಾಡದಲ್ಲಿಯೇ ಮುಂದುವರಿಸುವಂತೆ ಕೇಂದ್ರದ ಗಮನ ಸೆಳೆದಿದ್ದರು.

ಧಾರವಾಡ ಆಕಾಶವಾಣಿ ಪ್ರಾದೇಶಿಕ ಕೇಂದ್ರವನ್ನು ಬೆಂಗಳೂರಿಗೆ ಸ್ಥಳಾಂತರಿಸಲು ಪ್ರಸಾರ ಭಾರತಿ ಸಕ್ಷಮ ಪ್ರಾಧಿಕಾರ ನಿರ್ಣಯಿಸಿತ್ತು. ಈ ಸಂಬಂಧ ಉತ್ತರ ಕರ್ನಾಟಕದ ಜನರಿಂದ ವಿರೋಧ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಆಕಾಶವಾಣಿ ಕೇಂದ್ರವನ್ನು ಧಾರವಾಡದಲ್ಲೇ ಮುಂದುವರಿಸುವಂತೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಮನವಿ ಮಾಡಿದ್ದರು.

ಪ್ರಹ್ಲಾದ್ ಜೋಶಿ ಮನವಿಗೆ ಸ್ಪಂದಿಸಿರುವ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್, ಧಾರವಾಡ ಆಕಾಶವಾಣಿ ಪ್ರಾದೇಶಿಕ ಕೇಂದ್ರವನ್ನು ಧಾರವಾಡದಲ್ಲಿಯೇ ಮುಂದುವರಿಸುವಂತೆ ಪ್ರಸಾರ ಭಾರತಿಗೆ ಆದೇಶಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಧಾರವಾಡ ಆಕಾಶವಾಣಿ ಕೇಂದ್ರ ಸ್ಥಳಾಂತರ ನಿರ್ಧಾರ ವಾಪಸ್ ಪಡೆಯಲು ಪ್ರಸಾರ ಭಾರತಿ ಮುಂದಾಗಿದೆ ಎನ್ನಲಾಗಿದೆ.

Key words: Decision, Dharwad, All India Radio Station, Bengaluru, Prahlad Joshi

The post ಬೆಂಗಳೂರಿಗೆ ‘ಧಾರವಾಡ ಆಕಾಶವಾಣಿ ಕೇಂದ್ರ’ ಸ್ಥಳಾಂತರ ನಿರ್ಧಾರ ವಾಪಸ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

പ്രധാനമന്ത്രിക്കെതിരായ ‘ഭീകരവാദി’ പരാമര്‍ശം: ബി.ജെ.പി പരാതി നല്‍കി പിറ്റേന്ന് ഖാര്‍ഗെയ്ക്ക് തെര. കമ്മീഷന്‍ നോട്ടീസ്

  ന്യൂദല്‍ഹി: പ്രധാനമന്ത്രി നരേന്ദ്ര മോദിക്കെതിരായ ‘ഭീകരവാദി’ പരാമര്‍ശത്തില്‍ കോണ്‍ഗ്രസ് അധ്യക്ഷന്‍...

`கோவை தெற்கு தொகுதி தேர்தலை நிறுத்துங்கள்' – தர்ணாவில் இறங்கிய அதிமுக வேட்பாளர்!

கோவை தெற்கு சட்டமன்றத் தொகுதியில் நடைபெற்று வரும் அதீத பணப்பட்டுவாடாவைத் தடுக்கத்...

Storyboard : తమిళనాడు రాజకీయం ఎలా ఉంది..? టీవీకే తో విజయ్ ఏం చేయబోతున్నారు..?

తమిళనాడులో అధికార పార్టీ డీఎంకే.. జయలలిత రికార్డును సమం చేయాలని చూస్తోంది....

പ്രസ്ഥാനത്തിലെ പാഷാണം; ബി.ജെ.പി നേതാവിനെതിരെ തെരുവിലിറങ്ങി പ്രവര്‍ത്തകര്‍, കോലം കത്തിച്ചു

  കോഴിക്കോട്: വടകരയില്‍ നേതാവിനെതിരെ തെരുവിലിറങ്ങി ബി.ജെ.പി പ്രവര്‍ത്തകര്‍. കോഴിക്കോട് നോര്‍ത്ത്...