8
April, 2026

A News 365Times Venture

8
Wednesday
April, 2026

A News 365Times Venture

MYSORE: ನೀರಿನ ದರ ಏರಿಕೆ ವಿವಾದ – “ಅರ್ಧ ಪೈಸೆಗೆ ರಾಜಕೀಯ ಬೇಡ” ಎಂದು ಎಂ. ಲಕ್ಷ್ಮಣ್ ಕಿಡಿ

Date:

 

ಮೈಸೂರು, April.08,2026: ನಗರ ಪಾಲಿಕೆ ನೀರಿನ ದರ ಏರಿಕೆ ವಿಚಾರದಲ್ಲಿ ಅನಗತ್ಯ ರಾಜಕೀಯ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ನಾಯಕ M. Lakshman ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಒಂದು ಲೀಟರ್ ಬಾಟಲಿ ನೀರಿಗೆ ಜನರು ₹20 ಕೊಡುತ್ತಾರೆ. ಆದರೆ ಮನೆಗೆ ಬರುತ್ತಿರುವ ಟ್ರೀಟೆಡ್ ನೀರಿನ ವೆಚ್ಚ ಸಾವಿರ ಲೀಟರ್‌ಗೆ ಕೇವಲ ₹5 ಮಾತ್ರ. ಅಂದರೆ ಒಂದು ಲೀಟರ್‌ಗೆ ಅರ್ಧ ಪೈಸೆಯಷ್ಟೇ ವೆಚ್ಚ ಬರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಕೇವಲ 0.15 ಪೈಸೆ ಹೆಚ್ಚಳ ಮಾಡಿರುವುದನ್ನು ದೊಡ್ಡ ವಿಷಯವಾಗಿ ತೋರಿಸುವುದು ತಪ್ಪು ಎಂದು ಅವರು ಹೇಳಿದರು.

ಕಳೆದ 15 ವರ್ಷಗಳಿಂದ ನೀರಿನ ದರ ಹೆಚ್ಚಳ ಮಾಡಿರಲಿಲ್ಲ. ಇದೀಗ ಮಾಡಿದ ಏರಿಕೆಯಿಂದ ಕಾರ್ಪೋರೇಷನ್‌ಗೆ ಬರೋದು ಕೇವಲ ₹35 ಲಕ್ಷ ಮಾತ್ರ. ಆದರೆ ಇದನ್ನು ಶೇ.30ರಷ್ಟು ಏರಿಕೆ ಎಂದು ಹೇಳುವುದು ಸಂಪೂರ್ಣ ತಪ್ಪು ಮಾಹಿತಿ ಎಂದು ಸ್ಪಷ್ಟಪಡಿಸಿದರು.

ಟೋಲ್ ದರವನ್ನು ಪ್ರತಿವರ್ಷ ಹೆಚ್ಚಿಸಲಾಗುತ್ತದೆ. ಅದಕ್ಕೆ ವಿರೋಧವಾಗಿ ಯಾರು ಧ್ವನಿ ಎತ್ತುವುದಿಲ್ಲ. ಆದರೆ ನೀರಿನ ದರದಲ್ಲಿ ಅಲ್ಪ ಪ್ರಮಾಣದ ಏರಿಕೆಗೆ ಮಾತ್ರ ಪ್ರತಿಭಟನೆ ಮಾಡಲಾಗುತ್ತಿದೆ ಎಂದು ಅವರು ಟೀಕಿಸಿದರು.

ಬಿಜೆಪಿ ನಾಯಕರು ರೈತರ ಸಮಸ್ಯೆಗಳು, ತಂಬಾಕು ಬೆಳೆಗಾರರ ಕಷ್ಟಗಳ ಬಗ್ಗೆ ಮಾತಾಡುವುದಿಲ್ಲ. ಆದರೆ ಅರ್ಧ ಪೈಸೆ ಏರಿಕೆಗೆ ಮಾತ್ರ ಹೋರಾಟ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.

ಇನ್ನೂ, ಕೇಂದ್ರ ಸಚಿವ Piyush Goyal ಅವರನ್ನು ಭೇಟಿ ಮಾಡಿ ಫೋಟೋ ತೆಗೆಸಿಕೊಳ್ಳುವುದರಿಂದ ಯಾವುದೇ ಪ್ರಯೋಜನವಾಗಿಲ್ಲ. ಆ ಭೇಟಿಯ ಬಳಿಕವೂ ಪರಿಸ್ಥಿತಿ ಇನ್ನಷ್ಟು ಕೆಡುತ್ತಿದೆ. ಅವರು ಭೇಟಿ ವೇಳೆ ಏನು ಚರ್ಚಿಸಿದರು ಎಂಬುದೇ ಸ್ಪಷ್ಟವಾಗಿಲ್ಲ ಎಂದು ಜೆಡಿಎಸ್ ನಾಯಕರನ್ನೂ ಲಕ್ಷ್ಮಣ್ ಟೀಕಿಸಿದರು.

ಒಟ್ಟಿನಲ್ಲಿ, “ಜನರ ಗಮನ ಬೇರೆಡೆಗೆ ತಿರುಗಿಸಲು ನೀರಿನ ದರ ಏರಿಕೆ ವಿಷಯವನ್ನು ರಾಜಕೀಯವಾಗಿ ಬಳಸಲಾಗುತ್ತಿದೆ” ಎಂದು ಲಕ್ಷ್ಮಣ್ ಕಿಡಿಕಾರಿದರು.

Key words: Mysuru, Water Tariff Row, don’t politicize, a half-paisa hike, M. Lakshman

SUMMARY:

Mysuru Water Tariff Row: “Don’t politicize a half-paisa hike” — M. Lakshman

Mysuru: Congress leader M. Lakshman slammed the opposition for politicizing the recent water tariff hike.

He said people pay ₹20 for a litre of bottled water, while treated tap water costs just ₹5 per 1,000 litres — about half a paisa per litre. The current hike is only 0.15 paisa per litre, after 15 years without revision, bringing just ₹35 lakh in revenue.

Calling claims of a 30% hike “misleading,” he accused BJP leaders of ignoring real issues like farmers’ and tobacco growers’ distress, while protesting a minimal increase.

He also criticized JDS leaders for meeting Union Minister Piyush Goyal, saying the visit yielded no results.

#Mysuru #WaterTariff #KarnatakaPolitics

The post MYSORE: ನೀರಿನ ದರ ಏರಿಕೆ ವಿವಾದ – “ಅರ್ಧ ಪೈಸೆಗೆ ರಾಜಕೀಯ ಬೇಡ” ಎಂದು ಎಂ. ಲಕ್ಷ್ಮಣ್ ಕಿಡಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

స్టైలిష్ లుక్, స్ట్రాంగ్ బిల్డ్.. యూత్‌ టార్గెట్ గా OPPO F33 సిరీస్.. ఫీచర్స్ ఇవే..!

OPPO F33: ఒప్పో ఇండియా నుండి కొత్త F33 సిరీస్ స్మార్ట్‌ఫోన్‌ను...

ട്രക്കിങ്ങിനിടെ കാണാതായ ശരണ്യയുടെ അതിജീവന കഥ വ്യാജം; പരാതിയുമായി ബി.ജെ.പി, അന്വേഷണം വേണമെന്നുമാവശ്യം

  കുടക്: തടിയന്‍ഡമോളില്‍ ട്രക്കിങ്ങിനിടെ കാണാതായ മലയാളി യുവതി ജി.എസ്. ശരണ്യയ്‌ക്കെതിരെ...

'காத்திருந்து எலெக்சனுக்கு 30 நாளுக்கு முன்னாடி அவதூறு பரப்புறாங்க – நெல்லையில் விஜய் ஆவேசம்!

தவெக தலைவர் விஜய் இன்று திருநெல்வேலி, தூத்துக்குடி மாவட்டங்களுக்கு சுற்றுப்பயணம் மேற்கொண்டிருக்கிறார்....

YS Jagan: అమరావతి అవినీతి గని.. MAVIGUN ప్రణాళికే బెస్ట్‌..!

YS Jagan: కూటమి ప్రభుత్వంపై తీవ్రస్థాయిలో విమర్శలు గుప్పించారు ఆంధ్రప్రదేశ్‌ మాజీ...