14
April, 2026

A News 365Times Venture

14
Tuesday
April, 2026

A News 365Times Venture

ಇರಾನ್ ಗೆ ಕೊನೆಯ ಎಚ್ಚರಿಕೆ ನೀಡಿದ ಡೊನಾಲ್ಡ್  ಟ್ರಂಪ್

Date:

ವಾಷಿಂಗ್ಟನ್,ಏಪ್ರಿಲ್,7,2026 (www.justkannada.in):  ಇರಾನ್ ಮತ್ತು ಅಮೆರಿಕ ನಡುವಿನ ಯುದ್ದ ಮತ್ತಷ್ಟು ಉದ್ವಿಗ್ನಗೊಂಡಿದ್ದು ಇದೀಗ ಹಾರ್ಮುಜ್ ಜಲಸಂಧಿ ಮುಕ್ತಗೊಳಿಸಲು ಇರಾನ್ ಗೆ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್  ಕೊನೆಯ ಎಚ್ಚರಿಕೆ ನೀಡಿದ್ದಾರೆ.

ಇರಾನ್‌ನ ಪ್ರಮುಖ ಜಲಸಂಧಿಯಾದ ‘ಸ್ಟ್ರೈಟ್ ಆಫ್ ಹಾರ್ಮುಜ್’ ಅನ್ನು ಮುಕ್ತಗೊಳಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ್ದ ಗಡುವನ್ನು ಮಂಗಳವಾರದವರೆಗೆ ವಿಸ್ತರಿಸಿದ್ದಾರೆ.ಆದರೆ, ಇದೇ ವೇಳೆ ಇರಾನ್‌ನ ಇಂಧನ ಕೇಂದ್ರಗಳು ಮತ್ತು ವಿದ್ಯುತ್ ಸ್ಥಾವರಗಳ ಮೇಲೆ ಭೀಕರ ದಾಳಿ ನಡೆಸುವುದಾಗಿ ಅವರು ತೀವ್ರ ಎಚ್ಚರಿಕೆ ನೀಡಿದ್ದಾರೆ.

ಇರಾನ್ ಜೊತೆ ಸಂಧಾನ ಮಾತುಕತೆಗಳು ನಡೆಯುತ್ತಿವೆ ಎಂದು ಟ್ರಂಪ್ ಹೇಳಿಕೊಂಡಿದ್ದಾರೆ. ಪಾಕಿಸ್ತಾನ, ಟರ್ಕಿ ಮತ್ತು ಈಜಿಪ್ಟ್ ದೇಶಗಳು ಮಧ್ಯಸ್ಥಿಕೆ ವಹಿಸುತ್ತಿದ್ದು, ಸಂದೇಶಗಳ ಮೂಲಕ ಮಾತುಕತೆ ಸಾಗಿದೆ. “ಒಪ್ಪಂದಕ್ಕೆ ಬರಲು ಉತ್ತಮ ಅವಕಾಶವಿದೆ. ಒಂದು ವೇಳೆ  ಇರಾನ್ ಒಪ್ಪಂದ ಮಾಡಿಕೊಳ್ಳದಿದ್ದರೆ, ನಾನು ಅಲ್ಲಿನ ಎಲ್ಲವನ್ನೂ ಉಡಾಯಿಸುತ್ತೇನೆ ಎಂದು ಟ್ರಂಪ್ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಗುಡುಗಿದ್ದಾರೆ.

ಟ್ರೂತ್ ಸೋಷಿಯಲ್ ನಲ್ಲಿ ಪೋಸ್ಟ್ ಮಾಡಿರುವ ಡೊನಾಲ್ಡ್ ಟ್ರಂಪ್  ಇರಾನ್ ನ ಇಡೀ ನಾಗರಿಕತೆ ಇಂದು ರಾತ್ರಿ ಸಾಯುತ್ತದೆ. ಇರಾಣ್ ನಲ್ಲಿ ಇಂದು ರಾತ್ರಿಯೊಳಗೆ ಎಲ್ಲರೂ ಹತ್ಯೆಯಾಗುತ್ತಾರೆ ಇರಾನ್ ನಾಗರಿಕತೆಯನ್ನ ಇಂದೇ ಇಲ್ಲವಾಗಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

Key words: Donald Trump, final warning, Iran

The post ಇರಾನ್ ಗೆ ಕೊನೆಯ ಎಚ್ಚರಿಕೆ ನೀಡಿದ ಡೊನಾಲ್ಡ್  ಟ್ರಂಪ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

നിങ്ങള്‍ മുസ്‌ലിങ്ങളെ കന്നുകാലികളെ പോലെയാണ് പരിഗണിക്കുന്നത്; മമതയ്‌ക്കെതിരെ ഒവൈസി

കൊല്‍ക്കത്ത: പശ്ചിമബംഗാള്‍ മുഖ്യമന്ത്രി മമതാ ബാനര്‍ജിക്കെതിരെ രൂക്ഷ വിമര്‍ശനവുമായി എ.ഐ.എം.ഐ.എം അധ്യക്ഷന്‍...

Vikram : విక్రమ్ – శంకర్ మళ్ళీ కలుస్తున్నారు ఈసారి అదిరిపోయే కమర్షియల్ ప్లాన్!

2016లో వచ్చిన ఇంకొక్కడుతో విక్రమ్ , ఆనంద్ శంకర్ కాంబినేషన్ సూపర్...

ಮೈಸೂರು: ಮೂವರು ಸರಗಳ್ಳರ ಬಂಧನ: 125 ಗ್ರಾಂ ಚಿನ್ನಾಭರಣ ವಶಕ್ಕೆ

ಮೈಸೂರು,ಏಪ್ರಿಲ್,14,2026 (www.justkannada.in): ಮೈಸೂರಿನ ಲಷ್ಕರ್ ಪೊಲೀಸ್ ಠಾಣೆಯ ಪೊಲೀಸರು ಕಾರ್ಯಾಚರಣೆ...