19
February, 2026

A News 365Times Venture

19
Thursday
February, 2026

A News 365Times Venture

ಸಾಮಾಜಿಕ ನ್ಯಾಯದ ಕನ್ನಡಿಯಲ್ಲಿ ಸತೀಶ್ ಜಾರಕಿಹೊಳಿ ಅವರ ಬಿಂಬಗಳಿವೆ- ಕೆ.ವಿ.ಪ್ರಭಾಕರ್

Date:

ಬೆಂಗಳೂರು ಫೆಬ್ರವರಿ,19,2026 (www.justkannada.in): ಸಾಮಾಜಿಕ ನ್ಯಾಯದ ಕನ್ನಡಿಯಲ್ಲಿ ಸತೀಶ್ ಜಾರಕಿಹೊಳಿ ಅವರ ಬಿಂಬಗಳು ಸ್ಪಷ್ಟವಾಗಿ ಕಾಣಿಸುತ್ತಿವೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ‌ಸಲಹೆಗಾರ ಕೆ.ವಿ.ಪ್ರಭಾಕರ್ ಅಭಿಪ್ರಾಯಪಟ್ಟರು.

ಸತೀಶ್ ಜಾರಕಿಹೊಳಿ ಅವರಿಗೆ ಪ್ರೆಸ್ ಕ್ಲಬ್ ನೀಡಿದ  ವರ್ಷದ ವ್ಯಕ್ತಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಕೆ.ವಿ ಪ್ರಭಾಕರ್,  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಂತಯೇ ಸಾಮಾಜಿಕ ನ್ಯಾಯದ ಬಗ್ಗೆ ಸ್ಪಷ್ಟತೆ ಮತ್ತು ಖಚಿತತೆ ಸತೀಶ್ ಜಾರಕಿಹೊಳಿಯವರಿಗೆ ಇರುವ ಕಾರಣದಿಂದಲೇ ಸಾಮಾಜಿಕ ನ್ಯಾಯದ ಕನ್ನಡಿಯಲ್ಲಿ  ಜಾರಕಿಹೊಳಿಯವರನ್ನು ನಾವು ಸ್ಪಷ್ಟವಾಗಿ ಕಾಣಬಹುದಾಗಿದೆ.  ರಾಜ್ಯದಲ್ಲಿ ಸಾಮಾಜಿಕ ನ್ಯಾಯದ ತೇರನ್ನು ಎಳೆಯುತ್ತಿರುವ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೈಗಳ ಪಕ್ಕದಲ್ಲೇ ಜಾರಕಿಹೊಳಿಯವರ ಕೈಗಳಿವೆ ಎಂದು ನುಡಿದರು.

ಜಾರಕಿಹೊಳಿಯವರು ಹೆಚ್ಚು ಮಾತಾಡುವುದಿಲ್ಲ, ಐವತ್ತು ಮಂದಿ ಸೇರಿರುವ ಸಭೆಯಾಗಲಿ, ಐದು ಲಕ್ಷ ಮಂದಿ ಸೇರಿರುವ ಸಭೆಯಾಗಲಿ ಐದೇ ನಿಮಿಷದಲ್ಲಿ ಮಾತು ಮುಗಿಸುತ್ತಾರೆ ಎಂದು ಬಹಳ ಮಂದಿ ನನಗೆ ಹೇಳಿದ್ದಾರೆ. ಅವರಿಗೆಲ್ಲಾ ನಾನು ಒಂದೇ ಉತ್ತರ ಕೊಡುತ್ತೇನೆ, “ದಡದಲ್ಲಿ ನಿಂತು ನೋಡುವಾಗ ಸಮುದ್ರ ಬಹಳ ಪ್ರಶಾಂತವಾಗಿ ಕಾಣುತ್ತದೆ. ಆದರೆ ಸಮುದ್ರದ ರಭಸ ಇರುವುದು ಅದರ ಆಳದಲ್ಲಿ. ಜಾರಕಿಹೊಳಿಯವರ ಮೌನದ ಆಳದಲ್ಲಿ ಅವರ ರಭಸ ಇದೆ. ಆ ರಭಸ ಅವರ ಕೆಲಸದಲ್ಲಿ ಕಾಣುತ್ತದೆ ಎಂದರು.

ಯಾವತ್ತು Easy chair politics ಗೆ ಒರಗಿಕೊಳ್ಳದ ಸತೀಶ್ ಅವರು ಬಹಳ ಕಷ್ಟವಾದ ಹಾದಿಯನ್ನೇ ಆರಿಸಿಕೊಂಡು ಅದರಲ್ಲಿ ಸಕ್ಸಸ್ ಆಗುತ್ತಾರೆ. ಇದು ಸ್ಪಷ್ಟವಾಗಿ ಮತ್ತೊಮ್ಮೆ ಗೋಚರಿಸಿದ್ದು ಶಿಗ್ಗಾಂವ್ ಉಪ ಚುನಾವಣೆಯಲ್ಲಿ. ಯಾವ ಮಾಧ್ಯಮದವರೂ ಕಲ್ಪಿಸಿಕೊಳ್ಳದ ರೀತಿಯಲ್ಲಿ ಹಲವು ಸವಾಲುಗಳ ನಡುವೆಯೂ ಕಾಂಗ್ರೆಸ್ ಅನ್ನು ಗೆಲ್ಲಿಸಿಕೊಂಡೇ ಬಂದರು. ಇದಕ್ಕಾಗಿ ಅವರು ಮಾಡಿದ ಕೆಲಸವನ್ನು ನಾನು ಬಹಳ ಹತ್ತಿರದಿಂದ ಗಮನಿಸಿದ್ದೇನೆ. ಮಾನವ ಬಂಧುತ್ವ ವೇದಿಕೆಯ ಕಾರ್ಯಕರ್ತರು ಹೇಗೆ ಇಡೀ ಕ್ಷೇತ್ರದ ತುಂಬ ಹರಡಿ ಹೋಗಿದ್ದರು. ಅವರ ಮೂಲಕ ಹೇಗೆ ಕ್ಷೇತ್ರದ ರಾಜಕೀಯ ಚಿತ್ರಣವನ್ನು ಬದಲಿಸಿದರು ಎನ್ನುವುದು ಪ್ರತಿಯೊಬ್ಬ ಪತ್ರಕರ್ತರು ಮತ್ತು ಸಾಮಾಜಿಕ ಕಾರ್ಯಕರ್ತರಿಗೂ ಪಾಠ ಆಗುತ್ತದೆ ಎಂದು ವಿವರಿಸಿದರು.

ಸೈದ್ಧಾಂತಿಕ ರಾಜಕಾರಣ ಅಳಿವಿನ‌ ಅಂಚಿನಲ್ಲಿರುವ ಈ ಕಾಲಘಟ್ಟದಲ್ಲಿ ” ಮಾನವ ಬಂಧುತ್ವ ವೇದಿಕೆ” ಮೂಲಕ ಇಡೀ ರಾಜ್ಯದಲ್ಲಿ ಸೈದ್ಧಾಂತಿಕ‌ ಪಡೆಯನ್ನು ಕಟ್ಟುತ್ತಿದ್ದಾರೆ. ಇವತ್ತು ಅಭಿಮಾನಿ ಪಡೆಯನ್ನು ಕಟ್ಟುವುದು ಬಹಳ ಸಲೀಸು. ಧಾರವಾಹಿ ನಟರೂ ಅಭಿಮಾನಿ ಪಡೆ ಕಟ್ಟುತ್ತಾರೆ. ಆದರೆ ಸೈದ್ಧಾಂತಿಕ‌ ಪಡೆ ಕಟ್ಟವುದು ಬಹಳ ದೊಡ್ಡ ಸವಾಲು. ಅಧಿಕಾರ-ಹಣ-ಜಾತಿಯ ಬಲ ಇದ್ದರೆ ರಾತ್ರಿ ಬೆಳಗಾಗುವುದರೊಳಗೆ ಅಭಿಮಾನಿಗಳು ಸಾಲುಗಟ್ಟುತ್ತಾರೆ. ಆದರೆ ಸೈದ್ದಾಂತಿಕ ಪಡೆ ಕಟ್ಟಲು ನಿತ್ಯ ಕಸರತ್ತು ಮಾಡಬೇಕಾಗುತ್ತದೆ. ಈ ಕಸರತ್ತನ್ನು ಮಾನವ ಬಂಧುತ್ವ ವೇದಿಕೆ ಮೂಲಕ ರಾಜ್ಯದ ತುಂಬ ಮಾಡುತ್ತಿದ್ದಾರೆ. ಈ ಮಾನವ ಬಂಧುತ್ವ ವೇದಿಕೆ ಕಾಂಗ್ರೆಸ್ಸಿಗೆ ಸೈದ್ಧಾಂತಿಕವಾಗಿ ನೀರು ಗೊಬ್ಬರ ಹಾಕುತ್ತಿದೆ ಎಂದು ವಿವರಿಸಿದರು.

ಜಾರಕಿಹೊಳಿ ಅವರಲ್ಲದೆ ಬೇರೆ ಯಾರಾದರೂ ಲೋಕೋಪಯೋಗಿ ಇಲಾಖೆ ಸಚಿವರಾಗಿದಿದ್ದರೆ ಇಷ್ಟೊತ್ತಿಗೆ ಹೈರಾಣಾಗಿಬಿಡುತ್ತಿದ್ದರು. ಹಿಂದಿನ ಸರ್ಕಾರ ಮಾಡಿಟ್ಟು ಹೋಗಿರುವ ಅನಾಹುತಗಳು ಮತ್ತು ವಿಪರೀತ ಆರ್ಥಿಕ ಹೊರೆಯ ಬಳಿಕವೂ ಸಮತೋಲನದಿಂದ  ಖಾತೆಯನ್ನು ನಿರ್ವಹಿಸುತ್ತಿದ್ದಾರೆ. ಅದಕ್ಕೇ ನಾನು ಆಗಲೇ ಹೇಳಿದ್ದು, ಸತೀಶ್ ಅವರು ಕಷ್ಟವಾದ ಸವಾಲುಗಳಿಗೇ ಕೈ ಹಾಕಿ ಅದರಲ್ಲಿ ಸಕ್ಸಸ್ ಆಗುತ್ತಾರೆ.  ಬೆಳಗಾವಿ ರಾಜಕಾರಣದಲ್ಲಿ ಸಕ್ಸಸ್ ಆದವರು ರಾಜ್ಯ ರಾಜಕಾರಣದಲ್ಲಿ ಸಕ್ಸಸ್ ಆಗುವುದರಲ್ಲಿ ಅನುಮಾನಗಳೇ ಇಲ್ಲ. ಹಾಗೆಯೇ ಬಹಳ ದೊಡ್ಡ ಉದ್ಯಮಿಯಾಗಿ ಸಕ್ಸಸ್ ಆಗಿದ್ದರೂ, ಉದ್ಯಮ ಮತ್ತು ರಾಜಕಾರಣವನ್ನು ಪರಸ್ಪರ ಬೆರೆಸದೆ ಸ್ಪಷ್ಟ ಅಂತರ ಕಾಯ್ದುಕೊಳ್ಳುವಲ್ಲೂ ಸಕ್ಸಸ್ ಆಗಿದ್ದಾರೆ. ಈ ಎಲ್ಲಾ ಕಾರಣಗಳಿಂದ ಬೆಂಗಳೂರು ಪ್ರೆಸ್ ಕ್ಲಬ್ , ವರ್ಷದ ವ್ಯಕ್ತಿ ಪ್ರಶಸ್ತಿಗೆ ಸತೀಶ್ ಜಾರಕಿಹೊಳಿ ಅವರನ್ನು ಆಯ್ಕೆ ಮಾಡಿರುವುದು ಅತ್ಯಂತ ಸೂಕ್ತವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಹಿರಿಯ ಸಮಾಜವಾದಿ ಚಿಂತಕರೂ, ಮಾಜಿ ಅಡ್ವೊಕೇಟ್ ಜನರಲ್ ಪ್ರೊ.ರವಿ ವರ್ಮಕುಮಾರ್ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಶಾಸಕ ರಿಜ್ವಾನ್ ಅರ್ಷದ್ ಅವರು, ಪ್ರೆಸ್ ಕ್ಲಬ್ ಅಧ್ಯಕ್ಷರಾದ ಶ್ರೀಧರ್ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.

Key words: Satish Jarkiholi, mirror,social justice, K.V. Prabhakar

The post ಸಾಮಾಜಿಕ ನ್ಯಾಯದ ಕನ್ನಡಿಯಲ್ಲಿ ಸತೀಶ್ ಜಾರಕಿಹೊಳಿ ಅವರ ಬಿಂಬಗಳಿವೆ- ಕೆ.ವಿ.ಪ್ರಭಾಕರ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

‘കേരള സ്റ്റോറി’ക്കെതിരെ ഹരജി; സെന്‍സര്‍ ബോര്‍ഡിന് നോട്ടീസയച്ച് ഹൈക്കോടതി

കൊച്ചി: കേരളത്തിനെതിരായ പ്രൊപ്പഗണ്ട സിനിമ ‘ദി കേരള സ്റ്റോറി 2’വിനെതിരെ ഹരജി....

"திமுக கூட்டணியில் தேமுதிக இணைந்தது மக்களின் மனநிலைக்கு நேர்மாறாக உள்ளது!" – ஜி.கே.வாசன்

தமிழ் மாநில காங்கிரஸ் சார்பில் திருச்சி, தஞ்சை, புதுக்கோட்டை, திருவாரூர், அரியலூர்,...

Supreme Court: పంచుకుంటూ పోతే మిగిలేది ఏముండదు.. ఉచిత పథకాలపై సుప్రీంకోర్టు ఆక్షేపణ

ఎన్నికల ముందు ఉచిత పథకాలపై దేశ సర్వోన్నత న్యాయస్థానం తీవ్ర ఆగ్రహం...

ಬಿಜೆಪಿ ಬಂದ್ರೆ ಲಿಂಗಾಯತರು, ಜೆಡಿಎಸ್ ಬಂದ್ರೆ ಒಕ್ಕಲಿಗರು: ಮತ್ತೆ ದಲಿತ ಸಿಎಂ ಪ್ರಸ್ತಾಪಿಸಿದ ಕೆ.ಎನ್ ರಾಜಣ್ಣ

ತುಮಕೂರು,ಫೆಬ್ರವರಿ,19,2026 (www.justkannada.in): ಮಾಜಿ ಸಚಿವ ಕೆ.ಎನ್ ರಾಜಣ್ಣ ಮತ್ತೆ ದಲಿತ...