ತುಮಕೂರು,ಫೆಬ್ರವರಿ,19,2026 (www.justkannada.in): ಮಾಜಿ ಸಚಿವ ಕೆ.ಎನ್ ರಾಜಣ್ಣ ಮತ್ತೆ ದಲಿತ ಸಿಎಂ ಬಗ್ಗೆ ಪ್ರಸ್ತಾಪಿಸಿದ್ದಾರೆ.
ಈ ಕುರಿತು ಮಾತನಾಡಿರುವ ಮಾಜಿ ಸಚಿವ ಕೆ.ಎನ್ ರಾಜಣ್ಣ, ಬಿಜೆಪಿ ಬಂದರೆ ಲಿಂಗಾಯತರು ಮುಖ್ಯಮಂತ್ರಿ ಅಂದ್ರೆ, ಜೆಡಿಎಸ್ ಬಂದರೆ ಒಕ್ಕಲಿಗರು ಸಿಎಂ ಅಂದರೆ ಬೇರೆ ಸಮುದಾಯಕ್ಕೆ ಎಲ್ಲಿ ನ್ಯಾಯ ಕೊಟ್ಟಂಗೆ ಆಗುತ್ತೆ? ದಲಿತರು ಯಾಕೆ ಸಿಎಂ ಆಗಬಾರದು? ಅಲ್ಪಸಂಖ್ಯಾತರು ಯಾಕೆ ಸಿಎಂ ಆಗಬಾರದು? ಎಂದು ಪ್ರಶ್ನಿಸಿದ್ದಾರೆ.
ರಾಜ್ಯದ ವಾಸ್ತವಾಂಶ ಹೇಳಿಬಿಟ್ರೆ ಬಹಳ ಜನಕ್ಕೆ ಅದು ಹಿಡಿಸಲ್ಲ. ಕಾಂಗ್ರೆಸ್ ಎಲ್ಲಾ ಸಮುದಾಯಕ್ಕೂ ನ್ಯಾಯ ಕೊಟ್ಟಿದೆ. ದೇವರಾಜ ಅರಸು ಸಿಎಂ ಆದರು. ಎಲ್ಲಾ ಶಾಸಕರು ಒಲವು ತೋರಿಸಿದ್ದಕ್ಕೆ ಸಿಎಂ ಆದರು. ಅವರ ಜಾತಿಯ ಇನ್ನೊಬ್ಬ ಶಾಸಕ ಇರಲಿಲ್ಲ. ಹಾಗೆಯೇ ಧರಂ ಸಿಂಗ್ ಸಿಎಂ ಆದರು. ಅವರ ಜಾತಿಯ ಇನ್ನೊಬ್ಬರು ಶಾಸಕರು ಇರಲಿಲ್ಲ. ಎಲ್ಲಾ ಸಮುದಾಯಗಳಿಗೆ ಕಾಂಗ್ರೆಸ್ ಒಲವು ತೋರಿಸಿದೆ ಎಂದು ಕೆ.ಎನ್ ರಾಜಣ್ಣ ತಿಳಿಸಿದರು.
Key words: K.N. Rajanna, Dalit CM, again
The post ಬಿಜೆಪಿ ಬಂದ್ರೆ ಲಿಂಗಾಯತರು, ಜೆಡಿಎಸ್ ಬಂದ್ರೆ ಒಕ್ಕಲಿಗರು: ಮತ್ತೆ ದಲಿತ ಸಿಎಂ ಪ್ರಸ್ತಾಪಿಸಿದ ಕೆ.ಎನ್ ರಾಜಣ್ಣ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.





