4
May, 2026

A News 365Times Venture

4
Monday
May, 2026

A News 365Times Venture

ಡೂಪ್ಲಿನ್ ಕಾಂಪ್ಲೆಕ್ಸ್ ವರ್ತಕರನ್ನು ಖಾಲಿ ಮಾಡಿಸಿ ಆಸ್ತಿ ವಶಕ್ಕೆ ಪಡೆಯಿರಿ: MDA ಪರ ಹೈಕೋರ್ಟ್ ತೀರ್ಪು

Date:

ಮೈಸೂರು,ಫೆಬ್ರವರಿ,17,2026 (www.justkannda.in): ಮೈಸೂರಿನ ಹೃದಯಭಾಗದಲ್ಲಿರುವ “ಡೂಪ್ಲಿನ್ ಕಾಂಪ್ಲೆಕ್ಸ್”  ನ ವರ್ತಕರಿಗೆ ಹೈಕೋರ್ಟ್ ಬಿಸಿ ಮುಟ್ಟಿಸಿದೆ. ಅನಧಿಕೃತವಾಗಿ ಸ್ವಾಧೀನದಲ್ಲಿರುವ ವರ್ತಕರನ್ನ ಖಾಲಿ ಮಾಡಿಸಿ ಆಸ್ತಿಯನ್ನ ತಮ್ಮ ವಶಕ್ಕೆ ಪಡೆಯುವಂತೆ ಹೈಕೋರ್ಟ್ ತೀರ್ಪು ನೀಡಿದೆ.

ಮೈಸೂರಿನ ಡಿ ದೇವರಾಜ ಅರಸ್ ರಸ್ತೆ ಹಾಗೂ ಶಿವರಾಂಪೇಟೆಯ ವಿನೋಬಾ ರಸ್ತೆ ಮತ್ತು ದೇವರಾಜ ಮಾರುಕಟ್ಟೆಯ ಚಿಕ್ಕಗಡಿಯಾರ ಮುಂಭಾಗವಿರುವ “ಡೂಪ್ಲಿನ್ ಕಾಂಪ್ಲೆಕ್ಸ್ ” ಅಂದಿನ ಮೈಸೂರು ನಗರಾಭಿವೃದ್ದಿ ಪ್ರಾಧಿಕಾರ ನಿರ್ಮಿಸಿದೆ.

ಸುಮಾರು 40 ಕ್ಕೂ ಹೆಚ್ಚು ಮಳಿಗೆಗಳಿರುವ ವಾಣಿಜ್ಯ ಸಂಕೀರ್ಣ ಇದಾಗಿದೆ. ಬಹುತೇಕ ಎಲ್ಲಾ ಮಳಿಗೆಗಳಲ್ಲಿ ಸದ್ಯ ವರ್ತಕರು ಸ್ವಾಧೀನದಲ್ಲಿದ್ದಾರೆ. ಬಾಡಿಗೆ ಹಾಗೂ ಮಾಲೀಕತ್ವದ ವಿಚಾರದಲ್ಲಿ ವರ್ತಕರು ಹಾಗೂ ಅಂದಿನ ಮುಡಾ ನಡುವೆ ಕಾನೂನು ಹೋರಾಟ ನಡೆಯುತ್ತಿದೆ. ವರ್ತಕರನ್ನ ಖಾಲಿ ಮಾಡಿಸುವ ಉದ್ದೇಶದಿಂದ ಪ್ರಾಧಿಕಾರ ನ್ಯಾಯಾಲಯದ ಮೊರೆ ಹೋಗಿ ಹಲವು ವರ್ಷಗಳೇ ಉರುಳಿದೆ.

ತಾವೇ ಮಾಲೀಕರೆಂಬಂತೆ ವರ್ತಿಸಿದ ವರ್ತಕರು ಮುಡಾ ನಿರ್ಧಾರಕ್ಕೆ ಸೆಡ್ಡು ಹೊಡೆದು ಕಾನೂನು ಹೋರಾಟ ನಡೆಸುತ್ತಿದ್ದು ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿತ್ತು. ಎರಡೂ ಬದಿಯಿಂದ ವಾದ ಪ್ರತಿವಾದಗಳನ್ನ ಆಲಿಸಿದ ನ್ಯಾಯಾಲಯ ಸದ್ಯ ಮೈಸೂರು ಅಭಿವೃದ್ದಿ ಪ್ರಾಧಿಕಾರದ ಪರ ಬ್ಯಾಟ್ ಬೀಸಿದೆ.

ಅನಧಿಕೃತವಾಗಿ ಸ್ವಾಧೀನದಲ್ಲಿರುವ ವರ್ತಕರನ್ನ ಮೂರು ತಿಂಗಳ ಒಳಗಾಗಿ ತೆರುವುಗೊಳಿಸಿ ತಮ್ಮ ಸುಪರ್ಧಿಗೆ ಪಡೆಯುವಂತೆ ತೀರ್ಪು ನೀಡಿದೆ. ಸುಮಾರು 250 ಕೋಟಿ ರೂ. ಮೌಲ್ಯದ ಆಸ್ತಿ ಎಂಡಿಎ ವಶಕ್ಕೆ ಪಡೆಯಬೇಕಿದೆ. ಹಲವಾರು ವರ್ಷಗಳ ಹೋರಾಟಕ್ಕೆ ಸಂದ  ಜಯ ಇದಾಗಿದ್ದು,  ಎಂಡಿಎ  ಆಯುಕ್ತ ರಕ್ಷಿತ್ ರವರು ಈ ಕೂಡಲೇ ಆಸ್ತಿ ವಶಕ್ಕೆ ಅಗತ್ಯ ಕ್ರಮ ಜರುಗಿಸಲಿ. ಎಂಡಿಎ ಪರ ವಾದ ಮಂಡಿಸಿದ ಹೈಕೋರ್ಟ್ ವಕೀಲರು ಪ್ರಾಧಿಕಾರದ ಆಯುಕ್ತರಿಗೆ ಕ್ರಮ ವಹಿಸಿ ಎಂದು  ಪತ್ರ ಬರೆದಿದ್ದಾರೆ.

Key words: Mysore, Dooplin Complex, property, High Court, MDA

The post ಡೂಪ್ಲಿನ್ ಕಾಂಪ್ಲೆಕ್ಸ್ ವರ್ತಕರನ್ನು ಖಾಲಿ ಮಾಡಿಸಿ ಆಸ್ತಿ ವಶಕ್ಕೆ ಪಡೆಯಿರಿ: MDA ಪರ ಹೈಕೋರ್ಟ್ ತೀರ್ಪು appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ഇടതിനെ കൈവിട്ട് കാസര്‍ഗോഡ് ജില്ലയും; വിജയിച്ചുകയറാനായത് ഒരേയൊരു മണ്ഡലത്തില്‍ 

കാസര്‍കോട്: 2026 ലെ കേരള നിയമസഭാ തെരഞ്ഞെടുപ്പിന്റെ വോട്ടെണ്ണല്‍ ഫലങ്ങള്‍ പുറത്തുവരുമ്പോള്‍,...

கொளத்தூர்: முதல்வர் தொகுதியிலும் பறந்த `விசில்' – ஸ்டாலினை வீழ்த்திய வி.எஸ்.பாபு – எப்படி?

தமிழக அரசியல் வரலாற்றில் 2026 சட்டமன்றத் தேர்தல் முடிவுகள் எவரும் எதிர்பாராத...

Kavitha: పాత రాజకీయాలకు విసిగిపోయారు.. తెలంగాణలో కూడా మార్పు తథ్యం: కవిత

తమిళనాడు ఎన్నికల ఫలితాలు దేశ రాజకీయాల్లో కొత్త చర్చకు దారితీసిన వేళ,...

ಕೆ.ಸಿ ರೆಡ್ಡಿ ಅವರು ಒಬ್ಬ ಸಮರ್ಥ, ಪ್ರಾಮಾಣಿಕ  ಆಡಳಿತಗಾರರಾಗಿದ್ದರು:ಸಿಎಂ  ಸಿದ್ದರಾಮಯ್ಯ

ಬೆಂಗಳೂರು, ಮೇ,04,2026 (www.justkannada.in):  ಮಾಜಿ ಮುಖ್ಯಮಂತ್ರಿ ದಿವಂಗತ ಕೆ.ಸಿ ರೆಡ್ಡಿಯವರು...