25
August, 2026

A News 365Times Venture

25
Tuesday
August, 2026

A News 365Times Venture

ರಾಜ್ಯ ಸರ್ಕಾರಕ್ಕೆ ಸಾವಿರ ದಿನ: ಫೆ.14 ರಂದು ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ- ಸಚಿವ ಕೃಷ್ಣಭೈರೇಗೌಡ

Date:

ಬೆಂಗಳೂರು,ಫೆಬ್ರವರಿ, 10,2026 (www.justkannada.in):  ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು ಒಂದು ಸಾವಿರ ದಿನ ಪೂರೈಸುತ್ತಿದ್ದು, ಈ ಹಿನ್ನೆಲೆಯಲ್ಲಿ ಫೆಬ್ರವರಿ 14 ರಂದು ಹಾವೇರಿಯಲ್ಲಿ ಹಕ್ಕುಪತ್ರ ವಿತರಿಸುತ್ತೇವೆ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ತಿಳಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಕೃಷ್ಣಭೈರೇಗೌಡ, ಸಮಾವೇಶದಲ್ಲಿ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸುತ್ತೇವೆ.  ನಾವೇನು ಸರ್ಕಾರದ ಸಾವಿರ ದಿನದ ಸಂಭ್ರಮ ಮಾಡುತ್ತಿಲ್ಲ. ಬದಲಾಗಿ ಜನರ ಕೆಲಸವನ್ನು ಮಾಡುತ್ತಿದ್ದೇವೆ.  ನಮ್ಮ ಸರ್ಕಾರ ಬಂದ ಮೇಲೆ 2.20 ಲಕ್ಷ ಹಕ್ಕುಪತ್ರ ಕೊಟ್ಟಿದ್ದೇವೆ.  ಹಕ್ಕು ಪತ್ರ ಅಂದರೆ ಕೇವಲ ಪೇಪರ್ ಅಲ್ಲ.  ಇಸ್ವತ್ತು ಕೊಡಬಹುದಾದ ಗಣಕೀಕೃತ ದಾಖಲೆ ಇರಲಿದೆ.  ನಕಲು ಮಾಡಲು ಆಗದ ಹಕ್ಕುಪತ್ರ ನಾವು ಕೊಡಿತ್ತಿದ್ದೇವೆ.  ಹಕ್ಕುಪತ್ರ ಜತೆಗೆ ಉಪನೋಂದಣಿ ಕಚೇರಿಯಲ್ಲಿ ರಿಜಿಸ್ಟರ್ ಮಾಡಲಾಗುತ್ತದೆ ಎಂದರು.

ಸಂಪೂರ್ಣ ಹಕ್ಕನ್ನು ಫಲಾನುಭವಿಗಳಿಗೆ ವರ್ಗಾಯಿಸುತ್ತಿದ್ದೇವೆ. ಗುಡಿಸಲುಗಳಿಗೂ ನಮ್ಮ ಸರ್ಕಾರ ಹಕ್ಕುಪತ್ರ ಕೊಡಲಿದೆ.  ದಾಖಲೆಗಳಿಲ್ಲದ ಹಳ್ಳಿಗಳಲ್ಲಿ ವಾಸಿಸುವವರಿಗೆ ದರಖಾಸ್ತು ಬಗರ್ ಹುಕುಂ ಜಮೀನುಗಳಿಗೆ ದಾಖಲೆ ಇರಲಿಲ್ಲ, ಭೂ ಮಾಲೀಕತ್ವದ ವಿಚಾರವಾಗಿ ನಮ್ಮ ಸರ್ಕಾರ ಸ್ಪಷ್ಟತೆ ನೀಡಿದೆ.  ರಾಜ್ಯದಲ್ಲಿ 49 ಲಕ್ಷ ಜಮೀನುಗಳು ಮೃತರ ಹೆಸರಿನಲ್ಲಿವೆ. ಸಂಬಂಧಪಟ್ಟವರ ಹೆಸರಿಗೆ ಜಮೀನು ಮಾಡಿಕೊಡುವ ಕೆಲಸ ಮಾಡುತ್ತೇವೆ ಎಂದು ಸಚಿವ ಕೃಷ್ಣಭೈರೇಗೌಡ ತಿಳಿಸಿದರು.

Key words:  thousand days, state government, Minister, Krishna Bhairegowda

The post ರಾಜ್ಯ ಸರ್ಕಾರಕ್ಕೆ ಸಾವಿರ ದಿನ: ಫೆ.14 ರಂದು ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ- ಸಚಿವ ಕೃಷ್ಣಭೈರೇಗೌಡ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ಕಾವೇರಿ ವಿಚಾರದಲ್ಲಿ ರಾಜ್ಯಕ್ಕೆ ಮತ್ತೆ ಹಿನ್ನಡೆ: CWRC ಆದೇಶ ಎತ್ತಿಹಿಡಿದ CWMA

ನವದೆಹಲಿ, ಆಗಸ್ಟ್, 25,2026 (www.justkannada.in):  ಕಾವೇರಿ ನದಿ ನೀರು ವಿವಾದಕ್ಕೆ...

ഗസയില്‍ ഇസ്രഈല്‍ സൈന്യം കൊലപ്പെടുത്തിയത് 21,500 കുട്ടികളെ; കണക്കുകള്‍ പുറത്തുവിട്ട് മീഡിയ ഓഫീസ്

ഗസസിറ്റി: 2023 ഒക്ടോബറിന് ശേഷം ഗസയില്‍ ഇസ്രഈല്‍ സൈന്യം 21,500 കുട്ടികളെ...

'அதானிக்காக பரந்தூரை காலி செய்ய வேண்டாமென ஸ்டாலினிடம் வலியுறுத்தினோம்… ஆனால்!'- அமைச்சர் வன்னிஅரசு

நேற்று சட்டமன்றத்தில் பேசிய முதல்வர் விஜய் '110' விதியின் கீழ் பரந்தூர்...

Kiss Car: బాయ్‌ ఫ్రెండ్‌ కారుకు 3,400 ముద్దులు.. షాకిచ్చిన పోలీసులు

ప్రేమికుల మధ్య ఉండే సంబంధాన్ని అమ్మాయి-అబ్బాయిలు బహుమతుల ద్వారా వ్యక్తపరుచుకుంటారు. ఒకరికొకరు...