22
February, 2026

A News 365Times Venture

22
Sunday
February, 2026

A News 365Times Venture

ಹೆಚ್ ಡಿಡಿ ಭಾವನಾತ್ಮಕ ಮಾತು: ನೀರಾವರಿ ಯೋಜನೆಗಳನ್ನ ಜಾರಿ ಮಾಡಿಸಿದ್ರೆ ಸಂತಸ-ಶಾಸಕ ಶಿವಲಿಂಗೇಗೌಡ

Date:

ಬೆಂಗಳೂರು,ಫೆಬ್ರವರಿ,5,2026 (www.justkannada.in):  ರಾಜ್ಯದ ನೀರಾವರಿ ಯೋಜನೆಗಳಿಗೆ ಅನುಮತಿ ಕೇಳಿ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ರಾಜ್ಯಸಭೆಯಲ್ಲಿ ಭಾವನಾತ್ಮಕವಾಗಿ ಮಾತನಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಶಾಸಕ ಕೆ.ಎಂ ಶಿವಲಿಂಗೇಗೌಡ, ರಾಜ್ಯದ ನೀರಾವರಿ ಯೋಜನೆಗಳನ್ನ ಜಾರಿ ಮಾಡಿಸಿದರೆ ಸಂತಸವಾಗುತ್ತೆ ಎಂದಿದ್ದಾರೆ.

ಇಂದು ಮಾತನಾಡಿದ ಶಾಸಕ ಶಿವಲಿಂಗೇಗೌಡ, ಹೆಚ್ ಡಿ ದೇವೇಗೌಡರು ಭಾವನಾತ್ಮಕವಾಗಿ ಮಾತನಾಡಿದ್ದಾರೆ. ರಾಜ್ಯದ ನೀರಾವರಿ ಯೋಜನೆ ಬಗ್ಗೆ ಮಾತಾಡಿದ್ದನ್ನ ಸ್ವಾಗತಿಸುವೆ. ಹೆಚ್ ಡಿ ದೇವೇಗೌಡರು ಆಡಳಿತ ಪಕ್ಷದ ಜೊತೆ ಮೈತ್ರಿಯಲ್ಲಿದ್ದಾರೆ. ಕೇಂದ್ರ ಸರ್ಕಾರದ ಜೊತೆ ಮಾತನಾಡಿ ನೀರಾವರಿ ಯೋಜನೆಗಳಿಗೆ ಅನುಮತಿ ಕೊಡಿಸಬೇಕು ರಾಜ್ಯದ ನೀರಾವರಿ ಯೋಜನೆಗಳನ್ನ ಜಾರಿ ಮಾಡಿಸಿದರೆ ಸಂತಸವಾಗುತ್ತದೆ ಎಂದರು.

ನಿನ್ನೆ ವಿಧಾನಸಭೆ ಕಲಾಪದಲ್ಲಿ ವಿಪಕ್ಷ ಬಿಜೆಪಿ ವಿರುದ್ದ ಏಕವಚನದಲ್ಲಿ ಮಾತನಾಡಿದ ವಿಚಾರ ಕುರಿತು ಪ್ರತಿಕ್ರಿಯಿಸಿದ ಶಾಸಕ ಶಿವಲಿಂಗೇಗೌಡ, ನಿನ್ನೆ ಸದನದಲ್ಲಿ ಅಹಿತಕರ ಘಟನೆ ನಡೆಯಿತು. ವಿಪಕ್ಷ ಸದಸ್ಯರು ಪ್ರತಿಭಟನೆ ಮಾಡುತಿದ್ದರು. ಈ ವೇಳೆ ನನಗೆ ಮಾತನಾಡಲು ಅವಕಾಶ ಕೊಟ್ಟರು. ಆಗ ನನ್ನ ಮೇಲೆ ವೈಯಕ್ತಿಕ ನಿಂದನೆ ಮಾಡಿದರು.  ಹಾಗಾಗಿ ಬಿರುಸಿನಿಂದ ಮಾತನಾಡಿದೆ ಎಂದು ಸ್ಪಷ್ಟಪಡಿಸಿದರು.

Key words: Former PM, HD Devegowda, emotional speech, MLA, Shivalingegowda

The post ಹೆಚ್ ಡಿಡಿ ಭಾವನಾತ್ಮಕ ಮಾತು: ನೀರಾವರಿ ಯೋಜನೆಗಳನ್ನ ಜಾರಿ ಮಾಡಿಸಿದ್ರೆ ಸಂತಸ-ಶಾಸಕ ಶಿವಲಿಂಗೇಗೌಡ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ಶಾಸಕ ‘ಭೈರತಿ ಬಸವರಾಜ್ ಗೆ ನ್ಯಾಯಾಂಗ ಬಂಧನ.

ಬೆಂಗಳೂರು,ಫೆಬ್ರವರಿ,21,2026 (www.justkannada.in):  ರೌಡಿ ಶೀಟರ್ ಬಿಕ್ಲು ಶಿವ’ ಕೊಲೆ ಪ್ರಕರಣಕ್ಕೆ...

ആശ്വാസമഴ; കേരളത്തില്‍ ഇന്ന് മൂന്ന് ജില്ലകളില്‍ യെല്ലോ അലേര്‍ട്ട്

തിരുവനന്തപുരം: സംസ്ഥാനത്ത് ഇന്നും (ഞായര്‍) ശക്തമായ മഴ തുടരും. മൂന്ന് ജില്ലകളില്‍...

”ஓ.பன்னீர்செல்வம் பதவிக்காக எதையும் செய்யத் துணிந்து விட்டார்” – டிடிவி தினகரன் காட்டம்

அ.ம.மு.க பொதுச் செயலாளர் தினகரன் கும்பகோணத்தில் செய்தியாளர்களைச் சந்தித்துப் பேசினார்.அப்போது, "எம்.எல்.ஏ....

Harish Rao: మెదక్‌లో గుండాల రాజ్యం నడుస్తుందా? ప్రభుత్వ పాలన నడుస్తుందా?

Harish Rao: 13 మంది బీఆర్ఎస్ కార్యకర్తలను అక్రమంగా అరెస్ట్ చేసి...