4
May, 2026

A News 365Times Venture

4
Monday
May, 2026

A News 365Times Venture

ಹಿರಿಯ ಪತ್ರಕರ್ತ ಚೀ.ಜ ರಾಜೀವ ಅವರ  ‘ಪ್ರಿಯ ಗಾಂಧಿ’ ಪುಸ್ತಕ ಮಾರಾಟಕ್ಕೆ ಲಭ್ಯ

Date:

ಮೈಸೂರು,ನವೆಂಬರ್,7,2025 (www.justkannada.in): ಹಿರಿಯ ಪತ್ರಕರ್ತ ಚೀ ಜ ರಾಜೀವ ಅವರ ಸಮಕಾಲೀನ ಸಂಗತಿಗಳ ವಿಶ್ಲೇಷಣಾತ್ಮಕ ಕೃತಿ  ‘ಪ್ರಿಯ ಗಾಂಧಿ’ ಪುಸ್ತಕ ಮಾರಾಟಕ್ಕೆ ಲಭ್ಯವಿದೆ. ಬಹುರೂಪಿ  ಪುಸ್ತಕವನ್ನ ಹೊರತಂದಿದ್ದು  ಈ ಪುಸ್ತಕದ ಬೆಲೆ 300 ರೂ ಆಗಿದೆ.

‘ವಿಜಯ ಕರ್ನಾಟಕ’ ಪತ್ರಿಕೆಯ ಹಿರಿಯ ಪತ್ರಕರ್ತ ಚೀ ಜ ರಾಜೀವ ಅವರು ಮಹಾತ್ಮನಿಗೆ ಬರೆದ ಪತ್ರಗಳ ಗುಚ್ಛ -ಪ್ರಿಯ ಗಾಂಧಿ. ಸಮಕಾಲೀನ ಸಂಗತಿಗಳಿಗೆ ಹಿಡಿದ ಕನ್ನಡಿ. ‘ರಾಜೀವ, ನೀನು ನಿನ್ನಂಥವರು ನಮ್ಮ ಕಾಲದ ತಲ್ಲಣಗಳನ್ನು ಯಾರಿಗಾದರೂ ಪತ್ರ ಬರೆದು ತಿಳಿಸಬೇಕಾಗಿದೆ ಎಂದು ಗೆಳೆಯರೊಬ್ಬರು ಹೇಳಿದಾಗ ರಾಜೀವ ಅವರು ಗಾಂಧಿಯನ್ನು ಆರಿಸಿಕೊಂಡರು. ‘ಪ್ರಿಯ ಗಾಂಧಿ ಸ್ವಸ್ಥ ಸಮಾಜದ ಸಾಕ್ಷಿಪ್ರಜ್ಞೆ’ ಎನ್ನುತ್ತಾರೆ ಸಂವಹನ ಸಲಹೆಗಾರ ಎನ್ ರವಿಶಂಕರ್ ತಮ್ಮ ಮುನ್ನುಡಿಯಲ್ಲಿ. ‘ಇವು ಗಾಂಧಿಗೆ ಬರೆದ ಪತ್ರಗಳಲ್ಲ, ಬದಲಿಗೆ ಗಾಂಧಿಯೇ ಬರೆದ ಪತ್ರಗಳೇನೋ ಎನ್ನುವಂತೆ ತೋರುತ್ತದೆ. ಗಾಂಧಿಯಂತೆಯೇ ಎಲ್ಲೂ ರಾಜೀವ್ ರಾಜಿಯಾಗುವುದಿಲ್ಲ’ ಎನ್ನುತ್ತಾರೆ.

ಈ ಕೃತಿ ಜಾತಿ ಗಣತಿಯಿಂದ ಹಿಡಿದು ಪಾದಯಾತ್ರೆಯ ರಾಜಕೀಯದವರೆಗೆ ಹತ್ತು ಹಲವು ಸಂಗತಿಗಳನ್ನು ನಮ್ಮ ಮುಂದೆ ಹರಡುತ್ತದೆ. ಚಿಂತನೆಗೆ ಹೊಸ ವಿಷಯ ನೀಡುತ್ತದೆ. .

ಕೃತಿಯ ಬೆನ್ನುಡಿಯಲ್ಲಿ ‘ವಿಜಯ ಕರ್ನಾಟಕ’ದ ಸಂಪಾದಕರಾದ  ಸುದರ್ಶನ ಚನ್ನಂಗಿಹಳ್ಳಿ ಅವರು ಹೀಗೆ ಬರೆದಿದ್ದಾರೆ. ಗಾಂಧೀಜಿ ಅವರ ಜೀವನ, ತತ್ತ್ವ ಹಾಗೂ ಚಿಂತನೆಗಳು ಇಂದಿಗೂ ನಮ್ಮ ಸಮಾಜಕ್ಕೆ ದಿಕ್ಕು ತೋರಿಸುತ್ತಿವೆ. ಆದರೆ ಕಾಲ ಬದಲಾಗುತ್ತಿದ್ದಂತೆ ಆ ತತ್ವಗಳೊಂದಿಗೆ ಸಂವಾದ ನಡೆಸುವ ಅಗತ್ಯ ಹೆಚ್ಚಾಗಿದೆ. ನಾಡಿನ ಹಿರಿಯ ಪತ್ರಕರ್ತ ಹಾಗೂ ನನ್ನ ಹಿರಿಯ ಸಹೋದ್ಯೋಗಿ ಮಿತ್ರ ಚೀ ಜ ರಾಜೀವ ಅವರು ತಮ್ಮ ಅಂಕಣ ಬರಹಗಳ ಮೂಲಕ ಈ ಸಂವಾದವನ್ನು ನಡೆಸಿದ್ದಾರೆ. ಅವರು ಮಹಾತ್ಮನಿಗೆ ಬರೆದಿರುವ ಪತ್ರಗಳು ಕೇವಲ ಬರಹಗಳಲ್ಲ. ಅದು ಕಾಲದ ನಾಡಿ ತಟ್ಟುವ ಪ್ರಾಮಾಣಿಕ ಸಂಭಾಷಣೆ.

Key words: Senior journalist, C.J. Rajeev, book, Gandhi Priya

The post ಹಿರಿಯ ಪತ್ರಕರ್ತ ಚೀ.ಜ ರಾಜೀವ ಅವರ  ‘ಪ್ರಿಯ ಗಾಂಧಿ’ ಪುಸ್ತಕ ಮಾರಾಟಕ್ಕೆ ಲಭ್ಯ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ഇടതിനെ കൈവിട്ട് കാസര്‍ഗോഡ് ജില്ലയും; വിജയിച്ചുകയറാനായത് ഒരേയൊരു മണ്ഡലത്തില്‍ 

കാസര്‍കോട്: 2026 ലെ കേരള നിയമസഭാ തെരഞ്ഞെടുപ്പിന്റെ വോട്ടെണ്ണല്‍ ഫലങ്ങള്‍ പുറത്തുവരുമ്പോള്‍,...

கொளத்தூர்: முதல்வர் தொகுதியிலும் பறந்த `விசில்' – ஸ்டாலினை வீழ்த்திய வி.எஸ்.பாபு – எப்படி?

தமிழக அரசியல் வரலாற்றில் 2026 சட்டமன்றத் தேர்தல் முடிவுகள் எவரும் எதிர்பாராத...

Kavitha: పాత రాజకీయాలకు విసిగిపోయారు.. తెలంగాణలో కూడా మార్పు తథ్యం: కవిత

తమిళనాడు ఎన్నికల ఫలితాలు దేశ రాజకీయాల్లో కొత్త చర్చకు దారితీసిన వేళ,...

ಕೆ.ಸಿ ರೆಡ್ಡಿ ಅವರು ಒಬ್ಬ ಸಮರ್ಥ, ಪ್ರಾಮಾಣಿಕ  ಆಡಳಿತಗಾರರಾಗಿದ್ದರು:ಸಿಎಂ  ಸಿದ್ದರಾಮಯ್ಯ

ಬೆಂಗಳೂರು, ಮೇ,04,2026 (www.justkannada.in):  ಮಾಜಿ ಮುಖ್ಯಮಂತ್ರಿ ದಿವಂಗತ ಕೆ.ಸಿ ರೆಡ್ಡಿಯವರು...