5
May, 2026

A News 365Times Venture

5
Tuesday
May, 2026

A News 365Times Venture

ಕಬ್ಬಿಗೆ ದರ ನಿಗದಿಗೆ ಆಗ್ರಹಿಸಿ ಮುಂದುವರೆದ ರೈತರ ಹೋರಾಟ

Date:

ಬೆಳಗಾವಿ,ನವೆಂಬರ್,6,2025 (www.justkannada.in):  ಕಬ್ಬು ಬೆಳೆಗೆ ಬೆಂಬಲ ಬೆಲೆ ನಿಗದಿ ಮಾಡುವಂತೆ ಆಗ್ರಹಿಸಿ ರೈತರು ನಡೆಸುತ್ತಿರುವ  ಹೋರಾಟ ಇಂದು 8ನೇ ದಿನಕ್ಕೆ ಕಾಲಿಟ್ಟಿದೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ರೈತರ ಪ್ರತಿಭಟನೆ ಮುಂದುವರೆದಿದೆ.

ಕಬ್ಬಿಗೆ ಬೆಂಬಲ ಬೆಲೆ 3500 ರೂ ನಿಗದಿ ಮಾಡುವಂತೆ ಆಗ್ರಹಿಸಿ ಕಳೆದ 8 ದಿನಗಳಿಂದಲೂ ರಾಜ್ಯದ ವಿವಿಧೆಡೆ ರೈತರು ಪ್ರತಿಭಟನೆ ನಡೆಸುತ್ತಿದ್ದು, ಸಚಿವ ಹೆಚ್.ಕೆ.ಪಾಟೀಲ್ ರೈತ ಮುಖಂಡರ ಜೊತೆ ಹೋರಾಟಗಾರರ ಜೊತೆ ಮಾತುಕತೆ ನಡೆಸಿದ್ದರು.  ಆದರೆ ಸಚಿವರು ನಡೆಸಿದ ಸಂಧಾನ ಸಭೆ ವಿಫಲವಾಗಿದೆ. ಇಂದೂ ಕೂಡ ಕಬ್ಬು ಬೆಳೆಗಾರರ ಪ್ರತಿಭಟನೆ ಮುಂದುವರೆದಿದೆ.

ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದ ಕೋರ್ಟ್ ವೃತ್ತದಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದು ರಾಜ್ಯ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂಜೆಯೊಳಗೆ ಕಬ್ಬಿಗೆ ಬೆಂಬಲ ಬೆಲೆ ನಿಗದಿ ಮಾಡುವಂತೆ ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ಸರ್ಕಾರ ತಮ್ಮ ಬೇಡಿಕೆ ಈಡೇರಿಸದಿದ್ದರೆ, ನವೆಂಬರ್ 7ರಂದು ರಾಷ್ಟ್ರೀಯ ಹೆದ್ದಾರಿ ತಡೆಯುವುದಾಗಿ ರೈತರು ಎಚ್ಚರಿಕೆ ನೀಡಿದ್ದಾರೆ.

Key words: Farmers, Protest, continues, sugarcane price, fixing

The post ಕಬ್ಬಿಗೆ ದರ ನಿಗದಿಗೆ ಆಗ್ರಹಿಸಿ ಮುಂದುವರೆದ ರೈತರ ಹೋರಾಟ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ಕಾಂಗ್ರೆಸ್ ಅವನತಿ ಶುರು: ಮಾಜಿ ಮೇಯರ್ ಶಿವಕುಮಾರ್

ಮೈಸೂರು,ಮೇ,4,2026 (www.justkannnada.in): ದುರಾಡಳಿತ, ಜನಾಭಿಪ್ರಾಯಕ್ಕೆ ಮನ್ನಣೆ ನೀಡದೆ ಗಾಂಧಿ ಕುಟುಂಬಕ್ಕೆ...

തരംഗത്തിലും ഇടതിന് കാലിടറാതെ നാട്ടിക

തൃശ്ശൂർ: ശക്തമായ പോരാട്ടത്തിനൊടുവിൽ നാട്ടിക മണ്ഡലം നിലനിർത്തി എൽ.ഡി.എഫ്. തെരഞ്ഞെടുപ്പ് പ്രഖ്യാപനം...

'சந்திரபாபு நாயுடுவை இறக்கிய என்.டி.ஏ' – ஒரே ரவுண்டில் ஆனந்துக்கு தி.நகரை வென்று கொடுத்த விஜய்!

தவெகவின் பொதுச் செயலாளர் புஸ்ஸி ஆனந்த் தி.நகர் தொகுதியில் கிட்டத்தட்ட 13,000...

TPCC Mahesh Goud : కేరళలో యూడీఎఫ్ ఘనవిజయం.. తెలంగాణ మోడల్ పాలనే గెలిపించిందన్న మహేష్ గౌడ్.!

TPCC Mahesh Goud : కేరళ అసెంబ్లీ ఎన్నికల్లో కాంగ్రెస్ నేతృత్వంలోని...