14
May, 2026

A News 365Times Venture

14
Thursday
May, 2026

A News 365Times Venture

ಸಂಪುಟ ಸಭೆಯಲ್ಲೇ ಸಚಿವರಿಬ್ಬರ ನಡುವೆ ವಾಕ್ಸಮರ, ಆಕ್ರೋಶ

Date:

ಬೆಂಗಳೂರು,ಅಕ್ಟೋಬರ್,30,2025 (www.justkannada.in): ಇಂದು ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲೇ ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಸಿ ಮಹದೇವಪ್ಪ ಮತ್ತು ಇಂಧನ ಸಚಿವ ಕೆ.ಜೆ ಜಾರ್ಜ್ ನಡುವೆ ಜಟಾಪಟಿ ನಡೆದಿದೆ ಎನ್ನಲಾಗಿದೆ.

ಇಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಡೆಯಿತು. ಸಭೆಯಲ್ಲ್ಇ ಎಸ್ ಸಿ ಎಸ್ ಪಿ, ಟಿಎಸ್ ಪಿ ಹಣ ನೀಡದ ವಿಚಾರವಾಗಿ ಸಚಿವ ಹೆಚ್.ಸಿ ಮಹದೇವಪ್ಪ ಹಾಗೂ ಕೆಜೆ ಜಾರ್ಜ್ ನಡುವೆ ವಾಕ್ಸಮರ ನಡೆದಿದೆ ಎನ್ನಲಾಗಿದೆ.

ಎಸ್ ಸಿಪಿ ಟಿಎಸ್ ಪಿ ಅನುದಾನ ಹಂಚಿಕೆಯಾಗಿಲ್ಲ ನಮ್ಮ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ. ಎಸ್ ಸಿ ಪಿ, ಟಿ ಎಸ್ ಪಿಗೆ ಅನುದಾನ ಹಂಚಿಕೆ ಮಾಡದೇ ಇರುವುದು ಏಕೆ?  ಏರು ಧ್ವನಿಯಲ್ಲೇ ಸಚಿವ ಹೆಚ್.ಸಿ ಮಹದೇವಪ್ಪ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ನೇರವಾಗಿ ಸಿಎಂಗೆ ಹೇಳದೇ ಸಂಪುಟ ಸಹೋದ್ಯೋಗಿಗಳ ಮೇಲೆ ಸಚಿವ ಮಹದೇವಪ್ಪ ಅಸಮಾಧಾನ ಹೊರ ಹಾಕಿದ್ದಾರೆ. ಗಂಗಾಕಲ್ಯಾಣ ಯೋಜನೆಗೆ ಸಂಬಂಧಿಸಿದ ವಿಷಯದಲ್ಲಿ ಸಚಿವರ ನಡುವೆ ಜಟಾಪಟಿ ನಡೆದಿದೆ. ಈ ವೇಳೆ ನಾನು ಎದ್ದು ಹೊರಟೇ ಬಿಡುತ್ತೇನೆ ಎಂಬುದಾಗಿ ಸಚಿವ ಮಹದೇವಪ್ಪ ಕೂಗಾಡಿದ್ದಾರೆ ಎನ್ನಲಾಗಿದೆ.

Key words: two ministers, cabinet meeting, Outrage, SCSP, TSP, money

The post ಸಂಪುಟ ಸಭೆಯಲ್ಲೇ ಸಚಿವರಿಬ್ಬರ ನಡುವೆ ವಾಕ್ಸಮರ, ಆಕ್ರೋಶ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

எஸ்.பி.வேலுமணி பதவி பறிப்பு; அரசியல் களத்திற்கு மீண்டும் வரும் செ.ம.வேலுசாமி – பின்னணி என்ன?

கோவை மாவட்டம் சூலூர் அருகேயுள்ள செங்கத்துறை பகுதியை சேர்ந்தவர் செ.ம.வேலுசாமி. அ.தி.மு.க-வின்...

Aasara Pensions: గుడ్‌న్యూస్.. తెలంగాణలో ఆసరా పింఛన్లపై బిగ్ అప్‌డేట్..

తెలంగాణ రాష్ట్రంలో సామాజిక భద్రతే లక్ష్యంగా ప్రభుత్వం అడుగులు వేస్తోంది. ముఖ్యంగా...

ಮಣ್ಣಲ್ಲಿ ಮಣ್ಣಾದ ನಟ, ನಿರ್ದೇಶಕ ದಿಲೀಪ್ ರಾಜ್

ರಾಮನಗರ,ಮೇ,13,2026 (www.justkannada.in):  ಹೃದಯಾಘಾತದಿಂದ ಇಂದು ಬೆಳಗ್ಗಿನ ಜಾವ ನಿಧನರಾದ ನಟ...