30
April, 2026

A News 365Times Venture

30
Thursday
April, 2026

A News 365Times Venture

ರೇಷ್ಮೆ ಕೃಷಿಯ ತಂತ್ರಜ್ಞಾನಗಳನ್ನು ಕಲಿತು ತಮ್ಮ ದೇಶದಲ್ಲಿ ಉಪಯೋಗಿಸಿ- ಡಾ.ಪಿ.ದೀಪ ಕರೆ

Date:

ಮೈಸೂರು,ಸೆಪ್ಟಂಬರ್,3,2025 (www.justkannada.in): ರೇಷ್ಮೆ ಕೃಷಿಯ ತಂತ್ರಜ್ಞಾನಗಳನ್ನು ಕಲಿತು ತಮ್ಮ ದೇಶದಲ್ಲಿ ಉಪಯೋಗಿಸಿ ಎಂದು ಅಂತರಾಷ್ಟ್ರೀಯ ಅಭ್ಯರ್ಥಿಗಳಿಗೆ ಮೈಸೂರಿನ ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆ  ನಿರ್ದೇಶಕರಾದ ಡಾ.ಪಿ.ದೀಪ ಕರೆ ನೀಡಿದರು.

ಇಂದಿನಿಂದ ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆಯಲ್ಲಿ ರೇಷ್ಮೆ ಮತ್ತು ರೇಷ್ಮೆ ಉದ್ಯಮಕ್ಕೆ ಸಂಬಂಧಿಸಿದ ಅಂತರಾಷ್ಟ್ರೀಯ ಅಭ್ಯರ್ಥಿಗಳಿಗೆ ಹಮ್ಮಿಕೊಂಡಿರುವ ತರಬೇತಿ ಕಾರ್ಯಕ್ರಮವನ್ನ ಬೆಂಗಳೂರಿನ ಕೇಂದ್ರ ರೇಷ್ಮೆ ಮಂಡಳಿಯ ನಿರ್ದೇಶಕರಾದ ಡಾ.ಎಸ್. ಮಂಥಿರಾ ಮೂರ್ತಿ ಉದ್ಘಾಟಿಸಿ   ಶಿಬಿರದ ಉದ್ದೇಶಗಳು ಹಾಗೂ ರೇಷ್ಮೆ ಮತ್ತು ರೇಷ್ಮೆ ಉದ್ಯಮದ ಮಹತ್ವದ ಬಗ್ಗೆ ತರಬೇತಿ ಅಭ್ಯರ್ಥಿಗಳಿಗೆ ತಿಳುವಳಿಕೆ ನೀಡಿದರು.

ಕಾರ್ಯಕ್ರಮದಲ್ಲಿ  ಸ್ವಾಗತ ಕೋರಿ ಮಾತನಾಡಿದ  ಮೈಸೂರಿನ ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆ  ನಿರ್ದೇಶಕರಾದ ಡಾ.ಪಿ.ದೀಪ ಅವರು, ರೇಷ್ಮೆ ಕೃಷಿ ಅಭಿವೃದ್ಧಿಯಲ್ಲಿ ಸಂಸ್ಥೆಯ ಪ್ರಮುಖವಾದ ಪಾತ್ರದ ಬಗ್ಗೆ ಹೇಳಿದರು. ಸಂಸ್ಥೆಯು ಹಲವಾರು ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ರೇಷ್ಮೆ ಕೃಷಿಯ ತಾಂತ್ರಿಕ ಬೆಂಬಲವನ್ನು ಸಹ ಒದಗಿಸುತ್ತಿದೆ. ಸಂಸ್ಥೆಯ ಆವಿಷ್ಕಾರಗಳು ರೇಷ್ಮೆ ಕೃಷಿಯ ಉತ್ಪಾದಕತೆ, ಲಾಭದಾಯಕತೆ, ಸುಸ್ಥಿರತೆಯನ್ನು ಸುಧಾರಿಸಲು ಬಹಳ ಉಪಯುಕ್ತವಾಗಿವೆ. ಈ ತರಬೇತಿಯು ಇಂದಿನಿಂದ ಸೆಪ್ಟೆಂಬರ್ 30 ರವರೆಗೆ ನಡೆಯುತ್ತದೆ. ಈ ತರಬೇತಿಯಲ್ಲಿ ತಾವು ರೇಷ್ಮೆ ಕೃಷಿಯ ತಾಂತ್ರಜ್ಞಾನಗಳನ್ನು ಕಲಿತು ತಮ್ಮ ದೇಶದಲ್ಲಿ ಉಪಯೋಗಿಸಿಬೇಕೆಂದರು.

ಸಮಶೀತೋಷ್ಣದಲ್ಲಿ ರೇಷ್ಮೆ ಕೃಷಿ ಅಭಿವೃದ್ಧಿಯಲ್ಲಿ ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆ ಮೈಸೂರು ಬಹಳ ಮುಖ್ಯವಾದ ಪಾತ್ರವನ್ನು ವಹಿಸಿದೆ. ಈ ಸಂಸ್ಥೆಯು ವಿವಿಧ ರೀತಿಯ ರೇಷ್ಮೆ ಕೃಷಿಗೆ ಸಂಬಂಧಿಸಿದ ತಂತ್ರಜ್ಞಾನಗಳನ್ನು ಮತ್ತು ಉತ್ಪನ್ನಗಳನ್ನು ಅವಿಷ್ಕಾರ ಮಾಡಿದೆ ಎಂದರು.

ಕೇಂದ್ರ ರೇಷ್ಮೆ ಮಂಡಳಿ ಡನಿರ್ದೇಶಕರು (ತಾಂತ್ರಿಕ) .ಎಸ್. ಮಂಥಿರಾ ಮೂರ್ತಿ, ಮಾತನಾಡಿ  ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆ ಮೈಸೂರು ರೇಷ್ಮೆ ಕೃಷಿಗೆ ಸಂಬಂಧಿಸಿದಂತೆ ಹಲವಾರು ತಾಂತ್ರಿಕತೆಗಳನ್ನು ಅವಿಷ್ಕಾರಿಸಿದೆ. ಈ ತರಬೇತಿ ಶಿಬಿರದಲ್ಲಿ ತಾಂತ್ರಿಕತೆಗಳನ್ನು ವಿಜ್ಞಾನಿಗಳು ತರಬೇತಿ ಅವಧಿಯಲ್ಲಿ ಪ್ರಯೋಗಿಕವಾಗಿ ವಿವರಿಸುತ್ತಾರೆ ಅದನ್ನು ತಾವು ಅರಿತು ತಮ್ಮ ದೇಶಗಳಿಗೆ ಹೋದ ಮೇಲೆ ರೇಷ್ಮೆ ಕೃಷಿಯಲ್ಲಿ ಆಳವಡಿಸಿಕೊಳ್ಳಬೇಕು ಎಂದರು. 2014 ರಿಂದ ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆ ಮೈಸೂರಿನಲ್ಲಿ 7ನೇ ತಂಡದ ಅಂತರರಾಷ್ಟ್ರೀಯ ಅಭ್ಯರ್ಥಿಗಳಿಗೆ ತರಬೇತಿ ಕಾರ್ಯಕ್ರಮವಾಗಿದೆ ಹಾಗು ಇಲ್ಲಿಯವರೆಗೆ 22 ದೇಶಗಳಿಂದ 132 ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗಿದೆ. ಈ ತಂಡದಲ್ಲಿ 8 ದೇಶಗಳ 30 ಜನರಿಗೆ ತರಬೇತಿ ನೀಡಲಾಗುವುದೆಂದರು.

ಈ ಶಿಬಿರದಲ್ಲಿ, ಈಜಿಪ್ಟ್, ಇಥಿಯೋಪಿಯಾ, ಘಾನಾ, ಫಿಲಿಪೈನ್ಸ್, ಕ್ಯೂಬಾ, ಟಾಂಜಾನಿಯಾ. ಉಗಾಂಡಾ, ಥೈಲ್ಯಾಂಡ್ ದೇಶಗಳಿಂದ ಸುಮಾರು 30 ಅಭ್ಯರ್ಥಿಗಳು ಭಾಗವಹಿಸಿದ್ದರು.

ಪದ್ಮನಾವ ನಾಯಕ್, ಸಹಾಯಕ ಕಾರ್ಯದರ್ಶಿ, ಐಎಸ್‌ಸಿ, ಬೆಂಗಳೂರು ಇವರು ರೇಷ್ಮೆ ಮತ್ತು ರೇಷ್ಮೆ ಉದ್ಯಮಕ್ಕೆ ಸಂಬಂದಿಸಿದ ಅಂತರರಾಷ್ಟ್ರೀಯ ತರಬೇತಿ ಕಾರ್ಯಕ್ರಮದ ಸಂಪೂರ್ಣ ಮಾಹಿತಿ ಡಾ.ಎಲ್.ಕುಸುಮ. ವಿಜ್ಞಾನಿ ಮತ್ತು ಡಾ.ಎಂ.ಎಸ್.ರಂಜನಿ. ಇವರು ಕಾರ್ಯಕ್ರಮದ ನೀಡಿದರು. ನಿರೂಪಣೆ ಮಾಡಿದರು. -ಡಾ. ಕೆ.ಎನ್.ಮಧುಸೂದನ್, ವಿಜ್ಞಾನಿ ಡಿ. ಮತ್ತು ಮುಖ್ಯಸ್ಥರು, ತರಬೇತಿ ವಿಭಾಗ. ಸಿ.ಎಸ್.ಆರ್.ಟಿ.ಐ. ಮೈಸೂರು ಇವರು ವಂದನಾರ್ಪಣೆ ಮಾಡಿದರು. ಸಂಸ್ಥೆಯ ವಿಜ್ಞಾನಿಗಳು. ಅಧಿಕಾರಿಗಳು, ಸಿಬಂದ್ಧಿ, ಯೋಜನಾ ಸಹಾಯಕರು ಭಾಗವಹಿಸುವರು.

Key words: Mysore, Learn, technologies, sericulture, Dr. P. Deepa

The post ರೇಷ್ಮೆ ಕೃಷಿಯ ತಂತ್ರಜ್ಞಾನಗಳನ್ನು ಕಲಿತು ತಮ್ಮ ದೇಶದಲ್ಲಿ ಉಪಯೋಗಿಸಿ- ಡಾ.ಪಿ.ದೀಪ ಕರೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

മുസ്‌ലിങ്ങള്‍ മുഖ്യമന്ത്രിയാകരുതെന്ന് ഭരണഘടനയില്‍ എവിടെയെങ്കിലും പറഞ്ഞിട്ടുണ്ടോ? വെള്ളാപ്പള്ളിയോട് ടി.എസ്. ശ്യാംകുമാര്‍

  കോഴിക്കോട്: യു.ഡി.എഫ് അധികാരത്തിലെത്തിയാല്‍ മുസ്‌ലിം ലീഗില്‍ നിന്നും മുഖ്യമന്ത്രിയുണ്ടായേക്കാമെന്ന എസ്.എന്‍.ഡി.പി...

தமிழ்நாடு `டு' மேற்கு வங்கம்; எக்ஸிட் போல் குறித்து மல்லிகார்ஜுன கார்கே சொன்னது என்ன?

புதுச்சேரி, கேரளா, மற்றும் அஸ்ஸாம் ஆகிய மூன்று மாநில சட்டமன்றத் தேர்தல்கள்...

West Bengal Exit Poll 2026: బెంగాల్ లేటెస్ట్ ఎగ్జిట్ పోల్.. బీజేపీదే అధికారం..

West Bengal Exit Poll 2026: నాలుగు రాష్ట్రాలు, ఒక కేంద్రపాలిత...

ಶೀಲ ಶಂಕಿಸಿ ಪತ್ನಿ ಕೊಂದಿದ್ದ ಆಪರಾಧಿ ಪತಿಗೆ ಜೀವಾವಧಿ ಶಿಕ್ಷೆ ಪ್ರಕಟ.

ಮಂಡ್ಯ. ಏಪ್ರಿಲ್, 30,2026 (www.justkannada.in):  ಶೀಲ ಶಂಕಿಸಿ ಪತ್ನಿಯನ್ನು ಕೊಲೆಗೈದಿದ್ದ...