25
April, 2026

A News 365Times Venture

25
Saturday
April, 2026

A News 365Times Venture

ನಟ ದರ್ಶನ್ ಹಾಸಿಗೆ-ದಿಂಬಿಗೆ ಬೇಡಿಕೆ ಮತ್ತು ಪವಿತ್ರಗೌಡ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

Date:

ಬೆಂಗಳೂರು,ಆಗಸ್ಟ್,30,2025 (www.justkannada.in):  ರೇಣುಕಾ ಸ್ವಾಮಿ ಕೊಲೆ  ಪ್ರಕರಣಕ್ಕೆ ಸಂಬಂಧಿಸಿದಂತ ನಟ ಆರೋಪಿ ದರ್ಶನ್ ಹಾಸಿಗೆ-ದಿಂಬಿಗೆ ಬೇಡಿಕೆಯಿಟ್ಟು ಅರ್ಜಿ ಸಲ್ಲಿಸಿದ್ದು ವಿಚಾರಣೆ ಸೆಪ್ಟಂಬರ್ 2ಕ್ಕೆ ಮುಂದೂಡಿಕೆಯಾಗಿದೆ.

ಹಾಗೆಯೇ ಆರೋಪಿ ಪವಿತ್ರಗೌಡ ಜಾಮೀನು ಅರ್ಜಿ ವಿಚಾರಣೆಯೂ ಸೆಷನ್ಸ್ ಕೋರ್ಟ್ ನಲ್ಲಿ ಸೆಪ್ಟಂಬರ್ 2ಕ್ಕೆ ಮುಂದೂಡಿಕೆಯಾಗಿದೆ. ಇಬ್ಬರ ಅರ್ಜಿ ವಿಚಾರಣೆಯ ತೀರ್ಪು ಸೆಪ್ಟೆಂಬರ್ 2ಕ್ಕೆ ಹೊರ ಬೀಳಲಿದೆ.

ದರ್ಶನ್ ಅವರಿಗೆ ವಿಶೇಷ ಸವಲತ್ತು ನೀಡದಂತೆ ಸುಪ್ರೀಂ ಕೋರ್ಟ್ ಖಡಕ್ ಸೂಚನೆ ಕೊಟ್ಟಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಸಾಕಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಅವರಿಗೆ ನಿಯಮದಲ್ಲಿರುವಂತೆ ಒಂದು ಬೆಡ್ ​ಶೀಟ್ ಮಾತ್ರ ನೀಡಲಾಗಿದೆ ಎನ್ನಲಾಗಿದೆ. ಹೆಚ್ಚುವರಿಯಾಗಿ ಯಾವುದೇ ಬೆಡ್​ಶೀಟ್ ಕೊಟ್ಟಿಲ್ಲ. ಈ ವಿಚಾರಕ್ಕೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಕೆ ಆಗಿದೆ.

‘ದರ್ಶನ್​ಗೆ ಬೆಡ್ ​ಶಿಟ್, ದಿಂಬು ಕೊಡುತ್ತಿಲ್ಲ. ಕೋರ್ಟ್​ನಿಂದ ನಿರ್ದೇಶನ ತನ್ನಿ ಎಂದಿದ್ದಾರೆ’ ಎಂದು ದರ್ಶನ್ ಪರ ವಕೀಲ್ ಸುನೀಲ್‌ಕುಮಾರ್ ಸೆಷನ್ಸ್ ಕೋರ್ಟ್ ​ನಲ್ಲಿ ವಾದ ಮಾಡಿದ್ದಾರೆ. ಇನ್ನು, ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡುವಂತೆ ಅರ್ಜಿ ಸಲ್ಲಿಕೆ ಆಗಿತ್ತು. ಇದರ ವಿಚಾರಣೆ ಸೆ.2ಕ್ಕೆ ಮುಂದೂಡಿಕೆ ಆಗಿದೆ.

Key words: Actor Darshan, Bed, demand, Pavithra Gowda,  bail application, postponed

The post ನಟ ದರ್ಶನ್ ಹಾಸಿಗೆ-ದಿಂಬಿಗೆ ಬೇಡಿಕೆ ಮತ್ತು ಪವಿತ್ರಗೌಡ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ബി.ജെ.പിയിലേക്കുള്ള കൂടുമാറ്റം; രാഘവ് ഛദ്ദയ്ക്ക് 24 മണിക്കൂറുകൊണ്ട് നഷ്ടമായത് 10 ലക്ഷം ഫോളോവെഴ്‌സ്

ന്യൂദൽഹി: ആം ആദ്മി പാർട്ടിവിട്ട് ബി.ജെ.പിയിലേക്ക് ചേക്കേറിയ രാജ്യസഭാ എം.പി രാഘവ്...

தெலங்கானா : 'அப்பா முன்ன மாதிரி இல்ல!' – புது கட்சி தொடங்கிய சந்திரசேகர் ராவின் மகள் கவிதா!

தெலங்கானாவில் பாரதிய ராஷ்டிர சமிதி கட்சியின் தலைவர் சந்திரசேகர் ராவ்வின் மகள்...

Barrier Free Tolling: భారత్‌లో కొత్త రకం టోల్ విధానం.. వాహనాలు ఆపాల్సిన అవసరం లేకుండా…

జాతీయ రహదారులపై ప్రయాణాన్ని మరింత వేగంగా, సులభతరం చేసేందుకు కేంద్ర ప్రభుత్వం...

ರಾಜ್ಯದಲ್ಲಿ ಸಿಎಂ ಕುರ್ಚಿ ಖಾಲಿ ಇಲ್ಲ- ಸಚಿವ ಕೆ.ವೆಂಕಟೇಶ್

ಬೆಳಗಾವಿ,ಏಪ್ರಿಲ್,25,2026 (www.justkannada.in): ‘ರಾಜ್ಯದಲ್ಲಿ  ಸಿಎಂ ಕುರ್ಚಿ ಖಾಲಿ ಇಲ್ಲ. ‘ಅಧಿಕಾರ...