8
August, 2026

A News 365Times Venture

8
Saturday
August, 2026

A News 365Times Venture

ಪತ್ನಿ ಹತ್ಯೆ ಮಾಡಿದ್ದ ಪತಿಗೆ ಮರಣ ದಂಡನೆ ಶಿಕ್ಷೆ ಪ್ರಕಟ

Date:

ಮೈಸೂರು,ಆಗಸ್ಟ್,29,2025 (www.justkannada.in):  ಪತ್ನಿಗೆ ಮಾನಸಿಕ ದೈಹಿಕ ಕಿರುಕುಳ ನೀಡಿ ಮಚ್ಚಿನಿಂದ ಹಲ್ಲೆ ಮಾಡಿ ಹತ್ಯೆ ಮಾಡಿದ್ದ ಆರೋಪಿ ಆಕೆಯ ಪತಿಗೆ ಮರಣ ದಂಡನೆ ಶಿಕ್ಷೆ ವಿಧಿಸಿ ಮೈಸೂರಿನ 5ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶಿಸಿದೆ.

ಮಹೇಶ್ ಮರಣದಂಡನೆ ಶಿಕ್ಷೆಗೆ ಗುರಿಯಾದ ಪತಿ. ಶಿಲ್ಪ ಕೊಲೆಯಾದ ಪತ್ನಿ. 15 ಏಪ್ರಿಲ್ 2024 ರಂದು ಗಾರ್ಮೆಂಟ್ಸ್ ಗೆ ಹೋಗುತ್ತಿದ್ದ ಪತ್ನಿ ಶಿಲ್ಪಾರನ್ನ ಮಹೇಶ್ ಕೊಲೆ ಮಾಡಿ ಪರಾರಿಯಾಗಿದ್ದನು. ಈ ಸಂಬಂಧ ಶಿಲ್ಪಾ ಅವರ ತಂದೆ ಆಲನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.  ಮಹೇಶ್ ಇಸ್ಪೀಟ್ ಚಟಕ್ಕೆ ಬಿದ್ದು ಹಣ ಕಳೆದುಕೊಂಡಿದ್ದು ಮನೆಯಿಂದ ಹಣ ತರುವಂತೆ ನನ್ನ ಮಗಳಿಗೆ ಕಿರುಕುಳ ನೀಡುತ್ತಿದ್ದನು. ಅಲ್ಲದೆ ಮನೆ ಮಾರಾಟ ಮಾಡುವುದಕ್ಕೆ ಸಹಿ ಮಾಡುವಂತೆ ಒತ್ತಾಯ ಮಾಡಿ ಕಿರುಕುಳ ನೀಡಿ ಕೊಲೆ ಬೆದರಿಕೆ ಹಾಕಿದ್ದನು. ನಂತರ ಗಾರ್ಮೆಂಟ್ಸ್ ಗೆ ಹೋಗಿದ್ದ ನನ್ನ ಮಗಳು ಶಿಲ್ಪಾಳನ್ನ  15 ಏಪ್ರಿಲ್ 2024 ರಂದು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿ ಮಹೇಶ್ ಪರಾರಿಯಾಗಿದ್ದನು ಎಂದು ದೂರಿನಲ್ಲಿ ಮೃತ ಶಿಲ್ಪಾರ ತಂದೆ ಉಲ್ಲೇಖಿಸಿದ್ದರು.

ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ನಡೆಸಿ ಆರೋಪಿ ವಿರುದ್ದ ದೋಷಾರೋಪಣ ಪತ್ರ ಸಲ್ಲಿಸಿದ್ದರು.  ಪ್ರಕರಣದ ವಿಚಾರಣೆ ನಡೆಸಿದ 5ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ರೂಪಾ ರವರು ಅಭಿಯೋಜನೆಯು ಹಾಜರುಪಡಿಸಿದ ಸಾಕ್ಷಾಧಾರಗಳನ್ನು ಪರಿಶೀಲಿಸಿ ಆರೋಪಿತನಿಗೆ ಕಲಂ 302 ಐಪಿಸಿ ಅಡಿಯ ಅಪರಾಧಕ್ಕೆ ಮರಣದಂಡನೆ ಶಿಕ್ಷೆ ಮತ್ತು ರೂ.1,00,000/- ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಸದರಿ ಪ್ರಕರಣದಲ್ಲಿ ಮೈಸೂರಿನ 5ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಸರ್ಕಾರಿ ಅಭಿಯೋಜಕರಾದ ಬಿ.ಈ.ಯೋಗೇಶ್ವರ  ಅವರು ಸರ್ಕಾರದ ಪರ ವಾದ ಮಂಡಿಸಿದರು.

Key words: Death penalty, announced ,husband, murdered, wife, Mysore

The post ಪತ್ನಿ ಹತ್ಯೆ ಮಾಡಿದ್ದ ಪತಿಗೆ ಮರಣ ದಂಡನೆ ಶಿಕ್ಷೆ ಪ್ರಕಟ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ಬಿಡದಿ ಟೌನ್ ಶಿಪ್ ವಿರುದ್ದ BJP-JDS ಒಟ್ಟಾಗಿ ಹೋರಾಟ-ಆರ್.ಅಶೋಕ್

ಬೆಂಗಳೂರು,8,2026 (www.justkannada.in): ಬಿಡದಿ ಟೌನ್ ಶಿಪ್ ಯೋಜನೆ  ವಿರುದ್ದ ಜೆಡಿಎಸ್...

தவெக வைத்த பொறியில் சிக்கியதா திமுக? தொகுதி மறுவரையறை விவகாரத்தில் பாஜகவை நெருங்கும் திமுக!

தொகுதி மறுவரையறை தொடர்பாக தமிழக அரசியல் களம் மீண்டும் சூடுபிடித்துள்ள நிலையில்,...

Will Jacks: సూపర్‌మ్యాన్ ఫీల్డింగ్.. అయ్యా బాబోయ్..! ఏంటి జాక్ క్యాచ్ ను అలా పట్టేశావ్.!

Will Jacks: ఇంగ్లండ్‌లో జరుగుతున్న ‘ది హండ్రెడ్ 2026’ టోర్నీలో గురువారం...