7
March, 2026

A News 365Times Venture

7
Saturday
March, 2026

A News 365Times Venture

SIT ದಿಕ್ಕು ತಪ್ಪಿಸುವ ಕೆಲಸ: ಪಾರದರ್ಶಕತೆ ತನಿಖೆಗೆ ಬಿಡಬೇಕು- ಒಡನಾಡಿ ಮುಖ್ಯಸ್ಥ ಸ್ಟಾನ್ಲಿ ಆಗ್ರಹ

Date:

ಮೈಸೂರು,ಆಗಸ್ಟ್,22,2025 (www.justkannada.in): ಧರ್ಮಸ್ಥಳ ಪ್ರಕರಣದಲ್ಲಿ ಎಸ್ ಐಟಿಯ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಸ್ ಐಟಿ ತನಿಖೆ ಪಾರದರ್ಶಕತೆಯಿಂದ ನಡೆಯಲು ಬಿಡಬೇಕು ಎಂದು ಮೈಸೂರಿನಲ್ಲಿ ಜನಪರ ಸಂಘಟನೆಗಳ ವೇದಿಕೆ ಸದಸ್ಯರು ಆಗ್ರಹಿಸಿದ್ದಾರೆ.

ಇಂದು ಈ ಕುರಿತು ಮಾತನಾಡಿದ ಒಡನಾಡಿ ಸಂಸ್ಥೆಯ ಪರಶುರಾಮ್, ಸ್ಟಾನ್ಲಿ ಅವರು, ಎಸ್.ಐ.ಟಿ ಯಾವುದೋ ಬೀದಿ ನಾಯಿ ಅಲ್ಲ. ರಣಬೇಟೆ ಆಡಲು ಬಂದಿರುವ ಬೇಟೆಗಾರ. ಕೆಲವು ರಾಜಕಾರಣಿಗಳು, ಮಾಧ್ಯಮಗಳು, ಯೂಟ್ಯೂಬ್ ಗಳು ಸೇರಿ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಅದು ಖಂಡಿತ ಫಲ ಕೊಡುವುದಿಲ್ಲ ಎಂದರು.

ಮಾಸ್ಕ್ ಮ್ಯಾನ್ ಯಾರೆಂದು ಬಹಿರಂಗ ಪಡಿಸುವುದು ಅಪರಾಧ. ಆತನಿಗೆ ಜೀವ ಭಯವಿದೆ ಅಂತ ಆತನೇ ಹೇಳಿ ರಕ್ಷಣೆ ಪಡೆದುಕೊಂಡಿದ್ದಾನೆ. ಅಂತಹದರಲ್ಲಿ ಆತನ ಹೆಸರು ಊರು ಆತನ ಕುಟುಂಬದವರನ್ನು ಮುನ್ನಲೆಗೆ ತರುವುದು ಸರಿಯಲ್ಲ. ಅಂತವರಿಗೆ ಕಾನೂನಿನಲ್ಲಿ ಕಠಿಣ ಶಿಕ್ಷೆ ಇದೆ. ಇದನ್ನರಿತು ನಾಗರಿಕ ಸಮಾಜ ಸರಿಯಾಗಿ ವರ್ತಿಸಬೇಕು ಎಂದರು.

ಧರ್ಮಸ್ಥಳದ ಬಗ್ಗೆ ಎಲ್ಲರಿಗೂ ಗೌರವವಿದೆ. ಆದರೆ ಅಲ್ಲಿ ನಡೆದಿರುವ ಅಸಹಜ ಸಾವು, ಅನಾಥ ಶವಗಳ ಬಗ್ಗೆ ತನಿಖೆ ನಡೆಯಲಿ. ಸತ್ಯಾತ್ಯತೆ ಹೊರ ಬರಲಿ ಅನ್ನೋದು ಎಲ್ಲರ ಆಶಯ. ಹೋರಾಟಗಾರರನ್ನು ಬಂಧಿಸುವಂತ ಪ್ರಕ್ರಿಯೆ ನಡೆಯುತ್ತಿದೆ. ಸತ್ಯಕ್ಕಾಗಿ ನಾವು ಜೈಲಿಗೆ ಹೋಗಲು ಸಿದ್ದ. ಎಸ್ ಐಟಿ ತನಿಖೆ ವರದಿ ಬರುವವರೆಗೂ ಎಲ್ಲರೂ ಕಾಯಬೇಕು. ಅದನ್ನು ಬಿಟ್ಟು ನಾವೇ ಜಡ್ಜ್ ಗಳಂತೆ ಮಾತನಾಡಿ ಯಾರನ್ನು ಎತ್ತಿ ಕಟ್ಟುವ ಕೆಲಸ ಮಾಡಬಾರದು ಎಂದು ಒಡನಾಡಿ ಪರಶು, ಸ್ಟಾನ್ಲಿ ಹೇಳಿದರು.

Key words: Dharmasthala, SIT, misleading, work, investigation, Mysore, odanadi

The post SIT ದಿಕ್ಕು ತಪ್ಪಿಸುವ ಕೆಲಸ: ಪಾರದರ್ಶಕತೆ ತನಿಖೆಗೆ ಬಿಡಬೇಕು- ಒಡನಾಡಿ ಮುಖ್ಯಸ್ಥ ಸ್ಟಾನ್ಲಿ ಆಗ್ರಹ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

UPSC ಪರೀಕ್ಷೆ ಫಲಿತಾಂಶ ಪ್ರಕಟ: ಅನುಜ್​ ಅಗ್ನಿಹೋತ್ರಿ ದೇಶಕ್ಕೇ ನಂ.1

ನವದೆಹಲಿ,ಮಾರ್ಚ್,6,2026 (www.justkannada.in): ಕೇಂದ್ರ ಲೋಕಸೇವಾ ಸೇವಾ ಆಯೋಗದ (ಯುಪಿಎಸ್​ಸಿ) 2025ನೇ ಸಾಲಿನ...

സ്വന്തം ഊര്‍ജ ആവശ്യങ്ങള്‍ നിറവേറ്റാന്‍ ഇന്ത്യയ്ക്ക് മറ്റൊരു രാജ്യത്തിന്റെ അനുമതി എന്തിന്? സ്റ്റാലിന്‍

ചെന്നൈ: പശ്ചിമേഷ്യയില്‍ സംഘര്‍ഷം തുടരുന്ന സാഹചര്യത്തില്‍ റഷ്യയില്‍ നിന്നും എണ്ണ വാങ്ങുന്നതിനായി...

Vande Bharat Express: రైల్వే ప్రయాణికులకు అలర్ట్.. ఈ వందే భారత్ ట్రైన్ టైమింగ్స్‌ మారాయ్..

హిందూపూర్ స్టేషన్‌లో కాచిగూడ–యశ్వంతపూర్ వందే భారత్ ఎక్స్‌ప్రెస్ సమయాల్లో మార్పులు చేస్తూ...