8
February, 2026

A News 365Times Venture

8
Sunday
February, 2026

A News 365Times Venture

ಆಕ್ರಮಣಕಾರಿ ಬೀದಿನಾಯಿಗಳನ್ನು ಮಾತ್ರ ಸ್ಥಳಾಂತರ ಮಾಡಿ- ಸುಪ್ರೀಂಕೋರ್ಟ್ ಆದೇಶ

Date:

ನವದೆಹಲಿ,ಆಗಸ್ಟ್,22,2025 (www.justkannada.in):  ಬೀದಿ ನಾಯಿಗಳಿಗೆ ಲಸಿಕೆ, ಸಂತಾನ ಹರಣ ಚಿಕಿತ್ಸೆ ಮಾಡಿಸಿ ಬಳಿಕ ಹೊರಗೆ ಬಿಡಬಹುದು. ಆಕ್ರಮಣಕಾರಿ ಬೀದಿನಾಯಿಗಳನ್ನು ಮಾತ್ರ ಆರೈಕೆ ಕೇಂದ್ರಗಳಿಗೆ ಸ್ಥಳಾಂತರ ಮಾಡಿ ಎಂದು ಸುಪ್ರೀಂಕೋರ್ಟ್​ ಆದೇಶಿಸಿದೆ.

ಬೀದಿನಾಯಿಗಳ ಕುರಿತ ಸುಪ್ರೀಂಕೋರ್ಟ್ ಆದೇಶದಲ್ಲಿ ಮಾರ್ಪಾಡು ಮಾಡಲಾಗಿದೆ. ದೆಹಲಿ ಹಾಗೂ ಎನ್​​ಸಿಆರ್​ ನಲ್ಲಿ ಬೀದಿ ನಾಯಿಗಳ ಕಾಟ ವಿಪರೀತವಾಗಿದೆ ಎಂದು ಸುಪ್ರೀಂಕೋರ್ಟ್​​ಗೆ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ಸಂದರ್ಭದಲ್ಲಿ ದೆಹಲಿ-ಎನ್‌ಸಿಆರ್‌ ನ ಸುತ್ತಮುತ್ತಲಿನಲ್ಲಿ ಬೀದಿ ನಾಯಿಗಳನ್ನು ಹಿಡಿದು ಆಶ್ರಯ ತಾಣಗಳಿಗೆ ಸ್ಥಳಾಂತರಿಸುವಂತೆ ಅಧಿಕಾರಿಗಳಿಗೆ ಸುಪ್ರೀಂ ಕೋರ್ಟ್ ಕೆಲ ದಿನಗಳ ಹಿಂದೆ ನಿರ್ದೇಶಿಸಿತ್ತು.

ಆಕ್ರಮಣಕಾರಿ ನಡವಳಿಕೆಯನ್ನು ಪ್ರದರ್ಶಿಸುವ ಅಥವಾ ರೇಬೀಸ್ ಸೋಂಕಿಗೆ ಒಳಗಾದ ನಾಯಿಗಳಿಗೆ ಮೊದಲು ಲಸಿಕೆ ಹಾಕಬೇಕು. ಎಂದು ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ಸಂದೀಪ್ ಮೆಹ್ತಾ ಮತ್ತು ಎನ್.ವಿ. ಅಂಜಾರಿಯಾ ಅವರನ್ನೊಳಗೊಂಡ ಮೂವರು ನ್ಯಾಯಮೂರ್ತಿಗಳ ಪೀಠ ಹೇಳಿದೆ.

ಆರೈಕೆ ಕೇಂದ್ರಗಳಲ್ಲಿ ನಾಯಿಗಳನ್ನು ಕೂಡಿಹಾಕುವಂತಿಲ್ಲ. ಆಕ್ರಮಣಕಾರಿ ನಾಯಿಗಳನ್ನು ಮಾತ್ರ ಶೆಲ್ಟರ್ ಗಳಲ್ಲಿ ಇಡಬೇಕು. ಸಾರ್ವಜನಿಕವಾಗಿ ನಾಯಿಗಳಿಗೆ ಆಹಾರ ಹಾಕಬಾರದು ನಿರ್ದಿಷ್ಟ ಸ್ಥಳದಲ್ಲಿ ಆಹಾರ ಹಾಕಬೇಕು , ನಾಯಿಯನ್ನು ಹಿಡಿದು ಸಂತಾನ ಹರಣ ಶಸ್ತ್ರಚಿಕಿತ್ಸೆ ನೀಡಬೇಕು. ಪ್ರಾಣಿಪ್ರಿಯರು ಶ್ವಾನಗಳನ್ನು ದತ್ತುಪಡೆಯಬೇಕು ಎಂದು  ಸುಪ್ರೀಂಕೋರ್ಟ್ ಕೆಲ ನಿರ್ದೇಶನಗಳನ್ನು ನೀಡಿದೆ.

Key words: aggressive, stray dogs, Supreme Court, orders

The post ಆಕ್ರಮಣಕಾರಿ ಬೀದಿನಾಯಿಗಳನ್ನು ಮಾತ್ರ ಸ್ಥಳಾಂತರ ಮಾಡಿ- ಸುಪ್ರೀಂಕೋರ್ಟ್ ಆದೇಶ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

Cryptocurrency Tragedy: హైదరాబాద్ పాతబస్తీలో విషాదం.. క్రిప్టో నష్టాలతో యువకుడి ఆత్మహత్య

హైదరాబాద్ పాతబస్తీలో క్రిప్టోకరెన్సీ రూపంలో మరో నిండు ప్రాణం బలైంది. వేగంగా...

ಯುವ ಶಾಸಕರು ಡಿಕೆಶಿ ಬೆಂಬಲಕ್ಕೆ ನಿಂತಿದ್ದೇವೆ: ಪ್ರಾಣ ಬೇಕಾದ್ರೂ ಕೊಡ್ತೇವೆ- ಕಾಂಗ್ರೆಸ್ ಶಾಸಕ

ದಾವಣಗೆರೆ,ಫೆಬ್ರವರಿ,7,2026 (www.justkannada.in):  ರಾಜ್ಯದಲ್ಲಿ ಇದೀಗ ಅಧಿಕಾರ ಹಂಚಿಕೆ, ಕುರ್ಚಿ ವಿಚಾರದ...

ഗൊഗോയ് പാക് ചാരനെന്ന് ആവര്‍ത്തിച്ച് ഹിമന്ത; അസം മുഖ്യമന്ത്രി സ്വയം നാണംകെടുകയാണെന്ന് മറുപടി

ഗുവാഹത്തി: കോണ്‍ഗ്രസ് നേതാവും ലോക്‌സഭാ എം.പിയുമായ ഗൗരവ് ഗൊഗോയ്ക്ക് പാകിസ്ഥാനുമായി ബന്ധമുണ്ടെന്ന്...