10
March, 2026

A News 365Times Venture

10
Tuesday
March, 2026

A News 365Times Venture

ಹಾಡಹಗಲೇ ಮನೆಗೆ ನುಗ್ಗಿ ಕಳ್ಳತನ: ಮಾಲೀಕರ ಮುಂದೆಯೇ ಎಸ್ಕೇಪ್ ಆದ ಖದೀಮರು

Date:

ಮೈಸೂರು, ಆಗಸ್ಟ್,14,2025 (www.justkannada.in): ಹಾಡಹಗಲೇ ಮನೆಗೆ ನುಗ್ಗಿ ಕಳ್ಳತನ ಮಾಡಿದ ಖದೀಮರು ಮನೆ ಮಾಲೀಕರ ಮುಂದೆಯೇ ಎಸ್ಕೇಪ್ ಆದ ಘಟನೆ ಮೈಸೂರು ಜಿಲ್ಲೆ ನಂಜನಗೂಡಿನಲ್ಲಿ ನಡೆದಿದೆ.

ನಂಜನಗೂಡಿನ ಚಾಮುಂಡಿ ಟೌನ್ ಶಿಪ್ ನಲ್ಲಿ ಬಡಾವಣೆಯಲ್ಲಿ ಈ ಘಟನೆ ನಡೆದಿದೆ. ಮನೆ ಬೀಗ ಮುರಿದು ಸುಮಾರು 80 ಗ್ರಾಂ ಚಿನ್ನ, 1.40 ಲಕ್ಷ ನಗದು ದೋಚಿದ ದರೋಡೆಕೋರರು  ಮನೆ ಮಾಲೀಕರು ಬಂದರೂ ವಿಚಲಿತರಾಗದೇ ಅಲ್ಲಿಂದ ಎಸ್ಕೇಪ್ ಆಗಿದ್ದಾರೆ.

ಖಾಸಗಿ ಕಂಪನಿ ಉದ್ಯೋಗಿ ಪುನೀತ್ ಕುಮಾರ್ ಎಂಬುವರ ಮನೆಯಲ್ಲಿ ಕಳ್ಳತನ ಮಾಡಲಾಗಿದೆ. ಕೆಲಸ ನಿಮಿತ್ತ ಮನಗೆ ಬೀಗ ಹಾಕಿ ದಂಪತಿ ಹೊರ ಹೋಗಿದ್ದರು.  ಹೊಂಚು ಹಾಕುತ್ತಿದ್ದ ಖದೀಮರು ಮನೆಯ ಹಿಂಬದಿಯ ಬಾಗಿಲನ್ನು ಮೀಟಿ ಕಳ್ಳತನಕ್ಕೆ ಮುಂದಾಗಿದ್ದಾರೆ. ಈ ವೇಳೆ ದಂಪತಿ ಮನೆಗೆ ಹಿಂದಿರುಗಿದ್ದು ಮನೆಯೊಳಗೆ ಪ್ರವೇಶ ಮಾಡುತ್ತಿದ್ದಂತೆ  ಖದೀಮರು ಕಾಂಪೌಂಡ್ ಜಿಗಿದು  ಅವರ ಮುಂದೆಯೇ ಪರಾರಿಯಾಗಿದ್ದಾರೆ.

ಸ್ಥಳಕ್ಕೆ ನಂಜನಗೂಡು ಪಟ್ಟಣ  ಠಾಣಾ ಪೋಲಿಸರು ಭೇಟಿ ನೀಡಿದ್ದು ಶ್ವಾನದಳ ಮತ್ತು ಬೆರಳಚ್ಚು ತಜ್ಞರಿಂದ ಪರಿಶೀಲನೆ ನಡೆಸಲಾಗಿದೆ. ಈ ಕುರಿತು ನಂಜನಗೂಡು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: Robbery, house, escape, in front of, owner, Mysore

The post ಹಾಡಹಗಲೇ ಮನೆಗೆ ನುಗ್ಗಿ ಕಳ್ಳತನ: ಮಾಲೀಕರ ಮುಂದೆಯೇ ಎಸ್ಕೇಪ್ ಆದ ಖದೀಮರು appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ಡಿಕೆಶಿ ಅತ್ಯಂತ ಯಶಸ್ವಿ ಅಧ್ಯಕ್ಷರು: ಪಕ್ಷ ಅಧಿಕಾರಕ್ಕೆ ತರುವುದೇ ಅವರ ಕನಸಾಗಿತ್ತು- ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಬೆಂಗಳೂರು,ಮಾರ್ಚ್,10,2026 (www.justkannada.in): ಕೆಪಿಸಿಸಿ ಅಧ್ಯಕ್ಷರಾಗಿ ಡಿಕೆ ಶಿವಕುಮಾರ್ 6 ವರ್ಷ...

പശ്ചിമേഷ്യന്‍ സംഘര്‍ഷം; എല്‍.പി.ജി വിതരണം ഗാര്‍ഹിക ഉപഭോക്താക്കള്‍ക്കായി പരിമിതപ്പെടുത്തി, ഹോട്ടലുകള്‍ അടച്ചുപൂട്ടലിന്റെ വക്കില്‍

ന്യൂദല്‍ഹി: പശ്ചിമേഷ്യയിലെ സംഘര്‍ഷത്തെ തുടര്‍ന്ന് രാജ്യത്തെ ഹോട്ടലുകള്‍ അടച്ചുപൂട്ടലിന്റെ വക്കില്‍. ഗാര്‍ഹിക...

'உங்க எல்லாரையும் எம்.எல்.ஏ-வா பார்க்கணும்!' – விஜய் `அறிவித்த' 60 வேட்பாளர்கள்?! – முழு விவரம்!

விஜய்யிடம் பாஜக கூட்டணிக்காக பேசிக்கொண்டிருக்கிறது என்கிற தகவல் அரசியல் புயலை கிளப்பியிருக்கும்...

PM Kisan: రైతులకు గుడ్ న్యూస్.. పీఎం కిసాన్ 22వ విడత రిలీజ్ డేట్ ఫిక్స్.. ఆ రోజే ఖాతాల్లోకి

దేశంలోని అన్నదాతలకు ఆర్థిక సాయం అందించేందుకు కేంద్ర ప్రభుత్వం ప్రధానమంత్రి కిసాన్...