ಬೆಂಗಳೂರು,ಜೂನ್,19,2025 (www.justkannada.in): ಮುಸ್ಲೀಂ ಸಮುದಾಯಕ್ಕೆ ಗುತ್ತಿಗೆ ಬಳಿಕೆ ವಸತಿ ಯೋಜನೆಯಲ್ಲೂ ಮೀಸಲಾತಿ ಹೆಚ್ಚಳಕ್ಕೆ ಅನುಮೋದನೆ ನೀಡಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ಭಾರೀ ವಿರೋಧ ವ್ಯಕ್ತವಾಗಿದ್ದು ಈ ಸಂಬಂಧ ಸರ್ಕಾರದ ವಿರುದ್ದ ವಿಧಾನಪರಿಷತ್ ಬಿಜೆಪಿ ಸದಸ್ಯ ಎನ್. ರವಿ ಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಮಾತನಾಡಿರುವ ಎನ್.ರವಿಕುಮಾರ್, ಸರ್ಕಾರ ವಸತಿ ಯೋಜನೆಯಲ್ಲಿ ಮುಸ್ಲೀಮರಿಗೆ 10% ನಿಂದ 15%ಗೆ ಮೀಸಲಾತಿ ಹೆಚ್ಚಿಸುತ್ತಿದೆ. ರಾಜ್ಯದಲ್ಲಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಆಡಳಿತ ಅಲ್ಲ ರಾಜ್ಯದಲ್ಲಿರುವುದು ಟಿಪ್ಪು ಆಡಳಿತ. ಎಲ್ಲ ಸೌಲಭ್ಯಗಳು ಅಲ್ಪ ಸಂಖ್ಯಾತರಿಗೆ ಮಾತ್ರ ಸಿಗುತ್ತಿದೆ. ಎಸ್ ಸಿ,ಎಸ್ ಟಿ ಹಣವನ್ನ ಗ್ಯಾರಂಟಿ ಯೋಜನೆ, ಅಲ್ಪಸಂಖ್ಯಾತರಿಗೆ ನೀಡುತ್ತಿದೆ. ಈ ಮೂಲಕ ಸರ್ಕಾರ ಎಸ್.ಸಿ, ಎಸ್ ಟಿ, ಒಬಿಸಿಗೆ ಅನ್ಯಾಯ ಮಾಡುತ್ತಿದೆ ಎಂದು ಕಿಡಿಕಾರಿದರು.
ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಟಿಪ್ಪು ಸುಲ್ತಾನ್ ಆಡಳಿತ ಅನುಷ್ಟಾನ ಮಾಡುತ್ತಿದ್ದಾರೆ. ಎಲ್ಲಾ ಸೌಲಭ್ಯಗಳನ್ನ ಮುಸ್ಲೀಮರಿಗೆ ನೀಡುತ್ತಿದೆ. ಸರ್ಕಾರದ ಕ್ರಮದ ವಿರುದ್ದ ಹೋರಾಟ ಮಾಡುತ್ತೇವೆ ಎಂದು ರವಿಕುಮಾರ್ ಹರಿಹಾಯ್ದರು.
Key words: Increase, reservation, Muslims, injustice, N Ravikumar
The post ಮುಸ್ಲೀಮರಿಗೆ ಮೀಸಲಾತಿ ಹೆಚ್ಚಳ: ಎಸ್.ಸಿ, ಎಸ್ ಟಿ, ಒಬಿಸಿಗೆ ಅನ್ಯಾಯ-ಎನ್. ರವಿಕುಮಾರ್ ಕಿಡಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.