13
March, 2026

A News 365Times Venture

13
Friday
March, 2026

A News 365Times Venture

ಚಾಮನಹಳ್ಳಿ ಕೆರೆಗೆ ಜಿ.ಪಂ CEO ಭೇಟಿ, ಪರಿಶೀಲನೆ

Date:

ಮೈಸೂರು,ಜೂನ್,18,2025 (www.justkannada.in): ಜಿಲ್ಲೆಯ ತಿ. ನರಸೀಪುರ ತಾಲ್ಲೂಕು ಬನ್ನೂರು ಹೋಬಳಿ ವ್ಯಾಪ್ತಿಯ ಚಾಮನಹಳ್ಳಿ ಕೆರೆಗೆ ಮೈಸೂರು ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಕ ಅಧಿಕಾರಿಗಳಾದ ಯುಕೇಶ್‌ ಕುಮಾರ್‌  ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಚಾಮನಹಳ್ಳಿ ಕೆರೆಯ ಮೀನುಪಾಶವಾರು ಹಕ್ಕನ್ನು ಶ್ರೀ ಚಾಮುಂಡೇಶ್ವರಿ ಮೀನುಗಾರರ ಸಹಕಾರ ಸಂಘ ಚಾಮನಹಳ್ಳಿರವರಿಗೆ ವಹಿಸಲಾಗಿದ್ದು ಸದರಿ ಕೆರೆಯಲ್ಲಿ ಪಾಲನೆಯಲ್ಲಿರುವ ರೋಹು ತಳಿ ಮೀನುಮರಿಗಳ ಬೆಳವಣಿಗೆಯನ್ನು ಪರಿಶೀಲಿಸಿದರು.

ಸಹಕಾರ ಸಂಘದ ವತಿಯಿಂದಲೇ ಮೀನು ಮಾರಾಟ ಮಾಡುವುದರಿಂದ ದಲ್ಲಾಳಿಗಳ ಮಧ್ಯಸ್ಥಿಕೆ ಇಲ್ಲದೇ ಹೆಚ್ಚಿನ ಲಾಭ ಗಳಿಸಬುಹುದಾಗಿದೆ ಎಂದು ಸಹಕಾರ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳಿಗೆ ಸಲಹೆ ನೀಡಿದರು.

ಸಂಘದ ಅಧ್ಯಕ್ಷರು ಮಾತನಾಡಿ, ಮೀನು ಮಾರಾಟ ಮಾಡಲು ಹಾಗೂ ಉಪಹಾರ ಗೃಹ ಮಾಡಲು ಸ್ಳಳಾವಕಾಶ ಕಲ್ಲಿಸಿಕೊಡುವಂತೆ ಹಾಗೂ ಕೆರೆಯಲ್ಲಿ ಬೆಳೆದಿರುವ ಜಲಸಸ್ಯ, ಕೆರೆಯ ಏರಿ ದುರಸ್ಥಿ ಮತ್ತು ಹೂಳು ತೆಗೆಸಿಕೊಡುವಂತೆ ಮನವಿ ಮಾಡಿದರು. ಇದಕ್ಕೆ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಯುಕೇಶ್‌ ಕುಮಾರ್‌  ಸಂಬಂಧಪಟ್ಟ ಇಲಾಖೆಗಳೊಂದಿಗೆ ಚರ್ಚಿಸಿ ನಿಯಮಾನುಸಾರ ಕ್ರಮವಹಿಸಲಾಗುವುದೆಂದು ತಿಳಿಸಿದರು.

ಈ ವೇಳೆ ಮೀನುಗಾರಿಕೆ ಇಲಾಖೆ  ಉಪನಿರ್ದೇಶಕ ಮಂಜುನಾಥ್‌,  ಸಹಾಯಕ ನಿರ್ದೇಶಕರು ಮೀನುಗಾರಿಕೆ ಇಲಾಖೆ ಹಾಗೂ ಸಹಕಾರ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.vtu

Key words: Mysore, ZP, CEO, visits, Chamanahalli Lake

The post ಚಾಮನಹಳ್ಳಿ ಕೆರೆಗೆ ಜಿ.ಪಂ CEO ಭೇಟಿ, ಪರಿಶೀಲನೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ಡ್ಯಾಂಗಳ ಹಳೇ ಗೇಟು ಬದಲಾವಣೆಗೆ ಸರ್ಕಾರ ಸಿದ್ದ- ಡಿಸಿಎಂ ಡಿಕೆ ಶಿವಕುಮಾರ್

ಬೆಂಗಳೂರು,ಮಾರ್ಚ್,12,2026 (www.justkannada.in): ಡ್ಯಾಂಗಳ ಹಳೇ ಗೇಟು ಬದಲಾವಣೆಗೆ ಸರ್ಕಾರ ಸಿದ್ದವಿದೆ...

ട്രംപിന്റെ ഭീഷണി വകവെയ്ക്കാതെ ശ്രീലങ്ക; അമേരിക്ക കൊലപ്പെടുത്തിയ 84 നാവികരുടെ മൃതദേഹങ്ങൾ ഇറാന് കൈമാറും

കൊളംബോ: കഴിഞ്ഞയാഴ്ച അമേരിക്ക ആക്രമിച്ച ഇറാന്റെ യുദ്ധക്കപ്പലായ ഐറിസ് ദേനയിൽ ഉണ്ടായിരുന്ന...

`எங்க ஆளுங்கதான், ஆனா திமுக MLA' – ஒற்றை சீட் எனும் முட்டுச் சந்தில் மதிமுக! – காரணம் யார்?

நேற்று மாலை முதல் சமூக ஊடகங்கள் முழுக்க கட்சியில் மிச்சமிருக்கிற மதிமுக...

CM Revanth Reddy: అల్లు అర్జున్ హాలీవుడ్‌లో కూడా రాణించాలి.. సీఎం రేవంత్ రెడ్డి..

హైదరాబాద్ కోకాపేటలో అల్లు కుటుంబం ప్రతిష్టాత్మకంగా నిర్మించిన ‘అల్లు సినిమాస్’ మల్టీప్లెక్స్‌ను...