21
September, 2026

A News 365Times Venture

21
Monday
September, 2026

A News 365Times Venture

SAF ರಚನೆಯಿಂದ ಉಡುಪಿ ಘನತೆಗೆ ಧಕ್ಕೆಯಾಗಲ್ಲ- ಗೃಹ ಸಚಿವ ಡಾ.ಜಿ.ಪರಮೇಶ್ವರ್

Date:

ಉಡುಪಿ,ಜೂನ್,14,2025 (www.justkannada.in): ಕೋಮು ದಳ್ಳುರಿ ನಿಗ್ರಹಕ್ಕಾಗಿ ರಚನೆ ಮಾಡಲಾಗಿರುವ ಎಸ್‌ಎಎಫ್‌ ನಿಂದ ಉಡುಪಿ ಘನತೆಗೆ ಧಕ್ಕೆಯಾಗುವುದಿಲ್ಲ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದರು.

ಎಸ್‌ಎಎಫ್‌ ವ್ಯಾಪ್ತಿಗೆ ಸೇರಿಸಿರುವುದರಿಂದ ಬ್ರ್ಯಾಂಡ್‌ ಉಡುಪಿ ಘನತೆಗೆ ಧಕ್ಕೆಯಾಗಿದೆ ಎಂಬ ಶಾಸಕ ಯಶ್‌ ಪಾಲ್‌ ಸುವರ್ಣ ಅವರ ಹೇಳಿಕೆ ಕುರಿತು ಮಾತನಾಡಿದ ಗೃಹ ಸಚಿವ ಡಾ.ಜ.ಪರಮೇಶ್ವರ್, ಕೋಮು ನಿಗ್ರಹಕ್ಕಾಗಿ ರಚನೆಯಾಗಿರುವ ವಿಶೇಷ ಕಾರ್ಯಪಡೆಯ  ವ್ಯಾಪ್ತಿಗೆ ಸೇರಿಸಿರುವುದರಿಂದ ಉಡುಪಿ ಜಿಲ್ಲೆಯ ಘನತೆಗೆ ಧಕ್ಕೆಯಾಗುವುದಿಲ್ಲ. ಕರಾವಳಿ ಭಾಗದಲ್ಲಿ ನಡೆದಿರುವ ಮತ್ತು ನಡೆಯುತ್ತಿರುವ ಘಟನಾವಳಿಗಳ ಆಧಾರದಲ್ಲಿ ಕಾರ್ಯಪಡೆ ರಚನೆ ಮಾಡಲಾಗಿದೆ. ಯಾವುದೇ ಜಿಲ್ಲೆಯನ್ನು ಕೋಮು ಸೂಕ್ಷ್ಮ ಪ್ರದೇಶ ಎಂದು ಬಿಂಬಿಸುವ ಸಲುವಾಗಿ ಮಾಡಿಲ್ಲ ಎಂದರು.

ಈ ಮಧ್ಯೆ ಕಾರ್ಕಳ ಭಾಗದಲ್ಲಿ ನಕ್ಸಲ್‌ ನಿಗ್ರಹ ಪಡೆಯ  ಮುಖ್ಯ ಕಚೇರಿ ಆರಂಭಿಸಿದ್ದೆವು. ಎಎನ್‌ಎಫ್‌ನಿಂದ ಉಡುಪಿಯ ಘನತೆ ಕಡಿಮೆಯಾಯಿತೇ..? ನಕ್ಸಲರಿಂದ ಬಹಳಷ್ಟು ಜನರ ಹತ್ಯೆ ಆಗಿತ್ತು. ಅಂತಹ ಪರಿಸ್ಥಿತಿಯಲ್ಲಿ ಉಡುಪಿಯಲ್ಲಿ ಎಎನ್‌ಎಫ್ ಕಚೇರಿ ಆರಂಭಿಸಿದ್ದೆವು. ಕೋಮುವಾದಕ್ಕೆ ಸಂಬಂಧಪಟ್ಟ ಪ್ರಕರಣಗಳು ನಡೆಯದಿದ್ದಲ್ಲಿ ಎಸ್‌ಎಎಫ್‌ ಅಗತ್ಯ ಬರುವುದಿಲ್ಲ ಎಂದು ಪರಮೇಶ್ವರ್ ತಿಳಿಸಿದರು.vtu

Key words: Udupi, dignity, SAF, Home Minister, Dr G Parameshwar

The post SAF ರಚನೆಯಿಂದ ಉಡುಪಿ ಘನತೆಗೆ ಧಕ್ಕೆಯಾಗಲ್ಲ- ಗೃಹ ಸಚಿವ ಡಾ.ಜಿ.ಪರಮೇಶ್ವರ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ബ്രാഹ്‌മണ്യത്തെ ഹൃദയത്തില്‍ കൊണ്ടുനടക്കുന്നവരാണ് ഈഴവര്‍: ജി.സുധാകരന്‍

ആലപ്പുഴ: ബ്രാഹ്‌മണ്യത്തെ ഹൃദയത്തില്‍ കൊണ്ടുനടക്കുന്ന ബ്രാഹ്‌മണരല്ലാത്ത വിഭാഗമാണ് കേരളത്തിന്റെ 33 ശതമാനം...

“தொழிலதிபர் வீரமணி தப்பியது எப்படி? ஸ்டாலின் பதில்சொல்ல வேண்டும்" – அமைச்சர் நிர்மல் குமார்

திமுக ஆட்சிக் காலத்தில் சிறுமிகள் மீதான பாலியல் குற்றச்சாட்டில் சிக்கிய ஜெம்...

Botsa Satyanarayana: 40 సంవత్సరాలుగా రాజకీయాల్లో ఉన్నాం.. ఒకరు పోతే వంద మంది వస్తారు…

విజయనగరంలో జరిగిన వైఎస్సార్‌సీపీ సమావేశంలో శాసన మండలి ప్రతిపక్ష నేత బొత్స...

ಒಬ್ಬ ನಿರಪರಾಧಿಯ ರಾಜೀನಾಮೆ ಪಡೆದಿದ್ದೇನೆ- ಸಿಎಂ ಡಿಕೆ ಶಿವಕುಮಾರ್‌

ಬೆಂಗಳೂರು,ಸೆಪ್ಟಂಬರ್‌,21,2026 (www.justkannada.in) ರಾಜ್ಯದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ವಿಧಾನಮಂಡಲ...