28
August, 2026

A News 365Times Venture

28
Friday
August, 2026

A News 365Times Venture

ದಸರಾಗೆ 49.61ಕೋಟಿ ರೂಪಾಯಿ ಖರ್ಚು ಮಾಡುವ ಅವಶ್ಯಕತೆ ಇತ್ತಾ..? MLC ಹೆಚ್.ವಿಶ್ವನಾಥ್ ಕಿಡಿ

Date:

ಮೈಸೂರು,ಜೂನ್,14,2025 (www.justkannada.in):  ಮೈಸೂರು ದಸರಾ ಲೆಕ್ಕವನ್ನು 8 ತಿಂಗಳ ಬಳಿಕ ಕೊಟ್ಟಿದ್ದಾರೆ, 49.61ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ. ಸರ್ಕಾರದ ಹಣವನ್ನು ಇಷ್ಟೊಂದು ಖರ್ಚು ಮಾಡುವ ಅವಶ್ಯಕತೆ ಇತ್ತಾ? ಎಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಕಿಡಿಕಾರಿದ್ದಾರೆ.

ಈ ಕುರಿತು ಇಂದು ಮಾತನಾಡಿದ ಹೆಚ್.ವಿಶ್ವನಾಥ್,  40% ಹಣವನ್ನು ಬರೀ ಯುವ ದಸರಾ ಎಂದು ಖರ್ಚು ಮಾಡಿದ್ದಾರೆ. 2003ರಲ್ಲಿ ನಾವು ದಸರಾ ಮಾಡುವಾಗ ಸರ್ಕಾರದಿಂದ ಅನುದಾನ ಸಿಕ್ಕಿರಲಿಲ್ಲ. ಖಾಸಗಿ ಕಂಪನಿಗಳಿಂದ ಸ್ಪಾನ್ಸರ್ ಶಿಪ್ ಪಡೆದು ದಸರಾ ಮಾಡಿದ್ದೆವು. ಮಾವುತರನ್ನು ಸನ್ಮಾನಿಸಿ ಆನೆಗಳನ್ನು ಕ್ಯಾಂಪ್ ನಿಂದ ಕಾಲು ನಡಿಗೆಯಲ್ಲಿ ಮೈಸೂರಿಗೆ ಕರೆ ತರುತ್ತಿದ್ದೆವು. ಹೀಗೇ ಮುಂದುವರೆದರೆ ಮುಂದಿನ ದಿನಗಳಲ್ಲಿ 100 ಕೋಟಿ ರೂಪಾಯಿಯಲ್ಲಿ ದಸರಾ ಮಾಡುತಾರೆ.

ಇವೆಲ್ಲವನ್ನು ಬಿಟ್ಟು ಮೊದಲು ಅರಮನೆ ಲೂಟಿಯಾಗುವುದನ್ನು ತಡೆಯಿರಿ. ಸುಬ್ರಹ್ಮಣ್ಯ ಎಂಬ ಅಧಿಕಾರಿ ಅರಮನೆಯನ್ನು ಲೂಟಿ ಮಾಡುತ್ತಿದ್ದಾರೆ. ಮೈಸೂರು ಉಸ್ತುವಾರಿ ಸಚಿವ ಮಹದೇವಪ್ಪ, ಸುಬ್ರಹ್ಮಣ್ಯನನ್ನು ತೆಗೆಯಲು ಕಷ್ಟ ಎಂದು ಹೇಳುತ್ತಿದ್ದಾರೆ. ದುಡ್ಡು ಕೊಟ್ಟು ಎಲ್ಲರನ್ನೂ ಕೊಂಡುಕೊಂಡಿದ್ದಾರೆ ಎಂದು ಹೇಳುತ್ತಾರೆ. ಅರಮನೆಯಲ್ಲಿ ಆಗುತ್ತಿರುವ ಅಕ್ರಮವನ್ನು ಮೊದಲು ತಡೆಯಿರಿ ಎಂದು ಎಚ್ ವಿಶ್ವನಾಥ್ ಆಗ್ರಹಿಸಿದರು.vtu

Key words: Mysore Dasara, spent, Rs 49.61 crore,  MLC, H.Vishwanath

The post ದಸರಾಗೆ 49.61ಕೋಟಿ ರೂಪಾಯಿ ಖರ್ಚು ಮಾಡುವ ಅವಶ್ಯಕತೆ ಇತ್ತಾ..? MLC ಹೆಚ್.ವಿಶ್ವನಾಥ್ ಕಿಡಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ಆ.29ಕ್ಕೆ ಡಾ. ಶಿವರಾತ್ರಿ ರಾಜೇಂದ್ರ ಶ್ರೀಗಳ 111ನೇ ಜಯಂತಿ: ಭಾಗಿಯಾಗಲಿದ್ದಾರೆ ಸಿಎಂ ಡಿಕೆಶಿ, ಸಿದ್ದರಾಮಯ್ಯ

ಮೈಸೂರು, ಆಗಸ್ಟ್,27,2026 (www.justkannada.in): ಸುತ್ತೂರು ಜಗದ್ಗುರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ...

പിടികിട്ടാപ്പുള്ളി സുകുമാര കുറിപ്പിനെ തപ്പി വീണ്ടുമിറങ്ങും: ബ്രൂണോയിലെ വയോധികനെ കണ്ടെത്താന്‍ ചെന്നിത്തലയുടെ നിര്‍ദേശം: അന്വേഷണം ക്രൈം ബ്രാഞ്ചിന്

തിരുവനന്തപുരം: പിടികിട്ടാപ്പുള്ളി സുകുമാര കുറുപ്പിന്റെ രൂപ സാദൃശ്യമുള്ള വയോധികനെ ബ്രൂണോയില്‍ കണ്ടെത്തിയതിന്...

"மேகதாது அணை தமிழகத்திற்கே உதவும்; உச்ச நீதிமன்றத் தீர்ப்பைக் காப்பாற்றுவேன்" – கர்நாடக முதல்வர்

கர்நாடகாவின் முதலமைச்சராக டி.கே.சிவகுமார் பதவியேற்ற பின், தமிழ்நாட்டிலும், கர்நாடகாவிலும் மேகதாது அணைப்...

OTR: సీట్ల పంపకానికి ముందే ‘నోట్ల’ పంచాయితీ! టీడీపీ-జనసేనలో కొత్త టెన్షన్

OTR: యాందిసామీ…. దుడ్లెట్టా…! ఎవుడు పెట్టుకుంటాడు? ఉమ్మడి చిత్తూరు జిల్లా కూటమిలో...