5
May, 2026

A News 365Times Venture

5
Tuesday
May, 2026

A News 365Times Venture

ಮೈಸೂರು ವಿಮಾನ ನಿಲ್ದಾಣ ವಿಸ್ತರಣೆಗೆ ಈಗಾಗಲೇ 230 ಎಕರೆ ಭೂ ಸ್ವಾಧೀನ –ಸಚಿವ ಹೆಚ್.ಸಿ ಮಹದೇವಪ್ಪ

Date:

ಮೈಸೂರು,ಜೂನ್,11,2025 (www.justkannada.in): ಮೈಸೂರಿನ ವಿಮಾನ ನಿಲ್ದಾಣ ವಿಸ್ತರಣೆಗೆ ಈಗಾಗಲೇ 230 ಎಕರೆ ಭೂ ಸ್ವಾಧೀನ ಮಾಡಲಾಗಿದೆ. ಉಳಿದ ಇನ್ನು 10 ಎಕರೆ ಶೀಘ್ರದಲ್ಲೇ ಭೂಸ್ವಾಧೀನ ಮಾಡಲಾಗುತ್ತದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ ಮಹದೇವಪ್ಪ ತಿಳಿಸಿದರು.

ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ ಮಹಾದೇವಪ್ಪ, ಮೈಸೂರು ಊಟಿ ಹೈವೆ ರಸ್ತೆ ಸ್ಥಳಾಂತರಕ್ಕೂ ಸುಮಾರು 60 ಎಕರೆ ಭೂ ಪ್ರದೇಶವನ್ನ ಭೂ ಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ. ಜೊತೆಗೆ ವಿಮಾನ ನಿಲ್ದಾಣ ವಿಸ್ತರಣೆ ವೇಳೆ ಮೂರು ನೀರಾವರಿ ಚಾನಲ್ ನಿಲ್ದಾಣದ ಒಳಗೆ ಸೇರ್ಪಡೆ ಆಗುತ್ತದೆ. ಹಾಗಾಗಿ ಚಾನೆಲ್ ಗಳಿಗೆ ಬಾಕ್ಸ್ ಬ್ರಿಡ್ಜ್ ನಿರ್ಮಾಣಕ್ಕೆ ಸರ್ಕಾರದಿಂದಲೇ 100 ಕೋಟಿ ಮೀಸಲಿಡಲು ನಿರ್ಧಾರ ಮಾಡಿದೆ. ಜೊತೆಗೆ ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸುಮಾರು 800 ಎಕರೆ ಜಾಗ ಮೀಸಲಿರಿಸಿದ್ದು ಈಗಾಗಲೇ ಭೂ ಸ್ವಾಧೀನ ಪ್ರಕ್ರಿಯೆ ನಡೆದಿದೆ ಎಂದರು.

ರೈತರಿಗೆ ಸೂಕ್ತ ಪರಿಹಾರ ಕೊಟ್ಟು ಭೂಮಿ ಖರೀದಿ ಮಾಡಲಾಗುತ್ತದೆ. ತಕರಾರು ಮಾಡಿ ಕೋರ್ಟ್ ಮೊರೆ ಹೋಗುವವರ ಮನ ಒಲಿಸಲಾಗುತ್ತದೆ. ಡೀಮ್ಡ್ ಫಾರೆಸ್ಟ್ ಅಡಿ ಒಂದಷ್ಟು ರೈತರ ಜಮೀನುಗಳನ್ನ ಅರಣ್ಯ ಇಲಾಖೆ ವಶಪಡಿಸಿಕೊಂಡು ರೈತರಿಗೆ ತೊಂದರೆ ಕೊಡುತ್ತಿದೆ. ಮರು ಸರ್ವೆ ಮಾಡಿ ರೈತರಿಗೆ ತೊಂದರೆ ಆಗದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಚಿವ ಮಹದೇವಪ್ಪ ತಿಳಿಸಿದರು.vtu

Key words: 230 acres, land acquisition, expansion, Mysore Airport, HC Mahadevappa

The post ಮೈಸೂರು ವಿಮಾನ ನಿಲ್ದಾಣ ವಿಸ್ತರಣೆಗೆ ಈಗಾಗಲೇ 230 ಎಕರೆ ಭೂ ಸ್ವಾಧೀನ –ಸಚಿವ ಹೆಚ್.ಸಿ ಮಹದೇವಪ್ಪ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

എന്നെ ജയിപ്പിച്ചത് ഹിന്ദുക്കള്‍, അവര്‍ക്ക് വേണ്ടി പ്രവര്‍ത്തിക്കും; മുസ്‌ലിം വോട്ടുകള്‍ പൂര്‍ണമായും തൃണമൂലിന് പോയി: സുവേന്ദു അധികാരി

ഹാല്‍ദിയ: പശ്ചിമ ബംഗാള്‍ നിയമസഭാ തെരഞ്ഞെടുപ്പില്‍ തൃണമൂല്‍ കോണ്‍ഗ്രസിനെ പരാജയപ്പെടുത്തി ബി.ജെ.പി...

TVK: 'சென்னைவாசி, சிபி சத்யராஜின் ஆதரவு' – சிங்காநல்லூரை வென்ற ஸ்ரீ கிரி பிரசாத்தின் பின்னணி என்ன?

சிங்காநல்லூர் தொகுதியில் மொத்தம் உள்ள 2 லட்சத்து 69 ஆயிரத்து 941...

Gold and Silver Prices: మళ్లీ తగ్గుతున్న బంగారం, వెండి ధరలు..

Gold and Silver Prices: బంగారం, వెండి ధరలు ఇటీవల వరుసగా...

ಶೃಂಗೇರಿಯಲ್ಲಿ ವೋಟ್ ಟ್ಯಾಂಪರಿಂಗ್: ಅಂಚೆ ಮತಗಳನ್ನ ತಿದ್ದಲಾಗಿದೆ- ಸಿಎಂ ಸಿದ್ದರಾಮಯ್ಯ

ಬೆಂಗಳೂರು,ಮೇ,5,2026 (www.justkannada.in):  ಶೃಂಗೇರಿಯಲ್ಲಿ ವೋಟ್ ಟ್ಯಾಂಪರಿಂಗ್ ಆಗಿದೆ. ಮರು ಮತ...