17
June, 2026

A News 365Times Venture

17
Wednesday
June, 2026

A News 365Times Venture

ಹೊಸದಾಗಿ ನಡೆಯುವ ಜಾತಿಗಣತಿಗೆ ಎಲ್ಲರೂ ಸಹಕಾರ ನೀಡಿ- ಡಿಸಿಎಂ ಡಿಕೆ ಶಿವಕುಮಾರ್

Date:

ನವದೆಹಲಿ,ಜೂನ್,10,2025 (www.justkannada.in): ಜಾತಿಗಣತಿಗೆ ಅಪಸ್ವರಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಹೊಸದಾಗಿ ಜಾತಿಗಣತಿ  ಸಮೀಕ್ಷೆಗೆ ಹೈಕಮಾಂಡ್ ಸೂಚಿಸಿದೆ. ಹೀಗಾಗಿ ಹೊಸದಾಗಿ ನಡೆಯುವ ಜಾತಿಗಣತಿಗೆ ಎಲ್ಲರೂ ಸಹಕಾರ ನೀಡಿ ಎಂದು  ಡಿಸಿಎಂ ಡಿಕೆ ಶಿವಕುಮಾರ್ ಮನವಿ ಮಾಡಿದರು.

ಇಂದು ಹೈಕಮಾಂಡ್ ಜೊತೆ ಸಭೆ ಬಳಿಕ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್,  ಜೂನ್ 12ರಂದು ಜಾತಿಗಣತಿ ವರದಿ ಬಗ್ಗೆ ತೀರ್ಮಾನ ಮಾಡಲು ನಿಗದಿ ಆಗಿತ್ತು. ಜಾತಿಗಣತಿ ಬಗ್ಗೆ ಚರ್ಚಿಸಲು ವಿಶೇಷ ಸಂಪುಟ ಕರೆಯಲಾಗಿತ್ತು. ಜಾತಿಗಣತಿ ಬಗ್ಗೆ ಅನೇಕ ಮಠಾಧೀಶರು ವರಿಷ್ಠರನ್ನು ಭೇಟಿಯಾಗಿ ಸಂಖ್ಯೆಯ ‌ಬಗ್ಗೆ ಆಕ್ಷೇಪ ಇದೆ ಅಂತಾ ಕೆಲವರು ಹೇಳಿದ್ದರು. ಹೀಗಾಗಿ  ಅಪಸ್ವರ ಬರಬಾರದೆಂಬ ಉದ್ದೇಶದಿಂದ ಮತ್ತೆ ಜಾತಿಗಣತಿಗೆ ಸಲಹೆ ನೀಡಿದ್ದಾರೆ.  ಅದ್ದರಿಂದ ಮತ್ತೆ ಜಾತಿಗಣತಿ ಸಮೀಕ್ಷೆ ಮಾಡಲು ತೀರ್ಮಾನಿಸಿದ್ದೇವೆ. ಹೊಸದಾಗಿ ನಡೆಯುವ ಜಾತಿಗಣತಿಗೆ ಎಲ್ಲರೂ ಸಹಕಾರ ನೀಡಿ ಎಂದರು.

ನಮ್ಮ ಸರ್ಕಾರದ ಬಗ್ಗೆ ಯಾರಿಗೂ ಆತಂಕ ಬೇಡ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಮೀಕ್ಷೆ ಮಾಡಲಿದ್ದೇವೆ. ಯಾವಾಗ ಸಮೀಕ್ಷೆ ಎಂದು ಸಂಪುಟ ಸಭೆ ಮಾಡಿ ಸಿಎಂ ತಿಳಿಸುತ್ತಾರೆ. ಆನ್​​ಲೈನ್​ ಮೂಲಕವೂ ಮಾಹಿತಿ ನೀಡಲು ಅವಕಾಶ ನೀಡುತ್ತೇವೆ. ಅಪಸ್ವರ ಕೇಳಿ ಬಂದಿರುವುದಿಂದ ಮತ್ತೆ ಸಮೀಕ್ಷೆಮಾಡುತ್ತಿದ್ದೇವೆ ಎಂದು ಡಿಕೆ ಶಿವಕುಮಾರ್ ತಿಳಿಸಿದರು.vtu

Key words: Everyone,  cooperate, new, caste census, DCM, DK Shivakumar

The post ಹೊಸದಾಗಿ ನಡೆಯುವ ಜಾತಿಗಣತಿಗೆ ಎಲ್ಲರೂ ಸಹಕಾರ ನೀಡಿ- ಡಿಸಿಎಂ ಡಿಕೆ ಶಿವಕುಮಾರ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

പി.എം. ശ്രീയും എസ്.എസ്.കെയും രണ്ട് പദ്ധതികള്‍: മുന്‍ സര്‍ക്കാര്‍ കാരണം പി.എം. ശ്രീയില്‍ തുടരുന്നെന്ന വി.ഡി സതീശന്റെ വാദം തെറ്റെന്ന് വി.ശിവന്‍കുട്ടി

തിരുവനന്തപുരം: പി.എം. ശ്രീ പദ്ധതിയില്‍ കഴിഞ്ഞ സര്‍ക്കാര്‍ ഒപ്പുവച്ചതിനാല്‍ ഇപ്പോഴത്തെ സര്‍ക്കാര്‍...

102 நாள்களுக்குப் பிறகு தகனம் செய்யப்பட்ட ஆகாஷ் டெலிசன் உடல்; கதறித் துடித்த பெற்றோர்!

சிவகங்கை மாவட்டம், மானாமதுரை, கிருஷ்ணராஜபுரம் காலனியைச் சேர்ந்த ரஜேஷ்கண்ணன் - ஆனந்தி...

Gudivada Amarnath: హోంమంత్రి గారు ఆ రోజు మహిళా లోకం గుర్తుకు రాలేదా?.. ఎక్కడైనా ఫిర్యాదు చేసుకోండి!

హోంమంత్రి వంగలపూడి అనితపై చేసిన వ్యాఖ్యల వివాదంపై వైసీపీ నేత, మాజీ...

ನಿಯತಕಾಲಿಕೆಗಳು ಜೂ. 30 ರೊಳಗೆ ವಾರ್ಷಿಕ ವರದಿ ಸಲ್ಲಿಸದಿದ್ದರೆ 10,000 ರೂ. ದಂಡ

ನವದೆಹಲಿ / ಬೆಂಗಳೂರು, ಜೂನ್‌,17,2026 (www.justkannada.in): ವಾರ್ಷಿಕ ವರದಿಗಳನ್ನು (Annual...