11
March, 2026

A News 365Times Venture

11
Wednesday
March, 2026

A News 365Times Venture

ಪಾಕ್‌ ಪರ ಘೋಷಣೆ ಕೂಗಿದ್ದ ಟೆಕ್ಕಿಯ ಬಂಧನ

Date:

ಬೆಂಗಳೂರು, ಮೇ 14,2025 (www.justkannada.in):  ಆಪರೇಷನ್‌ ಸಿಂಧೂರ್‌ ಯಶಸ್ಸಿನ ಸಂಭ್ರಮಾಚರಣೆ ವೇಳೆ ಪಾಕಿಸ್ತಾನ ಪರ ಘೋಷಣೆ ಕೂಗಿದ ಟೆಕ್ಕಿಯನ್ನು ಬೆಂಗಳೂರಿನ ವೈಟ್‌ಫೀಲ್ಡ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಪ್ರಶಾಂತ್‌ ಲೇಔಟ್‌ ನ ಪಿಜಿವೊಂದರಲ್ಲಿ ನೆಲೆಸಿದ್ದ ಛತ್ತೀಸ್‌‍ಗಡ ಮೂಲದ ಶುಭಾಂಶು ಶುಕ್ಲಾ (25) ಬಂಧಿತ ಟೆಕ್ಕಿ. ಈತ ಸಾಫ್ಟ್ ವೇರ್‌ ಎಂಜಿನಿಯರ್‌ ಆಗಿದ್ದು,  ಕಟ್ಟಡದ ಬಾಲ್ಕನಿಯಲ್ಲಿ ನಿಂತುಕೊಂಡು ಪಾಕಿಸ್ತಾನ ಪರ ಘೋಷಣೆ ಕೂಗಿದ್ದ ಎನ್ನಲಾಗಿದೆ.

ಪಿಜಿಯ ಕೊಠಡಿಯೊಂದರಲ್ಲಿ ಶುಭಾಂಶು ಶುಕ್ಲಾ ತನ್ನ ಸ್ನೇಹಿತನ ಜೊತೆ ವಾಸವಾಗಿದ್ದು, ಮೇ 9 ರಂದು ಮಧ್ಯರಾತ್ರಿ 12.30ರ ವೇಳೆಯಲ್ಲಿ ಪಿಜಿಯಲ್ಲಿದ್ದ ಹಲವು ಯುವಕರು ಸೇರಿಕೊಂಡು ಆಪರೇಷನ್‌ ಸಿಂಧೂರ್‌ ಯಶಸ್ಸಿನ ಸಂಭ್ರಮಾಚರಣೆ ಮಾಡುತ್ತಿದ್ದರು. ಈ ಸಮಯದಲ್ಲಿ ಬಾಲ್ಕನಿಯಲ್ಲಿ ನಿಂತು ಶುಭಾಂಶು ಶುಕ್ಲಾ ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾನೆ ಎನ್ನಲಾಗಿದೆ.

ಸಂಭ್ರಮಾಚರಣೆಯಲ್ಲಿದ್ದ ಯುವಕರು ತಕ್ಷಣ ಕಂಟ್ರೋಲ್‌ ರೂಂಗೆ ಕರೆ ಮಾಡಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಶುಭಾಂಶು ಶುಕ್ಲಾನನ್ನು ವಶಕ್ಕೆ ಪಡೆದಿದ್ದಾರೆ.

Key words: Techie, arrested ,shouting, pro-Pakistan, slogans

The post ಪಾಕ್‌ ಪರ ಘೋಷಣೆ ಕೂಗಿದ್ದ ಟೆಕ್ಕಿಯ ಬಂಧನ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

14 ವರ್ಷದ ಹೆಣ್ಣು ಮಕ್ಕಳಿಗೆ ‘HPV ಲಸಿಕಾ’ ಅಭಿಯಾನ

ಮೈಸೂರು, ಮಾರ್ಚ್,10,2026 (www.justkannada.in): HPV ಲಸಿಕೆಯು ಹ್ಯೂಮನ್ ಪ್ಯಾಪಿಲೋಮವೈರಸ್ (HPV)...

‘രാഹുല്‍ ഗാന്ധി പറയുന്ന സത്യങ്ങള്‍ ഭരണപക്ഷത്തിന് ദഹിക്കുന്നില്ല’ ലോക്‌സഭയില്‍ പ്രിയങ്ക ഗാന്ധി

ന്യൂദല്‍ഹി: മോദി സര്‍ക്കാരിന് മുന്നില്‍ ലോക്‌സഭാ പ്രതിപക്ഷ നേതാവ് രാഹുല്‍ ഗാന്ധി...

'நிர்வாகிகளிடம் விருப்ப மனு பெறும் வேல்முருகன்!' – கூடுதல் தொகுதி கிடைக்குமா? த.வா.க ப்ளான் என்ன?

தமிழக வாழ்வுரிமை கட்சித் தலைவர் வேல்முருகன் தனது கட்சி நிர்வாகிகளிடம் விருப்ப...

AP High Court: అవినీతి అధికారులకు షాకిచ్చిన హైకోర్టు.. సీజ్‌ చేసిన నగల విడుదలకు బ్రేక్..

AP High Court: అవినీతి కేసుల్లో ప్రభుత్వ ఉద్యోగుల నుంచి స్వాధీనం...