16
April, 2026

A News 365Times Venture

16
Thursday
April, 2026

A News 365Times Venture

ಪಾಕ್ ಪರ ಘೋಷಣೆ ಕೂಗಿದ ವ್ಯಕ್ತಿ ಹತ್ಯೆ:  ಈವರೆಗೆ 20 ಮಂದಿ ಬಂಧನ- ಗೃಹ ಸಚಿವ ಪರಮೇಶ್ವರ್

Date:

ಬೆಂಗಳೂರು ,ಏಪ್ರಿಲ್,30,2025 (www.justkannada.in): ಮಂಗಳೂರಿನಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ್ದಕ್ಕಾಗಿ ಅಪರಿಚಿತ ವ್ಯಕ್ತಿಯನ್ನು ಹೊಡೆದು ಕೊಲ್ಲಲಾಗಿದೆ ಎಂದು ವರದಿಯಾಗಿದ್ದು, ಈ ಸಂಬಂಧ ಪ್ರತಿಕ್ರಿಯಿಸಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್,  ಮಂಗಳೂರಿನಲ್ಲಿ  ಗುಂಪು ಹತ್ಯೆ ಪ್ರಕರಣದಲ್ಲಿ 20 ಮಂದಿಯನ್ನು ಬಂಧಿಸಲಾಗಿದೆ  ಎಂದು ತಿಳಿಸಿದ್ದಾರೆ.

ಈ ಕುರಿತು ಮಾತನಾಡಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿದ್ದಕ್ಕೆ ಹೊಡೆದಿದ್ದಾರೆ. ಅವನು ಜಿಂದಾಬಾದ್ ಘೋಷಣೆ ಕೂಗಿದ್ದಾನೋ, ಗೊತ್ತಿಲ್ಲ. ಈ ಬಗ್ಗೆ ಕೇಸ್ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ. ಪ್ರಕರಣದಲ್ಲಿ 20 ಮಂದಿಯನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.

ಹತ್ಯೆಯಾದವನ ಗುರುತು ಇನ್ನೂ ತಿಳಿದುಬಂದಿಲ್ಲ, ಅವರು ಸ್ಥಳೀಯರೋ ಅಥವಾ ರಾಜ್ಯದ ಹೊರಗಿನವರೋ ಎಂಬುದು ನಮಗೆ ಇನ್ನೂ ತಿಳಿದಿಲ್ಲ. ಪ್ರಾಥಮಿಕ ವರದಿಗಳ ಆಧಾರದ ಮೇಲೆ, ಪಂದ್ಯದ ಸಮಯದಲ್ಲಿ ಆ ವ್ಯಕ್ತಿ ಘೋಷಣೆಗಳನ್ನು ಕೂಗಿದ್ದಾನೆ ಎಂದು ಹೇಳಲಾಗಿದ್ದು, ಇದು ಗುಂಪು ದಾಳಿಗೆ ಕಾರಣವಾಯಿತು ಎಂದು ಪರಮೇಶ್ವರ್ ಹೇಳಿದ್ದಾರೆ.

ಏಪ್ರಿಲ್ 27 ರಂದು ಕುಡುಪು ಪ್ರದೇಶದ ಕಲ್ಲುರ್ಟಿ ದೇವಸ್ಥಾನದ ಬಳಿ ಸ್ಥಳೀಯ ಕ್ರಿಕೆಟ್ ಪಂದ್ಯದ ವೇಳೆ “ಪಾಕಿಸ್ತಾನ ಜಿಂದಾಬಾದ್” ಎಂದು ಕೂಗಿದ ಬಳಿಕ  ವ್ಯಕ್ತಿಯೊಬ್ಬರನ್ನು ಒಂದು ಗುಂಪು ಹತ್ಯೆ ಮಾಡಿದೆ. ನಂತರ ಆತನ ಮೃತದೇಹ ಪತ್ತೆಯಾಗಿತ್ತು.

Key words: pro-Pak, slogans, killed, 20 arrested,Home Minister, Parameshwar

The post ಪಾಕ್ ಪರ ಘೋಷಣೆ ಕೂಗಿದ ವ್ಯಕ್ತಿ ಹತ್ಯೆ:  ಈವರೆಗೆ 20 ಮಂದಿ ಬಂಧನ- ಗೃಹ ಸಚಿವ ಪರಮೇಶ್ವರ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

അവർ തന്ത്രങ്ങൾ മെനയുകയാണ്; മണ്ഡല പുനർ നിർണയത്തെ ഇന്ത്യാ മുന്നണി എതിർക്കും: ഖാർഗെ

ന്യൂദൽഹി: ഇന്ത്യാ മുന്നണി മണ്ഡല പുനർ നിർണയ ബില്ലിനെ പാർലമെന്റിൽ എതിർക്കുമെന്ന്...

Saving Account: మీ బ్యాంక్ ఖాతాల్లో నిరంతరం డబ్బులు వేస్తున్నారా..? ఐటీ నోటీసులొస్తాయ్..

బ్యాంకులో ఎంత డబ్బు దాచుకుంటే ఆదాయపు పన్ను శాఖ నుంచి నోటీసులు...

ಚನ್ನಪಟ್ಟಣ ಕ್ಷೇತ್ರಕ್ಕೆ ಚುನಾವಣಾ ಜ್ವರ ಕ್ರಿಯೇಟ್ ಮಾಢುವುದು ಬೇಡ-ಹೆಚ್ ಡಿಕೆಗೆ ಯೋಗೇಶ್ವರ್ ಟಾಂಗ್

ರಾಮನಗರ,ಏಪ್ರಿಲ್,15,2026(www.justkannada.in): ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಚನ್ನಪಟ್ಟಣ ಕ್ಷೇತ್ರದಿಂದ ಮತ್ತೆ ಕೇಂದ್ರ...