15
April, 2026

A News 365Times Venture

15
Wednesday
April, 2026

A News 365Times Venture

ಮೈಸೂರಿನ ಶ್ರೀ ಕೃಷ್ಣಧಾಮದಲ್ಲಿ ಉಚಿತ ಸಾಮೂಹಿಕ ಉಪನಯನ

Date:

ಮೈಸೂರು,ಏಪ್ರಿಲ್,16,2025 (www.justkannada.in): ನಗರದ ಶ್ರೀ ಕೃಷ್ಣ ಟ್ರಸ್ಟ್ ಹಾಗೂ ಶ್ರೀ ಕೃಷ್ಣ ಮಿತ್ರ ಮಂಡಳಿ ವತಿಯಿಂದ  ಬುಧವಾರ ಟಿ.ಕೆ ಲೇಔಟ್ ನಲ್ಲಿರುವ ಶ್ರೀ ಕೃಷ್ಣಧಾಮದಲ್ಲಿ ಉಚಿತ ಸಾಮೂಹಿಕ ಉಪನಯನ ನಡೆಯಿತು.

ಬೆಳಗ್ಗೆ 6 ಗಂಟೆಗೆ ಪ್ರಾರಂಭವಾಗಿ 10:15 ಗಂಟೆಗೆ ಬ್ರಹ್ಮೋಪದೇಶ ನೆರವೇರಿಸಲಾಯಿತು. ನಂತರ ವಟುಗಳಿಂದ ಶೋಭಾ ಯಾತ್ರೆ ಮತ್ತು ಅಶ್ವತ್ಥ ಪೂಜೆ ನೆರೆವೇರಿಸಲಾಯಿತು.  ಉಪನಯನ ಉದ್ದೇಶಿಸಿ ಮಾತನಾಡಿದ ಶ್ರೀ ಕೃಷ್ಣ ಟ್ರಸ್ಟ್ ಉಪಾಧ್ಯಕ್ಷ ರವಿಶಾಸ್ತ್ರಿ,  ತ್ರಿಮತಸ್ಥ ವಿಪ್ರ ಸಮುದಾಯದವರ ಅನುಕೂಲಕ್ಕಾಗಿ ಹಲವಾರು ವರ್ಷಗಳಿಂದ ಈ ಉಚಿತ ಉಪನಯನ ನಡೆಸಿಕೊಂಡು ಬರಲಾಗಿದೆ ಎಂದರು.

ವೇದವೆಂದರೆ ಜ್ಞಾನ, ಸಂಸ್ಕೃತಿ, ಪರಂಪರೆಗೆ ಸಾಕ್ಷಿ. ಭಾರತ ಮಾತ್ರವಲ್ಲ ವಿಶ್ವಮಟ್ಟದಲ್ಲೂ ಮಾನ್ಯತೆ ಗಳಿಸಿದೆ. ವೇದ ಮಂತ್ರಗಳು ವ್ಯಕ್ತಿ ಜೀವನದ ಸಮಗ್ರ ಚಿತ್ರವನ್ನು ನೀಡಬಲ್ಲವು’ ಎಂದು ಹೇಳಿದರು.

ವಿದ್ವಾನ್ ಸುರೇಶ್ ಭಟ್ ರವರು   ನೂತನ ವಟುಗಳಿಗೆ ಮಾರ್ಗದರ್ಶನ ನೀಡಿ, ಉಪನಯನದ ಮಹತ್ವ  ತಿಳಿಸಿಕೊಟ್ಟರು. ಆನಂತರ ವಟುಗಳಿಗೆ ಮತ್ತು ಪೋಷಕರಿಗೆ ಪ್ರಸಾದ ವಿತರಿಸಲಾಯಿತು.

ಪಿ ಎಸ್ ಶೇಖರ್,  ಕಾರ್ಯದರ್ಶಿ ಕೆ ವಿ ಶ್ರೀಧರ್,  ಮಿತ್ರ ಮಂಡಳಿ ಅಧ್ಯಕ್ಷ ಪ್ರವೀಣ್,  ಕಾರ್ಯದರ್ಶಿ ರಾಘವೇಂದ್ರ,  ಸುಬ್ರಹ್ಮಣ್ಯ ತಂತ್ರಿ,  ವಿಜೇಂದ್ರ, ಕಿರಣ್ ತಂತ್ರಿ,  ಪದ್ಮನಾಭ ಭಟ್,  ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯ ಪ್ರಧಾನ ಕಾರ್ಯದರ್ಶಿ ವಿಕ್ರಮ ಅಯ್ಯಂಗಾರ್ ಹಾಗೂ  ವಟುಗಳ  ಪೋಷಕರು  ವಿಪ್ರರು ಆಶೀರ್ವದಿಸಿದರು ಹಾಜರಿದ್ದರು.

Key words: Free, Upanayana, Sri Krishna Dhama, Mysore

The post ಮೈಸೂರಿನ ಶ್ರೀ ಕೃಷ್ಣಧಾಮದಲ್ಲಿ ಉಚಿತ ಸಾಮೂಹಿಕ ಉಪನಯನ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

തോല്‍ക്കുമെന്ന ഭയം വ്യക്തമാണ്, ഫെഡറല്‍ തത്വത്തെ തകര്‍ക്കാന്‍ അനുവദിക്കില്ല; മണ്ഡലപുനര്‍നിര്‍ണയത്തില്‍ പ്രകാശ് രാജ്

ന്യൂദല്‍ഹി: മണ്ഡലപുനര്‍നിര്‍ണയത്തില്‍ കേന്ദ്ര സര്‍ക്കാരിനെതിരെ വിമര്‍ശനവുമായി പ്രകാശ് രാജ്. തോല്‍ക്കുമെന്ന ഭയത്തിന്റെ...

'டார்கெட் 1 லட்சம் வாக்குகள்!' – பெரம்பூரில் வெல்வாரா விஜய்? |களநிலவரம் ஓர் அலசல்!

தவெக தலைவர் விஜய் பெரம்பூர், திருச்சி கிழக்கு என இரண்டு தொகுதிகளில்...

TCS Nashik Case: టీసీఎస్ నాసిక్ ‘‘కార్పొరేట్ జిహాద్’’ కేసులో సంచలన విషయాలు..!

TCS Nashik Case: ప్రముఖ టెక్ సంస్థ టీసీఎస్ నాసిక్ బీపీవో...

ಹಿರಿಯ ಶಾಸಕರ ಜೊತೆ ಐವರು ಹೊಸ ಶಾಸಕರಿಗೂ ಸಚಿವ ಸ್ಥಾನ ನೀಡಲಿ- ಕಾಂಗ್ರೆಸ್ ಶಾಸಕ ಆಗ್ರಹ

ದಾವಣಗೆರೆ,ಏಪ್ರಿಲ್,14,2026 (www.justkannada.in): ಸಚಿವ ಸಂಪುಟ ಪುನಾರಚನೆಗೆ ಆಗ್ರಹಿಸಿ ಹಿರಿಯ ಶಾಸಕರು...