29
April, 2026

A News 365Times Venture

29
Wednesday
April, 2026

A News 365Times Venture

ಬಿಸಿಯೂಟ: ಗೊಂದಲಕ್ಕೆ ಎಡೆಮಾಡಿದ ಸರಕಾರದ ಆದೇಶ..!

Date:

ಬೆಂಗಳೂರು,ಮಾರ್ಚ್,28,2025 (www.justkannada.in): ಶಾಲೆಗಳಲ್ಲಿ ಕೆಲವು ದಿನಗಳಲ್ಲಿ ಬೇಸಿಗೆ ರಜೆಯ ಪ್ರಾರಂಭವಾಗಲಿದ್ದು ಈ ಮಧ್ಯೆ ಶಾಲಾ ಮಕ್ಕಳ ಬಿಸಿಯೂಟಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಆದೇಶವೊಂದನ್ನ ಹೊರಡಿಸಿದ್ದು  ಈ ಆದೇಶ ಇದೀಗ ಗೊಂದಲಕ್ಕೆ ಎಡೆ ಮಾಡಿಕೊಟ್ಟಿದೆ.

ಹೌದು, ಶಾಲೆಗಳಲ್ಲಿ ಬಿಸಿಯೂಟ ಮಾಡುವ ಅಡುಗೆ ತಯಾರಕರು,  ಸಹಾಯಕರನ್ನ ಮಾರ್ಚ್ 31ಕ್ಕೆ  ಬಿಡುಗಡೆ ಮಾಡುವಂತೆ ಸರ್ಕಾರ ಆದೇಶ ಹೊರಡಿಸಿದೆ. ಆದರೆ ಏಪ್ರಿಲ್ 10ರವರೆಗೂ ಶಾಲೆಗಳನ್ನ ನಡೆಸಬೇಕು. ಮಕ್ಕಳಿಗೆ  ಬಿಸಿಯೂಟ ಮೊಟ್ಟೆ ಹಾಲು  ಕೊಡಬೇಕು  ಎಂದು ಸರ್ಕಾರ ಸೂಚಿಸಿದೆ. ಈ ನಡುವೆ ಬಿಸಿಯೂಟ ಅಡುಗೆ ತಯಾರಕರು,  ಸಹಾಯಕರನ್ನ ಮಾರ್ಚ್ 31ಕ್ಕೆ ಬಿಡುಗಡೆಗೊಳಿದರೇ ಏಪ್ರಿಲ್ 10ರವರೆಗೂ  ಮಕ್ಕಳಿಗೆ ಬಿಸಿಯೂಟ  ಯಾರು ತಯಾರು ಮಾಡುತ್ತಾರೆ ಎಂಬ ಪ್ರಶ್ನೆ ಉದ್ಬವಿಸಿದೆ.

ಅಡುಗೆ ತಯಾರಕರು ಸಹಾಯಕರನ್ನ ಬಿಡುಗಡೆ ಮಾಡಲು ಆದೇಶ ಹೊರಡಿಸಿರುವ ಶಾಲಾ ಶಿಕ್ಷಣ ಇಲಾಖೆ ಆಯುಕ್ತರು, 2024-25 ನೇ ಸಾಲಿನ ಪಿಎಂ ಪೋಷಣ್-ಮಧ್ಯಾಹ್ನ ಉಪಹಾರ ಯೋಜನೆ ಕಾರ್ಯಕ್ರಮದಡಿಯಲ್ಲಿ 2024-25 ನೇ ಶೈಕ್ಷಣಿಕ ವರ್ಷದ ಜೂನ್-204 ಮಾಹೆಯಿಂದ ಮಾರ್ಚ್-2025 ರ ಮಾಹೆಯವರೆಗೆ ಒಟ್ಟು 10 ತಿಂಗಳ ಅವಧಿಗೆ ಯೋಜನೆಯನ್ನು ನಡೆಸಲು ಅನುಮೋದನೆ ನೀಡಿರುತ್ತದೆ. ಸದರಿ ಅವಧಿಗೆ ಸರ್ಕಾರಿ/ಅನುದಾನಿತ ಪ್ರಾಥಮಿಕ/ಪ್ರೌಢ ಶಾಲೆಗಳಲ್ಲಿ ಅಡುಗೆ ತಯಾರಿಸಿ ವಿತರಿಸುವ ಕೆಲಸಕ್ಕೆ ತಾತ್ಕಾಲಿಕವಾಗಿ ಅಡುಗೆ ಸಿಬ್ಬಂದಿಯ ಸೇವೆಯನ್ನು ಪಡೆದುಕೊಂಡಿದ್ದು, ಈ ಅವಧಿಗೆ ಮಾಸಿಕ ಗೌರವ ಸಂಭಾವನೆಯನ್ನು ವಿತರಿಸಲಾಗಿದೆ.

2024-25ನೇ ಸಾಲಿನಲ್ಲಿ ಯೋಜನೆಯ ಅವಧಿ 31ನೇ ಮಾರ್ಚ್ ಅಂತ್ಯಕ್ಕೆ ಮುಕ್ತಾಯಗೊಳ್ಳುವ ಹಿನ್ನೆಲೆಯಲ್ಲಿ, ಯೋಜನೆಯಡಿ ತಾತ್ಕಾಲಿಕವಾಗಿ ಸೇವೆ ನಿರ್ವಹಿಸಿದ ಅಡುಗೆ ಸಿಬ್ಬಂದಿಯನ್ನು ದಿನಾಂಕ: 31.3.2025ರಂದು ಬಿಡುಗಡೆಗೊಳಿಸುವಂತೆ ಶಾಲೆಯ ಮುಖ್ಯ ಶಿಕ್ಷಕರಿಗೆ ಸೂಚಿಸಲು ತಿಳಿಸಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ಆದರೆ ಶಾಲೆಗಳು ಏಪ್ರಿಲ್ 10ರವರೆಗೂ ತೆರೆದಿರುತ್ತವೆ. ಜೊತೆಗೆ ಮಕ್ಕಳಿಗೆ ಬಿಸಿಯೂಟ ಮೊಟ್ಟೆ ಹಾಲು ವಿತರಿಸಬೇಕೆಂದು ಸರ್ಕಾರ ಆದೇಶಿಸಿದೆ. ಆದರೆ ಇದೀಗ ಮಾರ್ಚ್ 31ಕ್ಕೆ ಬಿಸಿಯೂಟ ಅಡುಗೆ ತಯಾರಕರು,  ಸಹಾಯಕರನ್ನ ಬಿಡುಗಡೆಗೊಳಿಸುವಂತೆ ಸರ್ಕಾರ ಹೊರಡಿಸಿರುವ ಆದೇಶ ಸಾಕಷ್ಟು ಗೊಂದಲವನ್ನುಂಟು ಮಾಡಿದೆ.

Key words: School, bisiyuta, Government order, confusion

The post ಬಿಸಿಯೂಟ: ಗೊಂದಲಕ್ಕೆ ಎಡೆಮಾಡಿದ ಸರಕಾರದ ಆದೇಶ..! appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ഇറാന്‍ ബുദ്ധിപൂര്‍വം പെരുമാറണം, പെട്ടന്ന് കരാറിലെത്തണമെന്ന് തോക്കുമായി ട്രംപ്; തുറമുഖങ്ങള്‍ക്കെതിരായ ഉപരോധം നീട്ടാന്‍ യു.എസ്

വാഷിങ്ടണ്‍: ഇറാന്‍ ഭരണകൂടം എത്രയും വേഗം കരാറിലെത്തണമെന്ന് അമേരിക്കന്‍ പ്രസിഡന്റ് ഡൊണാള്‍ഡ്...

‘மின்மாற்றிகள் கொள்முதலில் எந்த தவறும் நடக்கவில்லை!’ – செந்தில் பாலாஜி சொல்லும் விளக்கம்

மின்சாரத்துறை அமைச்சராக செந்தில் பாலாஜி இருந்தபோது மின்மாற்றிகள் கொள்முதல் செய்ததில் அரசுக்கு...

Kerala Election Exit poll 2026: కేరళలో హస్తం హవా.. పినరయికి గుడ్ బై..

Kerala Elections Exit poll 2026: నాలుగు రాష్ట్రాలు, ఒక కేంద్రపాలిత...

ಬೆಂಗಳೂರಿನಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ: ಜನಜೀವನ ಅಸ್ತವ್ಯಸ್ತ

ಬೆಂಗಳೂರು,ಏಪ್ರಿಲ್,29,2026 (www.justkannada.in):  ಬಿಸಿಲಿನ ತಾಪದಿಂದ ಬಸವಳಿದಿದ್ದ ರಾಜ್ಯ ರಾಜಧಾನಿ ಬೆಂಗಳೂರಿನ...