14
May, 2026

A News 365Times Venture

14
Thursday
May, 2026

A News 365Times Venture

ಅತ್ಯಾಚಾರ ಯತ್ನ ಪ್ರಕರಣ: ಆರೋಪಿಗೆ ಜೈಲು ಶಿಕ್ಷೆ ದಂಡ ವಿಧಿಸಿದ ಕೋರ್ಟ್

Date:

ಚಾಮರಾಜನಗರ,ಫೆಬ್ರವರಿ,22,2025 (www.justkannada.in) : ಮಹಿಳೆ ಮೇಲೆ ಅತ್ಯಾಚಾರ, ಕೊಲೆಗೆ ಯತ್ನಿಸಿದ ಆರೋಪದ ಮೇಲೆ  ಅಪರಾಧಿಗೆ 4 ವರ್ಷಗಳ ಕಾಲ ಸೆರೆವಾಸ ಮತ್ತು  5,000 ರೂ.ದಂಡ ವಿಧಿಸಿ ಕೊಳ್ಳೇಗಾಲದ ಘನ ಅಪರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ತೀರ್ಪು ನೀಡಿದೆ.

ಮೈಸೂರು  ತಾಲ್ಲೂಕು ಸಿದ್ದಲಿಂಗಪುರ ಗ್ರಾಮದ ಕಾರ್ತಿಕ್ ಜೈಲು ಶಿಕ್ಷೆಗೆ ಗುರಿಯಾದ ಆರೋಪಿ. ಕೊಳ್ಳೇಗಾಲದ ಘನ ಅಪರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ  ಟಿ.ಸಿ ಶ್ರೀಕಾಂತ್  ಅವರು ಪ್ರಕರಣ ಸಂಬಂಧ ತೀರ್ಪು ಪ್ರಕಟಿಸಿದ್ದಾರೆ.

 ಘಟನೆ ಹಿನ್ನೆಲೆ.

ಕ್ಲೀನರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಆರೋಪಿ  ಕಾರ್ತಿಕ್ 26/10/2019ರಂದು ಸಂಜೆ 6-30ರ ಗಂಟೆ ಸಮಯದಲ್ಲಿ ಕೊಳ್ಳೇಗಾಲ ಪಟ್ಟಣದ ಅಸ್ಸಿಸ್ಸಿ ಚಾರ್ಚ ಬಳಿ ಜೆ.ಎಸ್.ಎಸ್. ಕಾಲೇಜ್ ಸೇತುವೆ ಬಳಿ ಚಾಸಾ.1ರವರು( ಜಯಲಕ್ಷ್ಮಿ) ಅವರ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಸೇತುವೆ ಕೆಳಕ್ಕೆ ಕೆರೆಗೆ ಎಳೆದುಕೊಂಡು ಹೋಗಿ ಹಲ್ಲೆ ನಡೆಸಿ ಕೊಲೆ ಮಾಡಲು ಯತ್ನಿಸಿದ್ದನು.

ಪ್ರಕರಣ ಸಂಬಂಧ ದೋಷಾರೋಪಣ ಪತ್ರ ಸಲ್ಲಿಸಲಾಗಿತ್ತು. ಪ್ರಕರಣ ಸಂಬಂಧ ವಿಚಾರಣೆ ನಡೆಸಿ ತನಿಖಾಧಿಕಾರಿ ಕೊಳ್ಳೇಗಾಲ ಪೊಲೀಸ್ ಠಾಣೆಯ ಪಿಎಸ್ ಐ  ಜೆ. ರಾಜೇಂದ್ರ ಅವರು ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಿದ್ದರು.

ಅದು ಎಸ್.ಸಿ ನಂ.5052/2022 ರಂತೆ ದಾಖಲಾಗಿದ್ದು, ಅದರಂತೆ ವಿಚಾರಣೆ ನಡೆಸಿ, ನ್ಯಾಯಾಲಯವು ಈ ಪ್ರಕರಣದಲ್ಲಿ ಆರೋಪಿ ಕಾರ್ತಿಕ್ ಗೆ  ಐಪಿಸಿ ಕಾಯ್ದೆ ಕಲಂ 354(ಎ) 307 ರಡಿ ಶಿಕ್ಷೆ ವಿಧಿಸಿದ್ದು, ಆರೋಪಿಗೆ 4 ವರ್ಷಗಳ ಕಾಲ ಸೆರೆವಾಸ ಮತ್ತು ರೂ.5,000 ದಂಡ ವಿಧಿಸಿ ಆದೇಶಿಸಿದೆ.

ಸರ್ಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಬಿ.ಪಿ.ಮಂಜುನಾಥ ಅವರು ವಿಚಾರಣೆ ನಡೆಸಿ, ವಾದ ಮಂಡಿಸಿದರು.

Key words: Attempted, rape case, Court, sentences, accused, jail

The post ಅತ್ಯಾಚಾರ ಯತ್ನ ಪ್ರಕರಣ: ಆರೋಪಿಗೆ ಜೈಲು ಶಿಕ್ಷೆ ದಂಡ ವಿಧಿಸಿದ ಕೋರ್ಟ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

സര്‍ക്കാരിനെ നയിക്കാന്‍ അര്‍ഹന്‍ വി.ഡി. സതീശന്‍, ലീഗിന് അവകാശപ്പെട്ടത് ചോദിച്ച് വാങ്ങണം; തുറന്ന കത്തുമായി സി.എസ്.എഫ്.ഇ.ജെ.പി

തിരുവനന്തപുരം: മുസ്‌ലിം ലീഗ് നേതൃത്വത്തിന് തുറന്ന കത്തുമായി ഗവേഷകരും അധ്യാപകരും വിദ്യാര്‍ത്ഥികളും...

‘தவெக-அதிமுக கூட்டணி சேர்வதை மக்கள் விரும்ப மாட்டார்கள்’ – போர்க்கொடி தூக்கிய காங்கிரஸ்

தமிழ்நாடு காங்கிரஸ் மாநில பொதுச் செயலாளர் கணபதி சிவக்குமார் வெளியிட்டுள்ள அறிக்கையில்,...

UP: యూపీలో భారీ తుపాను.. 11 మంది మృతి

ఉత్తరప్రదేశ్‌ను భారీ తుపాను గజగజలాడించింది. బుధవారం భదోహి, బుదౌన్ జిల్లాల్లో భారీ...

NEET ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ: ಮತ್ತೋರ್ವ ಆರೋಪಿ ಬಂಧನ

ಪುಣೆ,ಮೇ,13,2026 (www.justkannada.in): ದೇಶಾದ್ಯಂತ ಭಾರೀ ಸುದ್ದಿಯಾಗಿರುವ ನೀಟ್ ಯುಜಿ ಪ್ರಶ್ನೆ...