15
March, 2026

A News 365Times Venture

15
Sunday
March, 2026

A News 365Times Venture

ಸರ್ಕಾರಿ ಗೋಮಾಳದಲ್ಲಿ ಉಳುಮೆ ಮಾಡುತ್ತಿರುವ ರೈತರು ದಾಖಲೆ ಸಲ್ಲಿಸಿದರೆ “ ಭೂ ಪರಿಹಾರ “: ಡಾ.ಯತೀಂದ್ರ ಸಿದ್ದರಾಮಯ್ಯ

Date:

ಮೈಸೂರು, ಫೆ. 21: ಮಾನವೀಯತೆಯ ದೃಷ್ಟಿಯಿಂದ ಸರ್ಕಾರಿ ಗೋಮಾಳದಲ್ಲಿ ಉಳಿಮೆ ಮಾಡುತ್ತಿದ್ದ ರೈತರ ದಾಖಲೆ ಆಧರಿಸಿ ಸರ್ಕಾರ ಪರಿಹಾರ ನೀಡುತ್ತಿದೆ. ಉಳುಮೆ ಮಾಡುತ್ತಿರುವ  ದಾಖಲೆ ಸಲ್ಲಿಸಿ ಪರಿಹಾರ ಪಡೆಯುವಂತೆ ವಿಧಾನಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.

ಜಿಲ್ಲೆಯ ನಂಜನಗೂಡು ತಾಲೂಕು ಚಿಕ್ಕಯ್ಯನ ಛತ್ರ ಹೋಬಳಿ ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ಹುಳಿಮಾವು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರುವ ಸರ್ಕಾರಿ ಗೋಮಾಳದಲ್ಲಿ ಸುಮಾರು 150ಕ್ಕೂ ಹೆಚ್ಚು ರೈತ ಕುಟುಂಬದವರು ಉಳಿಮೆ ಮಾಡಿ ಜೀವನ ಸಾಗಿಸುತ್ತಿದ್ದು ಈ ಗೋಮಾಳವನ್ನು ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ನಿಗಮದವರು ವಶಕ್ಕೆ ಪಡೆದುಕೊಂಡು ರೈತರಿಗೆ ಯಾವುದೇ ಭೂ ಪರಿಹಾರ ನೀಡದೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಗ್ರಾಮಸ್ಥರು ಮನವಿ ಮಾಡಿದರು.

ಮನವಿ ಸ್ವೀಕರಿಸಿ ಮಾತನಾಡಿದ ಡಾ.ಯತೀಂದ್ರ ಸಿದ್ದರಾಮಯ್ಯ, ಮಾನವೀಯತೆ ದೃಷ್ಟಿಯಿಂದ ಸರ್ಕಾರಿ ಗೋಮಾಳದಲ್ಲಿ ಉಳಿಮೆ ಮಾಡುತ್ತಿದ್ದ ರೈತರ ದಾಖಲೆಗಳನ್ನು ಪಡೆದುಕೊಂಡು ಸರ್ಕಾರ ಪರಿಹಾರ ನೀಡುತ್ತಿದೆ. ಈ ಭೂಮಿಯಲ್ಲಿ ನೀವು ಉಳುಮೆ ಮಾಡುತ್ತಿದ್ದು ನಿಮ್ಮಲ್ಲಿ ದಾಖಲೆಗಳು ಇದ್ದರೆ ಅದನ್ನು ತಾಲೂಕು ತಹಸೀಲ್ದಾರ್  ಅವರಿಗೆ ಸಲ್ಲಿಸಿದರೆ  ನಿಮಗೂ ಕೂಡ ಪರಿಹಾರ ಕೊಡಿಸುವ ಭರವಸೆ ನೀಡಿದರು.

ಆಗ, ಈ ಭೂಮಿ ವ್ಯಾಪ್ತಿಯಲ್ಲಿ ಯಾರು ಉಳುಮೆ ಮಾಡದೆ ಇರುವಂತಹ ಬೇರೆ ಬೇರೆ ಗ್ರಾಮಗಳ ಬೇರೆ ಬೇರೆ ಭಾಗದ ರೈತರುಗಳು ಪರಿಹಾರ ಪಡೆದುಕೊಳ್ಳುತ್ತಿದ್ದಾರೆ . ಕೂಡಲೇ ಮುಖ್ಯಮಂತ್ರಿಗಳು ,  ಸಂಬಂಧಪಟ್ಟ ಅಧಿಕಾರಿಗಳಿಗೆ ಈ ಲೋಪ ಸರಿಪಡಿಸುವಂತೆ ಸೂಚನೆ ನೀಡಬೇಕು ಎಂದು ರೈತರು ಒತ್ತಾಯ ಮಾಡಿದರು .

key words: ‘Land compensation’, farmers, tilling, gomaala, Dr Yatindra Siddaramaiah

‘Land compensation’ if farmers tilling in government gomaala submit documents: Dr Yatindra Siddaramaiah

The post ಸರ್ಕಾರಿ ಗೋಮಾಳದಲ್ಲಿ ಉಳುಮೆ ಮಾಡುತ್ತಿರುವ ರೈತರು ದಾಖಲೆ ಸಲ್ಲಿಸಿದರೆ “ ಭೂ ಪರಿಹಾರ “: ಡಾ.ಯತೀಂದ್ರ ಸಿದ್ದರಾಮಯ್ಯ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಅಡಿಗಲ್ಲು: ಹೆಚ್.ವೈ.ಮೇಟಿ ಕನಸು ನನಸು-ಸಿಎಂ ಸಿದ್ದರಾಮಯ್ಯ

ಬಾಗಲಕೋಟೆ, ಮಾರ್ಚ್,14,2026 (www.justkannada.in):  ದಿವಂಗತ ಹೆಚ್.ವೈ.ಮೇಟಿಯವರ ಪ್ರಯತ್ನ ಮತ್ತು  ಆಶಯದಂತೆ ...

ആരാണ് അവസരവാദി? ഓപ്ഷനില്‍ പണ്ഡിറ്റും; യു.പി പൊലീസ് റിക്രൂട്ട്‌മെന്റ് പരീക്ഷയിലെ ചോദ്യം വിവാദത്തില്‍; കര്‍ശന നടപടിയെന്ന് സര്‍ക്കാര്‍

ലഖ്‌നൗ: ശനിയാഴ്ച യു.പിയില്‍ നടന്ന പൊലീസ് സബ് ഇന്‍സ്‌പെക്ടര്‍ തസ്തികയിലേക്കുള്ള റിക്രൂട്ട്‌മെന്റ്...

Trump: "பொழுதுபோக்கிற்காக மீண்டும் தாக்குவோம்" – ஈரான் மீதான தாக்குதலைத் தீவிரப்படுத்தும் ட்ரம்ப்

ஈரான் மீது அமெரிக்காவும், இஸ்ரேலும் தாக்குதல் நடத்திய நிலையில், அதற்கு பதில்...

Maharaja 2 : మహారాజ సీక్వెల్ కథ రెడీ.. షూటింగ్ కోసం ఈగర్లీ వెయిటింగ్ : విజయ్ సేతుపతి

తమిళ స్టార్ హీరో విజయ్ సేతుపతి కెరీర్‌లో 50వ మైలురాయిగా నిలిచిన...