25
June, 2026

A News 365Times Venture

25
Thursday
June, 2026

A News 365Times Venture

ಫೆ.1 ರಂದು ʻನೈಪುಣ್ಯೋತ್ಸವ:  ಪರಿಸರ ಬಗ್ಗೆ ಜಾಗೃತಿ

Date:

ಮೈಸೂರು,ಜನವರಿ,30,2025 (www.justkannada.in): ಫೆಬ್ರವರಿ 1 ರಂದು ನಗರದ ನೈಪುಣ್ಯ ಸ್ಕೂಲ್ ಆಫ್ ಎಕ್ಸಲೆನ್ಸ್ ನ ವಾರ್ಷಿಕೋತ್ಸವದ ʼನೈಪುಣ್ಯೋತ್ಸವʼ ಕಾರ್ಯಕ್ರಮ ಜರುಗಲಿದ್ದು,  ಈ ಬಾರಿ ಪರಿಸರ ಜಾಗೃತಿ ಮೂಡಿಸಲಿದೆ.

ನೈಪುಣ್ಯ ಸಂಸ್ಥೆಯ ಕನಕದಾಸ ನಗರ ಹಾಗೂ ಆರ್ ಟಿ ನಗರದ ಸಿಬಿಎಸ್‌ ಇ ಮತ್ತು ಐಸಿಎಸ್‌ಇ ಪಠ್ಯಕ್ರಮದ ಶಾಲೆಗಳು ಜಂಟಿಯಾಗಿ ಈ ಕಾರ್ಯಕ್ರಮನ್ನು ಆಯೋಜಿಸಿದ್ದು,  ಫೆಬ್ರವರಿ 1  ರ ಶನಿವಾರದಂದು ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದ ಘಟಿಕೋತ್ಸವ ಭವನದಲ್ಲಿ ಈ ಕಾರ್ಯಕ್ರಮ  ಜರುಗಲಿದೆ.

ಮುಂಜಾನೆ 10.00 ಗಂಟೆಗೆ ಆರಂಭವಾಗುವ ಈ ಕಾರ್ಯಕ್ರಮವನ್ನು ಜಯದೇವ ಹೃದ್ರೋಗ ಸಂಶೋಧನಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಕೆ. ಎಸ್. ಸದಾನಂದ ಅವರು ಉದ್ಘಾಟಿಸಲಿದ್ದು, ಪೂರ್ವ ಪ್ರಾಥಮಿಕ ವಿಭಾಗದ (ಕಿಂಡರ್ಗಾರ್ಟನ್) ಪುಟ್ಟ ಮಕ್ಕಳಿಂದ ʻಜನನಿʼ ಹೆಸರಿನ ಕಾರ್ಯಕ್ರಮದಡಿಯಲ್ಲಿ ಮಕ್ಕಳು ಮತ್ತು ಮಾತೃ ಸಂಬಂಧದ ಕುರಿತ ಕಾರ್ಯಕ್ರಮವನ್ನು ರೂಪಿಸಲಾಗಿದೆ. ಇದೇ ಸಂದರ್ಭದಲ್ಲಿ ʻಬೇರು-ಬಳ್ಳಿʼ ಹೆಸರಿನಲ್ಲಿ ಕೂಡು ಕುಟುಂಬವನ್ನು ವೇದಿಕೆಯ ಮೇಲೆ ತಂದು ನಮ್ಮ ನೆಲದ ಕುಟುಂಬ ಸಂಸ್ಕೃತಿಯನ್ನು ಪರಿಚಯಿಸುವ ಕಾರ್ಯಕ್ರಮವನ್ನೂ ಜೋಡಿಸಲಾಗಿದೆ.

ಸಂಜೆ 4.00 ಗಂಟೆಯ ಕಾರ್ಯಕ್ರಮವನ್ನು ರಾಜ್ಯ ಚುನಾವಣಾ ಆಯೋಗದ ಮಾಜಿ ಆಯುಕ್ತರು ಹಾಗೂ ನಿವೃತ್ತ ಹಿರಿಯ ಐ.ಎ.ಎಸ್ ಅಧಿಕಾರಿ ಪಿ. ಎನ್. ಶ್ರೀನಿವಾಸಾಚಾರಿ ಅವರು ಉದ್ಘಾಟಿಸಲಿದ್ದಾರೆ. ಗೌರವ ಅತಿಥಿಗಳಾಗಿ ಗದಗದ ಶ್ರೀ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ನಿರ್ಭಯಾನಂದ ಸರಸ್ವತಿ ಅವರು ಉಪಸ್ಥಿತರಿದ್ದು, ಶಿಕ್ಷಣದ ಕುರಿತು ಉಪನ್ಯಾಸ ನೀಡಲಿದ್ದಾರೆ.

ಮೇಲಿನ ಎರಡೂ ಕಾರ್ಯಕ್ರಮಗಳ ಅಧ್ಯಕ್ಷತೆಯನ್ನು ನೈಪುಣ್ಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ  ಆರ್. ರಘು ಅವರು ವಹಿಸಲಿದ್ದು, ಸಂಜೆ 4.00 ರ ಕಾರ್ಯಕ್ರಮದಲ್ಲಿ ಪರಿಸರ ಜಾಗೃತಿಯನ್ನು ಪಡಿಮೂಡಿಸುವ ನಿಟ್ಟಿನಲ್ಲಿ ʻಆಯಾಮ ಫೈನ್ ಆರ್ಟ್ಸ್ʼ ಅಕಾಡೆಮಿಯ ನಿರ್ದೇಶಕಿ ಡಾ. ಶಾಂಭವಿ ಸ್ವಾಮಿ ಅವರ ನಿರ್ದೇಶನದಲ್ಲಿ ʻಸೃಷ್ಠಿ-ದೃಷ್ಠಿʼ ನೃತ್ಯ ರೂಪಕವನ್ನು ನೈಪುಣ್ಯ ವಿದ್ಯಾರ್ಥಿಗಳು ಪ್ರಸ್ತುತ ಪಡಿಸಲಿದ್ದಾರೆ. ನೈಪುಣ್ಯೋತ್ಸವದ ಇಡೀ ದಿನದ ಈ ಕಾರ್ಯಕ್ರಮಕ್ಕೆ ಸಾರ್ವಜನಿಕರನ್ನು ಆಹ್ವಾನಿಸಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಕಲಾ ಹಾಗೂ ಪರಿಸರ ಪ್ರೇಮಿಗಳು  ಭಾಗವಹಿಸುವಂತೆ ಸಂಸ್ಥೆಯು ವಿನಂತಿಸಿದೆ.

Key words: mysore, Naipunyotsava, on Feb. 1, Awareness, environment

The post ಫೆ.1 ರಂದು ʻನೈಪುಣ್ಯೋತ್ಸವ:  ಪರಿಸರ ಬಗ್ಗೆ ಜಾಗೃತಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

പാശ്ചാത്യ ലോകം റഷ്യയുമായി യുദ്ധത്തിന് ശ്രമിക്കുന്നു; രാജ്യം തയ്യാറായിരിക്കണമെന്ന് പുട്ടിന്‍

മോസ്‌കോ: റഷ്യക്കെതിരെ പാശ്ചാത്യ രാജ്യങ്ങള്‍ സൈനിക ഏറ്റുമുട്ടലിനൊരുങ്ങുകയാണെന്ന് റഷ്യന്‍ പ്രസിഡന്റ് വ്‌ളാദിമിര്‍...

`அன்பில் மகேஸ் செய்திருப்பது அநாகரிகம்; விளைவுகளை சந்திக்க நேரிடும்'- அமைச்சர் விஸ்வநாதன் எச்சரிக்கை

மதுரை மேலூரில் மாணவர்கள் கலந்துகொண்ட மாரத்தான் நிகழ்வில் தமிழ்நாட்டின் உயர் கல்வித்துறை...

Vaibhav sooryavanshi: వైభవ్ జపం.! భారత్‌లోనే కాదు.. పాకిస్థాన్‌లోనూ బుడ్డోడి క్రేజ్ మాములుగా లేదుగా..

Vaibhav sooryavanshi: యంగ్ డైనమేట్ వైభవ్ సూర్యవంశీ గురించి ప్రత్యేకంగా చెప్పనక్కర్లేదు....

ಶಾಸಕ ಪ್ರದೀಪ್ ಈಶ್ವರ್ ಟ್ರಸ್ಟ್‌ಗೆ ನಿವೇಶನ ಹಂಚಿಕೆ: ಹೈಕೋರ್ಟ್ ಯಥಾಸ್ಥಿತಿ ಆದೇಶ

  ಬೆಂಗಳೂರು, ಜೂ.24: ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರಿಗೆ ಸೇರಿದ...