13
February, 2025

A News 365Times Venture

13
Thursday
February, 2025

A News 365Times Venture

ಮೈಕ್ರೋ ಫೈನಾನ್ಸ್: ಸಾಲ ಮರುಪಾವತಿಗೆ ಮಿತಿಮೀರಿ ವರ್ತಿಸಿದರೆ ಕ್ರಿಮಿನಲ್ ಕೇಸ್ -ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ

Date:

ಮೈಸೂರು ಜನವರಿ, 29,2025 (www.justkannada.in): ಮೈಕ್ರೋ ಫೈನಾನ್ಸ್ ಕಂಪೆನಿಗಳು ಸಾಲ ಮರುಪಾವತಿ ವಿಚಾರದಲ್ಲಿ ಜನರಿಗೆ ಕಿರುಕುಳ ನೀಡುವುದು ಕಂಡುಬಂದರೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ. ಲಕ್ಷ್ಮೀ ಕಾಂತ ರೆಡ್ಡಿ ಅವರು ಕಟ್ಟು ನಿಟ್ಟಿನ ಸೂಚನೆ ನೀಡಿದರು.

ಇಂದು ಜಿಲ್ಲಾ ಪಂಚಾಯತ್ ದೇವರಾಜ್ ಅರಸು ಸಭಾಂಗಣದಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಗಳ ಮುಖ್ಯಸ್ಥರ ಜೊತೆಗೆ ಸಭೆ  ನಡೆಸಿ ಮಾತನಾಡಿದರು.

ಸಾಲ ವಸೂಲಾತಿಗೆ ಆರ್.ಬಿ.ಐ  ನಿಗದಿಪಡಿಸಿರುವ ಮಾದರಿ ಕಾರ್ಯಾಚರಣೆಯನ್ನು ಪಾಲನೆ ಮಾಡವಂತೆ ಹಾಗೂ ಬೇಜಾಬ್ದಾರಿಯಿಂದ ಸಾಲ ನೀಡುವುದನ್ನೂ ನಿಗ್ರಹಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.

ಜಿಲ್ಲೆಯಲ್ಲಿ ಮೈಕ್ರೋ ಫೈನಾನ್ಸ್ ಕಂಪೆನಿಗಳು ಒಬ್ಬ ವ್ಯಕ್ತಿಗೆ ಯಾವುದೇ ಪೂರ್ವಾಪರ ನೋಡದೇ ಅನೇಕ ಮೈಕ್ರೋ ಫೈನಾನ್ಸ್ ಸಾಲ ನೀಡಿವೆ. ಅಲ್ಲದೆ, ತಮ್ಮ ಸಾಮರ್ಥ್ಯ ವಿಸ್ತರಿಸಿಕೊಳ್ಳುವ ಸಲುವಾಗಿ ಆರ್.ಬಿ.ಐ ಗೈಡ್ ಲೈನ್ಸ್ ಉಲ್ಲಂಘಿಸಿ ಸಾಲ ನೀಡುತ್ತಿರುವ ಘಟನೆಗಳು ಗಮನಕ್ಕೆ ಬಂದಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಸಾಲ ನೀಡುವಾಗ ಸಾಲ ಪಡೆದವರ ಆರ್ಥಿಕ ಸಾಮರ್ಥ್ಯವನ್ನು ಪರಿಗಣಿಸಿ ಸಾಲ ನೀಡಬೇಕು. ಆದರೆ ಅದನ್ನು ಕಡೆಗಣಿಸಿ ಮಿತಿ ಮೀರಿ ಸಾಲ ನೀಡಿ ನಂತರ ಸಾಲ ತೀರುವಳಿಗಾಗಿ ಒತ್ತಡ ಹಾಗೂ ಮಾನಸಿಕ ಹಿಂಸೆ ಮರು ಪಾವತಿಸುವಂತೆ  ಕಿರುಕುಳ ನೀಡುತ್ತಿರುವುದು ಗಮನಕ್ಕೆ ಬಂದಿದೆ. ಈ ರೀತಿ ದೂರುಗಳು ಬಂದರೆ ಕಂಪನಿಯ ಮ್ಯಾನೇಜರ್ ಮೇಲೆ ಕಾನೂನು ರೀತಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಭೆಯಲ್ಲಿ ತಿಳಿಸಿದರು.

ಯಾವುದಾದರೂ ಮೈಕ್ರೋ ಫೈನಾನ್ಸ್ ಕಂಪೆನಿಗಳು ಬಲವಂತವಾಗಿ ಸಾಲ ತಿರುವಳಿಕೆಗೆ ಒತ್ತಡ, ಮಾನಸಿಕ ಹಾಗೂ ಇನ್ನಿತರ ಮೂಲಕ ಹಿಂಸಿಸಿದ್ದಲ್ಲಿ ಮೈಸೂರು ಜಿಲ್ಲಾ ನಿಯಂತ್ರಣಾ ಕೊಠಡಿ 1077 ಅಥವಾ 0821-2423800 ಗೆ ಕರೆ ಮಾಡಿ ದೂರು ಸಲ್ಲಿಸಬಹುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಅವರು ಸಾಲ ತಿರುವಳಿಕೆಗಾಗಿ ಮೈಕ್ರೋ ಫೈನಾನ್ಸ್ ಕಂಪೆನಿಗಳು  ಏಜೆಂಟ್ ರನ್ನು ನೇಮಕ ಮಾಡಿ ಮಾನಸಿಕ ಹಿಂಸೆ ಹಾಗೂ ಒತ್ತಡ ಹಾಕಿದರೆ ಹಾಗೂ ಮೈಕ್ರೋ ಫೈನಾನ್ಸ್ ಸಂಸ್ಧೆಗಳು ಗರಿಷ್ಠ ಮಿತಿಯ ಸಾಲುಗಳನ್ನು ನೀಡುತ್ತಿರುವುದು ಕಂಡುಬಂದರೆ ಸಂಸ್ಥೆಯ ಮ್ಯಾನೇಜರ್ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಂ.ಗಾಯತ್ರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಲೀಡ್ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕರಾದ ಪ್ರಭಾಕರ್ ಹಾಗೂ ಮೈಕ್ರೋ ಫೈನಾನ್ಸ್ ಕಂಪೆನಿಯ ಮುಖ್ಯಸ್ಥರು ಉಪಸ್ಥಿತರಿದ್ದರು.

Key words: Microfinance, Criminal case, Mysore DC, G. Lakshmi Kantha Reddy

The post ಮೈಕ್ರೋ ಫೈನಾನ್ಸ್: ಸಾಲ ಮರುಪಾವತಿಗೆ ಮಿತಿಮೀರಿ ವರ್ತಿಸಿದರೆ ಕ್ರಿಮಿನಲ್ ಕೇಸ್ -ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

IPL: RCB  ನೂತನ ಕ್ಯಾಪ್ಟನ್ ಆಗಿ ರಜತ್ ಪಟಿದಾರ್ ನೇಮಕ

ಬೆಂಗಳೂರು,ಫೆಬ್ರವರಿ,13,2025 (www.justkannada.in): ಮುಂದಿನ ತಿಂಗಳಿನಿಂದ ಐಪಿಎಲ್ ಜ್ವರ ಶುರುವಾಗಲಿದ್ದು, ರಾಯಲ್...

കലൂര്‍ സ്റ്റേഡിയം അപകടം; 46 ദിവസങ്ങള്‍ക്ക് ശേഷം എം.എല്‍.എ ഉമാതോമസ് ആശുപത്രി വിട്ടു

കൊച്ചി: തൃക്കാക്കര എം.എല്‍.എ ഉമാതോമസ് ആശുപത്രി വിട്ടു. 46 ദിവസങ്ങള്‍ക്ക് ശേഷമാണ്...

மீண்டும் சர்ச்சையில் சிக்கிய மகா. அமைச்சர்; முதல் மனைவியை மறைத்த விவகாரத்தில் நீதிமன்றம் நோட்டீஸ்

மகாராஷ்டிரா சிவில் சப்ளை மற்றும் நுகர்வோர் பாதுகாப்புத்துறை அமைச்சராக இருப்பவர் தனஞ்சே...

Ambati Rambabu: వంశీని ఎందుకు అరెస్ట్ చేశారో అర్థం కావడం లేదు..

Ambati Rambabu: గన్నవరం మాజీ ఎమ్మెల్యే వల్లభనేని వంశీని పోలీసులు ఎందుకు...