14
February, 2025

A News 365Times Venture

14
Friday
February, 2025

A News 365Times Venture

ಬಿಜೆಪಿಯಿಂದ ಸಂವಿಧಾನ ದ್ವೇಷಿ RSS ಸಿದ್ಧಾಂತ ಹೇರಿಕೆ: ಇದನ್ನು ಹಿಮ್ಮೆಟ್ಟಿಸೋಣ: ಸಿಎಂ ಸಿದ್ದರಾಮಯ್ಯ ಕರೆ

Date:

ಬೆಳಗಾವಿ ಜನವರಿ,21,2025 (www.justkannada.in): ಸಂವಿಧಾನ ದ್ವೇಷಿಯಾಗಿರುವ RSS ಸಿದ್ಧಾಂತವನ್ನು BJP ಭಾರತೀಯರ ಮೇಲೆ ಹೇರುತ್ತಿದ್ದು ಇದನ್ನು ಹಿಮ್ಮೆಟ್ಟಿಸೋಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.

ಐತಿಹಾಸಿಕ ಜೈ ಬಾಪು-ಜೈ ಭೀಮ್- ಜೈ ಸಂವಿಧಾನ ಅಭಿಯಾನ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

BJP ಪರಿವಾರ ಭಾರತದಲ್ಲಿ ಬಹಳ  ವ್ಯವಸ್ಥಿತವಾಗಿ ಒಡಕು ತರುತ್ತಿದೆ. ಭಾರತೀಯರ ನಡುವೆ ಬಿರುಕು ಮೂಡಿಸುತ್ತಾ ಭಾರತವನ್ನು ದುರ್ಬಲಗೊಳಿಸುತ್ತಿದೆ. ಬಿಜೆಪಿಯ ಈ ಯತ್ನವನ್ನು ನಾವು ಸೋಲಿಸಬೇಕು. ಇದಕ್ಕೆ ಗಾಂಧಿ-ಅಂಬೇಡ್ಕರ್  ನಮಗೆ ಮಾರ್ಗದರ್ಶಕರು ಎಂದರು.

ಸಂವಿಧಾನ ಜಾರಿಯಾದಾಗ ಬಿಜೆಪಿ ಪರಿವಾರ ಅಂಬೇಡ್ಕರ್ ಭಾವಚಿತ್ರವನ್ನು, ಸಂವಿಧಾನವನ್ನು ಸುಟ್ಟಿತ್ತು. ಇದನ್ನು ಈ ದೇಶ, ಈ ದೇಶದ ಜನ ಸಮುದಾಯ ಯಾವತ್ತೂ ಕ್ಷಮಿಸುವುದಿಲ್ಲ, ಮರೆಯುವುದಿಲ್ಲ ಎಂದರು.

ಹಲವು ಭಾಷೆ, ಹಲವು ಜಾತಿ, ಹಲವು ಧರ್ಮ‌ ಭಾರತದ ಶಕ್ತಿ.  BJP ಪರಿವಾರ ಗಾಂಧಿ, ಅಂಬೇಡ್ಕರ್ ರನ್ನು ದ್ವೇಷಿಸುತ್ತದೆ. ನಾವು ಇಬ್ಬರ ಆಶಯಗಳನ್ನೂ ಪೀಳಿಗೆಯಿಂದ ಪೀಳಿಗೆಗೆ ದಾಟಿಸುತ್ತೇವೆ, ವಿಸ್ತರಿಸುತ್ತೇವೆ ಎಂದರು.‌

ನಾವು ಸಂವಿಧಾನ ರಕ್ಷಿಸಿದರೆ ಇದೇ ಸಂವಿಧಾನ ನಮ್ಮೆಲ್ಲರನ್ನೂ ರಕ್ಷಿಸುತ್ತದೆ.  ನಮಗೆ ಚುನಾವಣೆ ಗೆಲ್ಲುವುದಕ್ಕಿಂತ ನಮ್ಮ ಸಿದ್ಧಾಂತ ಗೆಲ್ಲಬೇಕು. ಅದು ಮಾತ್ರ ನಮ್ಮ ನಿಜವಾದ ಗೆಲುವು ಎಂದರು.

ಗಾಂಧಿ ಅಂಬೇಡ್ಕರ್ ಅವರ ಆಶಯಗಳು, ಮೌಲ್ಯಗಳ ಈಡೇರಿಕೆಗೆ ನಾವು ಕಾರ್ಯಕ್ರಮಗಳನ್ನು ರೂಪಿಸಿ ಜಾರಿ ಮಾಡಿದ್ದೇವೆ. ಇದಕ್ಕಾಗಿ ಬಜೆಟ್ ನಲ್ಲಿ 52 ಸಾವಿರ ಕೋಟಿಗೂ ಅಧಿಕ ಮೊತ್ತದ ಹಣವನ್ನು ನೇರವಾಗಿ ಜನರ ಖಾತೆಗೆ ಹಾಕಿ ರಾಜ್ಯದ ಜನರನ್ನು ಆರ್ಥಿಕವಾಗಿ ಸಬಲರನ್ನಾಗಿಸಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

Key words: BJP, imposition, RSS ideology, CM Siddaramaiah

The post ಬಿಜೆಪಿಯಿಂದ ಸಂವಿಧಾನ ದ್ವೇಷಿ RSS ಸಿದ್ಧಾಂತ ಹೇರಿಕೆ: ಇದನ್ನು ಹಿಮ್ಮೆಟ್ಟಿಸೋಣ: ಸಿಎಂ ಸಿದ್ದರಾಮಯ್ಯ ಕರೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

Kishan Reddy: మాజీ సీఎం కేసీఆర్, సీఎం రేవంత్ రెడ్డిలకు కేంద్రమంత్రి సవాల్!

మాజీ సీఎం కేసీఆర్, సీఎం రేవంత్ రెడ్డిలకు కేంద్రమంత్రి కిషన్ రెడ్డి...

ಹೂಡಿಕೆದಾರರ ಸಮಾವೇಶ: ಉತ್ಸಾಹದಿಂದ ಓಡಾಡಿದ ಎಂ ಬಿ ಪಾಟೀಲ

ಬೆಂಗಳೂರು, Feb.12,2025: ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಬುಧವಾರ ದಿನವಿಡೀ ಬೃಹತ್...

മലയോര ഹൈവേ; 250 കി.മീ പണി പൂര്‍ത്തിയായി, ഒരു വര്‍ഷത്തിനകം 200 കി.മീ കൂടി; ആദ്യ റീച്ചിന്റെ ഉദ്ഘാടനം നാളെ

തിരുവനന്തപുരം: കാസര്‍ഗോഡ് ജില്ലയിലെ നന്ദാരപ്പടവ് മുതല്‍ തിരുവനന്തപുരം ജില്ലയിലെ പാറശ്ശാലവരെ നീളുന്ന...

`மனைவி கணவரை தவிர்த்து வேறொருவர் மீது காதலும், நெருக்கமும் கொண்டிருப்பது தகாத உறவாகாது'- MP ஹைகோர்ட்

மத்தியப் பிரதேசத்தைச் சேர்ந்த ஒருவர் தன்னுடைய மனைவிக்கு வேறு ஒருவருடன் தொடர்பு...