30
September, 2026

A News 365Times Venture

30
Wednesday
September, 2026

A News 365Times Venture

ಎಸ್‌ ಐಆರ್‌ ಪೂರ್ಣಗೊಂಡ ರಾಜ್ಯಗಳಲ್ಲಿ ಫಾರ್ಮ್-6 ಘೋಷಣೆ ಹಿಂಪಡೆದ  ಚುನಾವಣಾ ಆಯೋಗ

Date:

ನವದೆಹಲಿ,ಸೆಪ್ಟಂಬರ್‌,30,2026 (www.justkannada.in) ECINET ಆಯಪ್, ಪೋರ್ಟಲ್ ಹಾಗೂ ಸಂಬಂಧಪಟ್ಟ ಮುಖ್ಯ ಚುನಾವಣಾಧಿಕಾರಿಗಳ (CEO) ಪೋರ್ಟಲ್ ‌ಗಳಿಂದ ಹೆಚ್ಚುವರಿಯಾಗಿ ಸೇರಿಸಲಾಗಿದ್ದ  ಎಸ್‌ ಐಆರ್‌  ಸಂಬಂಧಿತ ಫಾರ್ಮ್-6 ಅನ್ನು ಕೇಂದ್ರ ಚುನಾವಣಾ ಆಯೋಗ ಹಿಂಪಡೆದಿದೆ.

ಎಸ್‌ ಐಆರ್‌ ಪ್ರಕ್ರಿಯೆ ಪೂರ್ಣಗೊಂಡಿರುವ ರಾಜ್ಯಗಳಲ್ಲಿ ಆನ್‌ ಲೈನ್ ಮತದಾರರ ನೋಂದಣಿ ಅರ್ಜಿ ಫಾರ್ಮ್-6 ನಲ್ಲಿ ಹೆಚ್ಚುವರಿಯಾಗಿ ಸೇರಿಸಲಾಗಿದ್ದ  ಎಸ್‌ ಐಆರ್‌  ಸಂಬಂಧಿತ ಘೋಷಣೆಯನ್ನು ಚುನಾವಣಾ ಆಯೋಗ ಹಿಂಪಡೆದಿದೆ.

SIR ಪ್ರಕ್ರಿಯೆ ನಡೆಯುತ್ತಿರುವ ಅವಧಿಯಲ್ಲಿ ಮಾತ್ರ ಈ ಹೆಚ್ಚುವರಿ ಘೋಷಣೆ ಅನ್ವಯವಾಗಲಿದೆ ಎಂದು ಚುನಾವಣಾ ಆಯೋಗ ನಿರ್ಧರಿಸಿದ ಕೆಲ ದಿನಗಳ ಬಳಿಕ ಈ ಕ್ರಮ ಕೈಗೊಳ್ಳಲಾಗಿದೆ.

ಹೆಚ್ಚುವರಿ ಘೋಷಣೆಯಲ್ಲಿ ಹೊಸದಾಗಿ ಮತದಾರರಾಗಿ ನೋಂದಣಿಗೆ ಅರ್ಜಿ ಸಲ್ಲಿಸುವವರು, ತಾವು ಅಥವಾ ತಮ್ಮ ತಂದೆ-ತಾಯಿ ಅಥವಾ ಅಜ್ಜ-ಅಜ್ಜಿ ಹಿಂದಿನ ವಿಶೇಷ ತೀವ್ರ ಪರಿಷ್ಕರಣೆ ಸಂದರ್ಭದಲ್ಲಿ ಸಿದ್ಧಪಡಿಸಲಾದ ಮತದಾರರ ಪಟ್ಟಿಯಲ್ಲಿ ಹೆಸರು ಹೊಂದಿದ್ದ ಬಗ್ಗೆ ವಿವರಗಳನ್ನು ನೀಡಬೇಕಾಗಿತ್ತು.

SIR ಪ್ರಕ್ರಿಯೆ ಇನ್ನೂ ನಡೆಯುತ್ತಿರುವ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ಘೋಷಣೆ ECINET ಪೋರ್ಟಲ್‌ ನಲ್ಲಿ ಮುಂದುವರಿಯಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

 

Source link

LEAVE A REPLY

Please enter your comment!
Please enter your name here

Share post:

Popular

More like this
Related

LPG மானியம் தொடர வேண்டுமா? வட்டி விகிதம் மாறுகிறதா? – அக்டோபர் 2026-ன் முக்கிய நிதி மாற்றங்கள்!

நாளை அக்டோபர் 1-ம் தேதி. நாளை முதல் இந்தியாவில் கவனிக்க வேண்டிய......

Flipkart Sale: ఫ్లిప్‌కార్ట్ బిగ్ బిలియన్ డేస్ సేల్.. రూ.15 వేల లోపు లభించే కొత్త ఫోన్ల జాబితా వెల్లడి..

ఫ్లిప్‌కార్ట్ బిగ్ బిలియన్ డేస్ సేల్ త్వరలో ప్రారంభం కానుంది. ఈ...