29
September, 2026

A News 365Times Venture

29
Tuesday
September, 2026

A News 365Times Venture

ಕರಾವಳಿ ನಿಯಂತ್ರಣ ವಲಯ, ಪಶ್ಚಿಮ ಘಟ್ಟದ ಪರಿಸರ ಸೂಕ್ಷ್ಮವಲಯ ನೀತಿ ಮರುಪರಿಶೀಲಿಸಿ- ಸಿಎಂ ಡಿಕೆಶಿ ಮನವಿ

Date:

ನವದೆಹಲಿ, ಸೆಪ್ಟಂಬರ್,29,2026 (www.justkannada.in): “ಕರ್ನಾಟಕದ ಕರಾವಳಿ ವಲಯ ನಿರ್ವಹಣಾ ಯೋಜನೆ (CZMP) ಮತ್ತು ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ಪ್ರದೇಶ (ESA) ಅಧಿಸೂಚನೆ ಜಾರಿಗೆ ಸಂಬಂಧಿಸಿದಂತೆ ರಾಜ್ಯದ ವಾಸ್ತವ ಸ್ಥಿತಿಗತಿಗಳನ್ನು ಅರಿತು, ಅದಕ್ಕೆ ತಕ್ಕಂತೆ ಸೂಕ್ತ ತಿದ್ದುಪಡಿ ಹಾಗೂ ನಿಯಮಗಳನ್ನು ಸಡಿಲಿಸುವಂತೆ” ಸಿಎಂ ಡಿ ಕೆ ಶಿವಕುಮಾರ್ ಅವರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರು.

ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಭೂಪೇಂದರ್ ಯಾದವ್ ಅವರಿಗೆ ಶಿವಕುಮಾರ್ ಅವರು ಪತ್ರ ಬರೆದು ಮನವಿ ಮಾಡಿದ್ದಾರೆ.

ಸಿಆರ್ ಝಡ್ ನಕ್ಷೆಗಳ ದೋಷ ತಿದ್ದುಪಡಿ ಮಾಡಿ

“’ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಸಾಂಪ್ರದಾಯಿಕ ಮೀನುಗಾರರ ಜೀವನೋಪಾಯ ಹಾಗೂ ಕರಾವಳಿ ವಸತಿ ಪ್ರದೇಶಗಳ ರಕ್ಷಣೆಗಾಗಿ ಕೇಂದ್ರ ಸರ್ಕಾರ ತಕ್ಷಣವೇ ಮಧ್ಯಪ್ರವೇಶಿಸಬೇಕು. ಪ್ರಸ್ತುತ ಅನುಮೋದಿತ ಕರಾವಳಿ ವಲಯ ನಿರ್ವಹಣಾ ಯೋಜನೆಯ ನಕ್ಷೆಯಲ್ಲಿ ಹಲವು ದೋಷಗಳಿವೆ. ಕಂದಾಯ ದಾಖಲೆಗಳು, ನವೀಕೃತ ಉಪಗ್ರಹ ಚಿತ್ರಣಗಳು ಮತ್ತು ನೈಜ ಸ್ಥಳ ಪರಿಶೀಲನೆ (Ground-truthing) ನಡೆಸಿ ಸರ್ವೆ ಸಂಖ್ಯೆ-ವಾರು ತಿದ್ದುಪಡಿ ಮಾಡಬೇಕು” ಎಂದು ಮನವಿ ಮಾಡಿದ್ದಾರೆ.

ಗೋವಾ ಮಾದರಿಯಲ್ಲಿ ಕರ್ನಾಟಕ ಕರಾವಳಿ ಭಾಗಕ್ಕೂ ನಿಯಮ ಸಡಿಲಿಕೆ ಮಾಡಿ

“ಕರಾವಳಿ ಜನರ ಸಾಂಪ್ರದಾಯಿಕ ಮೀನುಗಾರಿಕೆ, ದೋಣಿ ದುರಸ್ತಿ, ಬಲೆ ಹೆಣೆಯುವುದು, ಮೀನು ಸಂಸ್ಕರಣೆ ಮತ್ತು ಸಾಂಪ್ರದಾಯಿಕ ಮನೆಗಳ ದುರಸ್ತಿ/ಪುನರ್ನಿರ್ಮಾಣಕ್ಕೆ ಸಿಆರ್ಝಡ್ ಚೌಕಟ್ಟಿನೊಳಗೆ ಅಗತ್ಯ ಸಡಿಲಿಕೆ ಹಾಗೂ ಮಾನ್ಯತೆ ನೀಡಬೇಕು ಎಂದು ಈ ಭಾಗದ ಮೀನುಗಾರ ಸಮುದಾಯ, ಕರಾವಳಿ ಪ್ರದೇಶದ ನಿವಾಸಿಗಳು, ಸ್ಥಳೀಯ ಆಡಳಿತ ಸಂಸ್ಥೆಗಳು, ಜನ ಪ್ರತಿನಿಧಿಗಳು ಮತ್ತು ಇತರ ಭಾಗೀದಾರರು ವಿನಂತಿಸಿದ್ದಾರೆ. ಪರಿಸರ ಸಂರಕ್ಷಣೆಗೆ ಧಕ್ಕೆಯಾಗದಂತೆ ಗೋವಾ ರಾಜ್ಯಕ್ಕೆ ಸಿಆರ್ಝಡ್ ನಿಯಮಾವಳಿಗಳಲ್ಲಿ ನೀಡಲಾಗಿರುವ ಸಡಿಲಿಕೆಗಳನ್ನು ಕರ್ನಾಟಕಕ್ಕೂ ವಿಸ್ತರಿಸಬೇಕು” ಎಂದು ಮನವಿ ಮಾಡಿದ್ದಾರೆ.

ಪಶ್ಚಿಮ ಘಟ್ಟಗಳ ಇಎಸ್ ಝಡ್ ಅಧಿಸೂಚನೆ ಮರುಪರಿಶೀಲನೆ

“ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ಪ್ರದೇಶ (ESA) ವ್ಯಾಪ್ತಿಗೆ ಕೃಷಿ ಭೂಮಿ, ತೋಟಗಳು ಮತ್ತು ಮಾನವ ವಸತಿ ಪ್ರದೇಶಗಳನ್ನು ಸೇರಿಸಿರುವುದು ಕಳವಳಕಾರಿ.  ಈ ಕುರಿತು ಪ್ರಧಾನಮಂತ್ರಿಯವರಿಗೂ ಪತ್ರ ಬರೆಯಲಾಗಿದ್ದು, ರಾಜ್ಯ ಸರ್ಕಾರ ಪ್ರಸ್ತಾಪಿಸಿರುವ ವೈಜ್ಞಾನಿಕ ಸರ್ವೆ, ಭೌತಿಕ ಪರಿಶೀಲನೆ ನಡೆಸಬೇಕು. ಉನ್ನತ ಮಟ್ಟದ ಸಮಿತಿಯ ಶಿಫಾರಸುಗಳನ್ನು ಆಧರಿಸಿ, ರಾಜ್ಯದೊಂದಿಗೆ ಚರ್ಚಿಸಿದ ನಂತರವೇ ಅಂತಿಮ ಅಧಿಸೂಚನೆ ಹೊರಡಿಸಬೇಕು” ಎಂದು ಕೋರಿದ್ದಾರೆ.

“ಮ್ಯಾಂಗ್ರೋವ್ ಗಳು (ಕಾಂಡ್ಲಾ ವನಗಳು), ಮರಳಿನ ದಿಬ್ಬಗಳು ಹಾಗೂ ಆಮೆಗಳ ಸಂತಾನೋತ್ಪತ್ತಿ ಪ್ರದೇಶಗಳಂತಹ CRZ-I ರಕ್ಷಣೆಯಲ್ಲಿ ಯಾವುದೇ ರಾಜಿಯಲ್ಲ. ಆದರೆ, ವೈಜ್ಞಾನಿಕ ಹಾಗೂ ಸತ್ಯಾಸತ್ಯತೆಯ ಆಧಾರದ ಮೇಲೆ ನಿಯಮಗಳನ್ನು ಜಾರಿಗೊಳಿಸುವುದರಿಂದ ಪರಿಸರ ಸಂರಕ್ಷಣೆ ಮತ್ತು ಸ್ಥಳೀಯರ ಜೀವನೋಪಾಯ ಎರಡನ್ನೂ ಕಾಯ್ದುಕೊಳ್ಳಬಹುದು” ಎಂದು  ಸಿಎಂ ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.

 

Source link

LEAVE A REPLY

Please enter your comment!
Please enter your name here

Share post:

Popular

More like this
Related

സുരക്ഷാ ആശങ്ക; പുതിയ എ.ഐ മോഡലിന്റെ റിലീസ് റദ്ദാക്കി ഓപ്പണ്‍ എ.ഐ

സാന്‍ ഫ്രാന്‍സിസ്‌കോ: സുരക്ഷാ പരിശോധനയില്‍ ആശങ്കപ്പെടുത്തുന്ന ഫലങ്ങള്‍ കണ്ടെത്തിയതിനെ തുടര്‍ന്ന് പുതിയ...

முதல்வர் விஜய் ஒரு ’குட்டி எம்.ஜி.ஆர்’ – ஆரத்திக் குடங்களுடன் வரவேற்பு அளித்த தொண்டர்கள்!

தமிழக அரசு மருத்துவமனைகளில் பிறக்கும் குழந்தைகளுக்கு ஒரு கிராம் தங்க மோதிரம்...

New Train Service: ఏపీ రైల్వే ప్రయాణికులకు శుభవార్త.. కొత్త రైలు వచ్చేసింది.. వారానికి 3 రోజులు..

దక్షిణ కోస్తా రైల్వే జోన్ పరిధిలోని ప్రయాణికులకు భారతీయ రైల్వే శాఖ...

ದಕ್ಷಿಣ ಕನ್ನಡ ಜಿಲ್ಲೆಗೆ ಬಿಜೆಪಿ ಕೊಡುಗೆಯೇನು? ಸಚಿವ ಯುಟಿ ಖಾದರ್ ವಾಗ್ದಾಳಿ

ಮಂಗಳೂರು, ಸೆಪ್ಟೆಂಬರ್,​​ 28,2026 (www.justkannada.in):  ಮೊದಲ ಬಾರಿಗೆ ಮಂಗಳೂರಿನಲ್ಲಿ ಸಚಿವ...