ಮೈಸೂರು,ಸೆಪ್ಟಂಬರ್,21,2026 (www.justkannada.in): ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು,ಸಿದ್ದತೆ ಕಾರ್ಯ ನಡೆಯುತ್ತಿದೆ. ಈ ನಡುವೆ ಮೈಸೂರು ದಸರಾ ಕಣ್ತುಂಬಿಕೊಳ್ಳಲು ಕಾತರರಾಗಿರುವ ಸಾರ್ವಜನಿಕರಿಗೆ ಇದೀಗ ದಸರಾ ಗೋಲ್ಡ್ ಕಾರ್ಡ್ ಬುಕ್ಕಿಂಗ್ ಆರಂಭವಾಗಿದೆ.
ಮೈಸೂರು ಜಿಲ್ಲಾಡಳಿತ ಇಂದಿನಿಂದ ಬುಕ್ಕಿಂಗ್ ಆರಂಭಿಸಿದ್ದು, ಬೆಳಗ್ಗೆ 11.30 ಗಂಟೆಗೆ ಆನ್ ಲೈನ್ ಮೂಲಕ ಟಿಕೆಟ್ ಖರೀದಿಗೆ ಅವಕಾಶ ನೀಡಲಾಗಿದೆ. ಗೋಲ್ಡ್ ಪಾಸ್ ಗೆ 6,500 ರೂ ದರ ನಿಗದಿ ಮಾಡಲಾಗಿದೆ.
ಆನ್ ಲೈನ್ ಮೂಲಕ ಗೋಲ್ಡ್ ಕಾರ್ಡ್ ಬುಕ್ಕಿಂಗ್ ಮಾಡಬಹುದಾಗಿದ್ದು, ಜಂಬೂಸವಾರಿ, ಪಂಚಿನ ಕವಾಯತು ಹಾಗೂ ಡ್ರೋನ್ ಶೋ ವೀಕ್ಷಣೆಗೆ ಟಿಕೆಟ್ ಲಭ್ಯವಿರಲಿದೆ.
ದಸರಾ–2026ರ ಅಧಿಕೃತ ಜಾಲತಾಣದಲ್ಲಿ ಟಿಕೆಟ್ ಬುಕ್ಕಿಂಗ್ https://www.mysoredasara.gov.in/ ವೆವ್ ಸೈಟ್ ನಲ್ಲಿ ಬುಕ್ಕಿಂಗ್ ಮಾಡಬಹುದಾಗಿದ್ದು ಒಂದು ಟಿಕೆಟ್ ನಲ್ಲಿ ಒಬ್ಬರಿಗೆ ಮಾತ್ರ ಅವಕಾಶ ನೀಡಲಾಗಿದೆ.





