20
September, 2026

A News 365Times Venture

20
Sunday
September, 2026

A News 365Times Venture

“ನಮ್ಮ ನಗರ ಸ್ವಚ್ಛವಾಗಿಡುವ ಕೈಗಳಿಗೆ ಆರೋಗ್ಯದ ಕಾಳಜಿ: ಪೌರಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ”

Date:

 

ಮೈಸೂರು, SEP.20,2026: ನಗರದ ಸ್ವಚ್ಛತೆ ಹಾಗೂ ಸಾರ್ವಜನಿಕ ಆರೋಗ್ಯಕ್ಕಾಗಿ ಪ್ರತಿದಿನವೂ ಮುಂಚೂಣಿಯಲ್ಲಿ ದುಡಿಯುವ ಪೌರಕಾರ್ಮಿಕರ ಆರೋಗ್ಯ ರಕ್ಷಣೆಗೆ ಮೈಸೂರು ಮಹಾನಗರ ಪಾಲಿಕೆ ಮತ್ತು ಮಣಿಪಾಲ್ ಆಸ್ಪತ್ರೆ ಕೈಜೋಡಿಸಿವೆ.

ಪೌರಕಾರ್ಮಿಕರ ಆರೋಗ್ಯ ಮತ್ತು ಕ್ಷೇಮಾಭಿವೃದ್ಧಿಯ ಉದ್ದೇಶದಿಂದ ಮಣಿಪಾಲ್ ಆಸ್ಪತ್ರೆಯ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು. ಶಿಬಿರದಲ್ಲಿ ಪೌರಕಾರ್ಮಿಕರ ಆರೋಗ್ಯ ತಪಾಸಣೆ ನಡೆಸಿ, ಅಗತ್ಯ ವೈದ್ಯಕೀಯ ಸಲಹೆ ಹಾಗೂ ಆರೋಗ್ಯ ಸಂರಕ್ಷಣೆಯ ಕುರಿತು ಮಾರ್ಗದರ್ಶನ ನೀಡಲಾಯಿತು.

ನಮ್ಮ ಮನೆ, ನಮ್ಮ ರಸ್ತೆ, ನಮ್ಮ ನಗರವನ್ನು ಸ್ವಚ್ಛವಾಗಿಡುವ ಪೌರಕಾರ್ಮಿಕರು ತಮ್ಮ ಆರೋಗ್ಯವನ್ನು ನಿರ್ಲಕ್ಷಿಸಬಾರದು ಎಂಬ ಸಂದೇಶವನ್ನು ಅಧಿಕಾರಿಗಳು ನೀಡಿದರು.

ಕಾರ್ಯಕ್ರಮದಲ್ಲಿ ಮೈಸೂರು ಮಹಾನಗರ ಪಾಲಿಕೆ ಆಯುಕ್ತರಾದ  ಸವಿತಾ ಎಂ.ಕೆ., ಮಣಿಪಾಲ್ ಆಸ್ಪತ್ರೆಯ ನಿರ್ದೇಶಕರಾದ ಡಾ. ಸಂದೀಪ್ ಪಾಟೀಲ್, ವಲಯ–7ರ ಸಹಾಯಕ ಆಯುಕ್ತರಾದ ರತ್ನಾಂಬಿಕೆ, ಪರಿಸರ ಅಭಿಯಂತರರಾದ ಚಿನ್ಮಯಿ, ಆರೋಗ್ಯ ನಿರೀಕ್ಷಕರಾದ ನಮ್ರತಾ ಮತ್ತು ದರ್ಶನ್ ಸೇರಿದಂತೆ ಪಾಲಿಕೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಮಣಿಪಾಲ್ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ಪೌರಕಾರ್ಮಿಕರ ಆರೋಗ್ಯ ತಪಾಸಣೆ ನಡೆಸಿದರು.

ನಗರದ ಆರೋಗ್ಯಕ್ಕಾಗಿ ತಮ್ಮ ಆರೋಗ್ಯವನ್ನೇ ಪಣಕ್ಕಿಟ್ಟು ದುಡಿಯುವ ಪೌರಕಾರ್ಮಿಕರ ಆರೋಗ್ಯ ಕಾಳಜಿಗೆ ಸ್ಪಂದಿಸಿದ ಮಣಿಪಾಲ್ ಆಸ್ಪತ್ರೆಯ ಆಡಳಿತ ಮಂಡಳಿ, ವೈದ್ಯರು ಹಾಗೂ ಸಿಬ್ಬಂದಿಗೆ ಮೈಸೂರು ಮಹಾನಗರ ಪಾಲಿಕೆ ಅಭಿನಂದನೆ ಸಲ್ಲಿಸಿತು.

ನಗರವನ್ನು ಸ್ವಚ್ಛವಾಗಿಡುವವರ ಆರೋಗ್ಯವೂ ನಮ್ಮೆಲ್ಲರ ಹೊಣೆ ಎಂಬ ಮಾನವೀಯ ಸಂದೇಶವನ್ನು ಈ ಶಿಬಿರ ಸಾರಿತು.

 

Source link

LEAVE A REPLY

Please enter your comment!
Please enter your name here

Share post:

Popular

More like this
Related

റോഡില്ലെങ്കില്‍ വോട്ടില്ലെന്ന് നാട്ടുകാര്‍; ആവശ്യങ്ങള്‍ അപേക്ഷയായി മുന്നോട്ട് വെക്കണമെന്ന് കേന്ദ്രമന്ത്രി: പ്രതിഷേധം

  ഗുണ: റോഡ് നിര്‍മാണം വൈകുന്നതില്‍ പ്രതിഷേധിച്ച് കേന്ദ്രമന്ത്രി ജ്യോതിരാദിത്യ സിന്ധ്യയുടെ...

“தமிழ்நாட்டில் இப்போது பல பவர் சென்டர்கள் உருவாகிவிட்டன" – ஜோஸ் சார்லஸ் மார்ட்டின்

புதுச்சேரியை தலைமையிடமாக கொண்டு செயல்படும் லட்சிய ஜனநாயக கட்சியின் தலைவர் ஜோஸ்...

Garba Row: గర్బాలో ముస్లింల ఎంట్రీపై వివాదం.. నుదిటిపై తిలకం తప్పనిసరి!

Garba Row: ముంబైలో బోరివలిలో జరుగుతున్న భారీ గర్బా కార్యక్రమంలో ముస్లింల...

ಕಸ್ತೂರಿ ರಂಗನ್ ವರದಿ: ಜನಾಭಿಪ್ರಾಯ ಆಧರಿಸಿ ನಿರ್ಧಾರ : ಸಿಎಂ ಡಿ.ಕೆ.ಶಿವಕುಮಾರ್

ಸಕಲೇಶಪುರ, ಸೆ 20: ಕಸ್ತೂರಿ ರಂಗನ್ ವರದಿ ಜಾರಿ ವಿಚಾರದಲ್ಲಿ...