13
September, 2026

A News 365Times Venture

13
Sunday
September, 2026

A News 365Times Venture

VTU ಕುಲಪತಿ ಡಾ. ಎಸ್. ವಿದ್ಯಾಶಂಕರ್‌ಗೆ ಹೈಕೋರ್ಟ್‌ ರಿಲೀಫ್

Date:

 

ಬೆಂಗಳೂರು, SEP.12,2026: ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (VTU) ಕುಲಪತಿಯಾಗಿ ಡಾ. ಎಸ್. ವಿದ್ಯಾಶಂಕರ್ ಅವರ ನೇಮಕ ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ಕರ್ನಾಟಕ ಹೈಕೋರ್ಟ್‌ ವಜಾಗೊಳಿಸಿದೆ.

ನ್ಯಾಯಮೂರ್ತಿ ಡಿ.ಕೆ. ಸಿಂಗ್ ಮತ್ತು ನ್ಯಾಯಮೂರ್ತಿ ಎಚ್. ಶಾಂತಿ ಭೂಷಣ್ ಅವರಿದ್ದ ವಿಭಾಗೀಯ ಪೀಠವು, ವಿದ್ಯಾಶಂಕರ್ ಅವರು ಕುಲಪತಿ ಹುದ್ದೆ ಹೊಂದಲು ಅನರ್ಹರಾಗಿದ್ದಾರೆ ಎಂಬುದನ್ನು ಸಾಬೀತುಪಡಿಸುವ ಯಾವುದೇ ಕಾನೂನುಬದ್ಧ ಆಧಾರ ಅರ್ಜಿದಾರರು ನೀಡಿಲ್ಲ ಎಂದು ಹೇಳಿದೆ.

2022ರ ಸೆಪ್ಟೆಂಬರ್‌ 29ರಂದು ನಡೆದ ನೇಮಕಾತಿ ಅಧಿಸೂಚನೆಯನ್ನು ಪ್ರಶ್ನಿಸಿ ಯೋಗೇಶ್ ಬಿ. ಮತ್ತು ವೆಂಕಟೇಶ್ ಕೆ.ಎ. ಅವರು Quo Warranto ಅರ್ಜಿ ಸಲ್ಲಿಸಿದ್ದರು. ಯುಜಿಸಿ ನಿಯಮಗಳು-2018 ಹಾಗೂ ವಿಟಿಯು ಕಾಯ್ದೆಯ ಸೆಕ್ಷನ್‌ 13 ಉಲ್ಲಂಘನೆಯಾಗಿದೆ ಎಂದು ಅವರು ಆರೋಪಿಸಿದ್ದರು. ಅಲ್ಲದೆ, ಕುಲಪತಿ ಆಯ್ಕೆ ಸಮಿತಿಯ ರಚನೆ, ಯುಜಿಸಿ ಪ್ರತಿನಿಧಿಯ ಗೈರುಹಾಜರಿ ಹಾಗೂ ವಿದ್ಯಾಶಂಕರ್ ಅವರ ಶೈಕ್ಷಣಿಕ ಅರ್ಹತೆಗಳ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸಿದ್ದರು.

ಆದರೆ, ಈ ಆರೋಪಗಳು ಕುಲಪತಿ ಹುದ್ದೆ ಅಕ್ರಮವಾಗಿ ಹೊಂದಿದ್ದಾರೆ ಎಂಬುದನ್ನು ಸಾಬೀತುಪಡಿಸುವಷ್ಟು ಗಂಭೀರವಾಗಿಲ್ಲ ಎಂದು ಹೈಕೋರ್ಟ್‌ ಸ್ಪಷ್ಟಪಡಿಸಿದೆ.

“ಅಭ್ಯರ್ಥಿಯ ಆಯ್ಕೆ ಅಕ್ರಮವಾಗಿದೆ ಅಥವಾ ಮತ್ತೊಬ್ಬ ಅಭ್ಯರ್ಥಿ ಹೆಚ್ಚು ಅರ್ಹರಾಗಿದ್ದರು ಎಂದು ಹೇಳುವುದಷ್ಟೇ ಸಾಕಾಗುವುದಿಲ್ಲ. ಹುದ್ದೆ ಹೊಂದಿರುವ ವ್ಯಕ್ತಿ ಕಾನೂನುಬದ್ಧ ಅಧಿಕಾರವಿಲ್ಲದೆ ಹುದ್ದೆ ನಿರ್ವಹಿಸುತ್ತಿದ್ದಾರೆ ಎಂಬುದನ್ನು ಸಾಬೀತುಪಡಿಸಬೇಕು” ಎಂದು ಪೀಠ ಅಭಿಪ್ರಾಯಪಟ್ಟಿದೆ.

ಅಲ್ಲದೆ, Quo Warranto ಅರ್ಜಿಯಲ್ಲಿ ಅಭ್ಯರ್ಥಿಯ *‘ಅರ್ಹತೆ’*ಯನ್ನು ಮಾತ್ರ ಪರಿಶೀಲಿಸಬಹುದು; ಯಾರು ಹೆಚ್ಚು ‘ಸೂಕ್ತ ಅಭ್ಯರ್ಥಿ’ ಎಂಬ ತುಲನಾತ್ಮಕ ಮೌಲ್ಯಮಾಪನ ನಡೆಸಲು ನ್ಯಾಯಾಲಯದ ವ್ಯಾಪ್ತಿ ಇಲ್ಲ ಎಂದು ನ್ಯಾಯಪೀಠ ತಿಳಿಸಿದೆ.

ನೇಮಕಾತಿಗೆ ಸುಮಾರು ಮೂರು ವರ್ಷಗಳ ಬಳಿಕ ಮತ್ತೊಮ್ಮೆ ಈ ರೀತಿಯ ಸವಾಲು ಬಂದಿರುವುದನ್ನೂ ನ್ಯಾಯಾಲಯ ಗಮನಿಸಿದೆ. ಹಿಂದಿನ ಸವಾಲು ಸುಪ್ರೀಂ ಕೋರ್ಟ್‌ವರೆಗೂ ಹೋಗಿದ್ದ ಹಿನ್ನೆಲೆಯಲ್ಲಿ, ನ್ಯಾಯಾಂಗ ಪ್ರಕ್ರಿಯೆಯನ್ನು ವೈಯಕ್ತಿಕ ಅಸಮಾಧಾನ ಅಥವಾ ವೈಯಕ್ತಿಕ ಹಿತಾಸಕ್ತಿಗಳನ್ನು ಮುಂದುವರಿಸಲು ಬಳಸಬಾರದು ಎಂದು ಪೀಠ ಎಚ್ಚರಿಸಿದೆ.

ಹೀಗಾಗಿ, ಡಾ. ಎಸ್. ವಿದ್ಯಾಶಂಕರ್ ಅವರ ವಿಟಿಯು ಕುಲಪತಿ ನೇಮಕಾತಿಯನ್ನು ರದ್ದುಪಡಿಸಲು ಯಾವುದೇ ಕಾನೂನುಬದ್ಧ ಆಧಾರವಿಲ್ಲ ಎಂದು ತೀರ್ಮಾನಿಸಿದ ಕರ್ನಾಟಕ ಹೈಕೋರ್ಟ್‌, ಮೇಲ್ಮನವಿಯನ್ನು ವಜಾಗೊಳಿಸಿದೆ.

 

Key words: Karnataka, High Court, Upholds, VTU, VC Appointment

ENGLISH SUMMARY:

Karnataka HC Upholds VTU VC Appointment

Bengaluru: The Karnataka High Court has dismissed a plea challenging the appointment of Dr. S. Vidyashankar as Vice-Chancellor of Visvesvaraya Technological University (VTU), Belagavi.

A division bench of Justices D.K. Singh and H. Shanthi Bhushan held that the petitioner failed to establish any statutory disqualification or patent illegality in the appointment. The Court clarified that a quo warranto petition can examine only the eligibility of a person holding public office, not whether another candidate was more suitable. The petitioners had alleged violations of UGC Regulations and the VTU Act, besides questioning the selection committee and Vidyashankar’s credentials.

The High Court found no legal grounds to interfere with his appointment and dismissed the appeal.

Source link

LEAVE A REPLY

Please enter your comment!
Please enter your name here

Share post:

Popular

More like this
Related

സ്ത്രീകള്‍ വീട്ടിലിരിക്കണമെന്നതില്‍ യോജിപ്പില്ല: മലേഷ്യന്‍ പ്രധാനമന്ത്രി കാന്തപുരത്തെ കുറിച്ച്

കോഴിക്കോട്: സ്ത്രീകള്‍ പൊതു രംഗത്ത് ഇടപെടുന്നതിനെക്കുറിച്ചുള്ള കാന്തപുരം എ.പി. അബൂബക്കര്‍ മുസ്‌ലിയാരുടെ...

'தலைவரோட ரேஸிங் சூட்டோட போட்டோ எடுக்கணும்!' – குஷியான சி.எம் விஜய்; ஆரத்தழுவிய அஜித்!

லண்டனின் சில்வர் ஸ்டோன் சர்க்கியூட்டில் நடக்கும் கார் ரேஸ் பந்தயத்தை தமிழக...

PM Modi: ‘రూల్ టేకర్’ కాదు, ‘రూల్ షేపర్’గా మారాలి.. బ్రిక్స్ వేదికపై మోదీ పిలుపు

PM Modi: 18వ బ్రిక్స్ సమావేశాలు న్యూఢిల్లీలో ప్రారంభమయ్యాయి. ప్రధాని నరేంద్రమోడీ...

ಸಾರ್ವಜನಿಕ ಗಣೇಶೋತ್ಸವ: ಸುರಕ್ಷತಾ ಮಾರ್ಗಸೂಚಿ ಅನುಸರಿಸಲು ಸೆಸ್ಕ್ ಸೂಚನೆ

ಮೈಸೂರು, ಸೆಪ್ಟಂಬರ್,12, 2026 (www.justkannada.in):  ಗೌರಿ-ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಸಾರ್ವಜನಿಕ...