11
September, 2026

A News 365Times Venture

11
Friday
September, 2026

A News 365Times Venture

ಫಲಾನುಭವಿಗಳ ಜೊತೆಯೇ ಸಿಎಂ ಡಿಕೆಶಿ ಭೋಜನ: ಅಪರೂಪದ ಕ್ಷಣಗಳಿಗೆ ಸಾಕ್ಷಿಯಾದ ಕಾರ್ಯಕ್ರಮ

Date:

ಬೆಂಗಳೂರು ಸೆಪ್ಟಂಬರ್.10,2026  (www.justkannada.in): ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರ ನೂರು ದಿನಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಗುರುವಾರ ಆಯೋಜಿಸಲಾಗಿದ್ದ  ‘ದೃಢ ಕರ್ನಾಟಕದ ಸಂಕಲ್ಪ’ ಕಾರ್ಯಕ್ರಮ ಅಪರೂಪದ ಕ್ಷಣಗಳಿಗೆ ಸಾಕ್ಷಿಯಾಯಿತು.

ಇದು ಕೇವಲ ನೂರುದಿನಗಳ ಸಂಭ್ರವಾಗಿರಲಿಲ್ಲ. ಈ ಅವಧಿಯಲ್ಲಿ ಸರ್ಕಾರ ಇಟ್ಟ ಜನಪರ ಹೆಜ್ಜೆ ಗುರುತುಗಳ ಪುನರ್ ಅವಲೋಕನವಾಗಿತ್ತು. ಸದೃಢ ಕರ್ನಾಟಕ ನಿರ್ಮಾಣದ ಸಂಕಲ್ಪವಾಗಿತ್ತು.

ಸಿಎಂ ಡಿಕೆ ಶಿವಕುಮಾರ್ ಅವರು ವೇದಿಕೆ ಏರುವ ಮುನ್ನ, ಸಮಾರಂಭಕ್ಕೆ ಆಗಮಿಸಿದ್ದ ವಿವಿಧ ಯೋಜನೆಗಳ ಫಲಾನುಭವಿಗಳ ಬಳಿಗೆ ತಾವೇ ತೆರಳಿ ಉಭಯ ಕುಶಲೋಪರಿ ವಿಚಾರಿಸಿ ಎಲ್ಲರ ಮನ ಗೆದ್ದರು.

ಸಿಎಂ ಬ್ಯಾಂಕ್ವೆಟ್ ಹಾಲ್ ಮುಂಭಾಗದಲ್ಲಿ ತೆರೆದಿದ್ದ ಅಕ್ಕಾ ಕೆಫೆ, ಅರಿವು ಕೇಂದ್ರಗಳಿಗೆ ಭೇಟಿ ಕೊಟ್ಟು, ಅಲ್ಲಿನ ಸಿಬ್ಬಂದಿಗಳ ಜೊತೆಗೆ ಮಾತುಕತೆ ನಡೆಸಿದರು.

ಫಲಾನುಭವಿಗಳಿಂದಲೇ ಉದ್ಘಾಟನೆ

ನಂತರ ವೇದಿಕೆ ಮುಂಭಾಗದಲ್ಲಿ ಕುಳಿತಿದ್ದ ರಾಜ್ಯದ ಎಲ್ಲಾ ಸಚಿವ ಸಂಪುಟ ಸಚಿವರು, ಶಾಸಕ ಮಿತ್ರರ ಬಳಿಗೆ ತಾವೇ ಖುದ್ದಾಗಿ ಹೋಗಿ ಪ್ರತಿಯೊಬ್ಬರಿಗೂ ಹಸ್ತಲಾಘವ ನೀಡುವ ಮೂಲಕ ಸ್ವಾಗತಕೋರಿದ್ದು ಇಡೀ ಸಮಾರಂಭಕ್ಕೆ ವಿಶೇಷ ಮೆರುಗು ನೀಡಿತು.

ಕಾರ್ಯಕ್ರಮ ಉದ್ಘಾಟನೆ ವೇಳೆ ಗ್ಯಾರಂಟಿ ಫಲಾನುಭವಿಗಳು, ರೈತರು, ವಿದ್ಯಾರ್ಥಿಗಳು, ಪೌರಕಾರ್ಮಿಕರನ್ನು ವೇದಿಕೆಗೆ ಕರೆದು ಅವರೊಂದಿಗೆ ದೀಪ ಬೆಳಗಿಸಿದರು. ಗೃಹಲಕ್ಷ್ಮೀ ಹಣವನ್ನು ಬಳಸಿ ಸ್ವ ಉದ್ಯೋಗ ಆರಂಭಿಸಿದ  ಮಹಿಳೆಯರು ತಾವು ತಯಾರಿಸಿದ್ದ ಖಾದ್ಯವನ್ನು ಸಮಾರಂಭಕ್ಕೆ ತೆಗೆದುಕೊಂಡು ಬಂದಿದ್ದರು. ಮುಖ್ಯಮಂತ್ರಿಗಳು, ಸಚಿವರು, ಶಾಸಕರೆಲ್ಲಾ ಗೃಹಲಕ್ಷ್ಮಿ ಫಲಾನುಭವಿಗಳು ತಯಾರಿಸಿದ ಖಾದ್ಯವನ್ನು ಸವಿಯುವಂತೆ ಮನವಿ ಮಾಡಿದರು.

ಸರ್ಕಾರದ ನೂರು ದಿನಗಳ ನೆನಪಿಗಾಗಿ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು,  ಉಪ ಮುಖ್ಯಮಂತ್ರಿ ಡಾ. ಜಿ ಪರಮೇಶ್ವರ, ನಿಕಟಪೂರ್ವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮಕ್ಷಮದಲ್ಲಿ ನೂತನ ಜನಪರ ಯೋಜನೆಗಳನ್ನು ಘೋಷಿಸಿ ಅಭಿವೃದ್ಧಿಯ ಮೈಲಿಗಲ್ಲು ನೆಟ್ಟರು.

ಸೇವಾ ಒನ್, ಮುಖ್ಯಮಂತ್ರಿ ರೈತ ಚೈತನ್ಯ ಯೋಜನೆ, ಶಾಲೆಗಳಿಗೆ ಸಿ ಎಸ್ ಆರ್ ಪೋರ್ಟಲ್, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್, ಬಿಎಂಟಿಸಿ 2.0 ಆ್ಯಪ್, ಒನ್ ಕರ್ನಾಟಕ ಮೊಬಿಲಿಟಿ ಆ್ಯಪ್ ಅವತಾರ್ 2.0, ಮಾಲಿನ್ಯ ನಿಯಂತ್ರಣ ಸಾಧನ (Retrofit emission Control Device RECD) ಅಳವಡಿಕೆ ಯೋಜನೆಗಳಿಗೆ ಸಿಎಂ ಚಾಲನೆ ನೀಡಿ ರಾಜ್ಯದ ಜನರಿಗೆ ಉಡುಗೊರೆ ನೀಡಿದರು.

ರಾಜ್ಯದಲ್ಲಿರುವ ಬಡವರು ಮುಖ್ಯವಾಗಿ ಗ್ರಾಮೀಣ ಭಾಗದ ನಿವೇಶನ ರಹಿತರಿಗಾಗಿ ಸೂರು ಒದಗಿಸಲು 5 ಲಕ್ಷ ನಿವೇಶನ ಹಂಚಿಕೆ ಯೋಜನೆ ಹಾಗೂ ಸೈನಿಕ ಸಮ್ಮಾನ ಯೋಜನೆ ಆದೇಶಕ್ಕೆ ಸಿಎಂ ಸಹಿ ಮಾಡಿದರು. ಈ ಐತಿಹಾಸಿಕ ಕ್ಷಣಗಳಿಗೆ ಇಡೀ ಸಮಾರಂಭ ಸಾಕ್ಷಿಯಾಯಿತು.

ಫಲಾನುಭವಿಗಳೊಂದಿಗೆ ಭೋಜನ ಸವಿದ ಸಿಎಂ

ಸಮಾರಂಭ ಪೂರ್ಣಗೊಂಡ ನಂತರ ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ಸರ್ಕಾರದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳೊಂದಿಗೆ ಕುಳಿತು ಸಿಎಂ ಡಿಕೆ ಶಿವಕುಮಾರ್ ಬಾಳೆ‌ ಎಲೆ‌ ಭೋಜನ ಸೇವಿಸಿದರು. ಈ ವೇಳೆ, ಪಕ್ಕದಲ್ಲಿ ಕುಳಿತ ರೈತನೊಂದಿಗೆ, ‘ಯಾವೂರು, ಏನು ಬೇಳೆ ಹಾಕಿದೆಯಾ, ಮಳೆ ಏನಾದ್ರು ಬಿತ್ತಾ, ಏನು ಭಯ ಬೀಳಬೇಡ, ನಮ್ಮ ಸರ್ಕಾರ ಇದೆ ’ ಎಂದು  ಊಟದ ಜೊತೆ ಅಭಯ ತುಂಬಿದರು.

ನೂರು ದಿನಗಳ ಸಮಾರಂಭದಲ್ಲಿ ಪ್ರಗತಿಯ ರಥ ಎಳೆಯುವ ಒಕ್ಕೊರಲಿನ ಸಂಕಲ್ಪ ಮಾಡಲಾಯಿತು.

Key words: CM DK Shivakumar, 100-Day Celebrations, Beneficiaries

The post ಫಲಾನುಭವಿಗಳ ಜೊತೆಯೇ ಸಿಎಂ ಡಿಕೆಶಿ ಭೋಜನ: ಅಪರೂಪದ ಕ್ಷಣಗಳಿಗೆ ಸಾಕ್ಷಿಯಾದ ಕಾರ್ಯಕ್ರಮ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

സത്യ നികേതന്‍ ഹോസ്റ്റല്‍ അപകടം; നടത്തിപ്പുകാര്‍ക്ക് അപകട മുന്നറിയിപ്പ് നല്‍കിയിരുന്നതായി തൊഴിലാളി

ന്യൂദല്‍ഹി: ദല്‍ഹി സത്യ നികേതനില്‍ ഹോസ്റ്റല്‍ കെട്ടിടം തകരുന്നതിന് മണിക്കൂറുകള്‍ക്ക് മുമ്പ്...

பாளையங்கோட்டை: குப்பைக் கிடங்காக மாறி வரும் பிரதான சாலை… அலட்சியம் தவிர்ப்பார்களா அதிகாரிகள்?

தென்னகத்தின் ஆக்ஸ்போர்ட் என அழைக்கப்படும் பாளையங்கோட்டையில், சுமார் 2 கி.மீ பரப்பளவிற்குள்...

BRICS Summit 2026: పుతిన్-మోడీ-జిన్‌పింగ్.. ప్రపంచం చూపంతా ఢిల్లీ వైపే!

BRICS Summit 2026: భారత్ మరోసారి అంతర్జాతీయ కార్యక్రమానికి వేదికగా మారుతోంది....

ಕೈ’ ನಾಯಕ ರಾಹುಲ್ ಗಾಂಧಿ ಭೇಟಿಯಾದ ಮಾಜಿ ಸಿಎಂ ಸಿದ್ದರಾಮಯ್ಯ

ನವದೆಹಲಿ,ಸೆಪ್ಟಂಬರ್,11,2026 (www.jstkannada.in); ದೆಹಲಿ ಪ್ರವಾಸದಲ್ಲಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರು...