9
September, 2026

A News 365Times Venture

9
Wednesday
September, 2026

A News 365Times Venture

ಹಣದ ವಿಚಾರಕ್ಕೆ ಮಾರಣಾಂತಿಕ ಹಲ್ಲೆ: ಮೂವರಿಗೆ ಗಾಯ, 10 ಮಂದಿ ವಿರುದ್ಧ FIR

Date:

ಮೈಸೂರು, ಸೆಪ್ಟಂಬರ್,8,2026 (www.justkannada.in):  ಹಣಕಾಸಿನ ವಿಚಾರಕ್ಕೆ ಉಂಟಾದ ವಿವಾದ ವಿಕೋಪಕ್ಕೆ ತಿರುಗಿ, 20ರಿಂದ 25 ಮಂದಿಯ ಗುಂಪು ಮೂವರು ಯುವಕರ ಮೇಲೆ ಬಿಯರ್ ಬಾಟಲ್‌ನಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಮೈಸೂರು ತಾಲೂಕಿನ ಚಿಕ್ಕೇಗೌಡನ ಹೊಸಪುರ ಗ್ರಾಮದ ಬಳಿ ತಡವಾಗಿ ಬೆಳಕಿಗೆ ಬಂದಿದೆ.

ಸೆ. 6ರಂದು ಸಂಜೆ ಹಣದ ವಿಚಾರವಾಗಿ ಮಾತನಾಡಲು ತೆರಳಿದ್ದ ಗಾರೆ ಕೆಲಸ ಮಾಡುವ ಸ್ವಾಮಿ (22) ಎಂಬ ಯುವಕನೊಂದಿಗೆ ಕೆಲವರು ಜಗಳ ತೆಗೆದಿದ್ದಾರೆ. ಬಳಿಕ ರಾತ್ರಿ ರಾಯಣ್ಣ ಸರ್ಕಲ್ ಬಳಿ ಸ್ವಾಮಿ ಹಾಗೂ ಸ್ನೇಹಿತರಾದ ರಾಕೇಶ್ ಮತ್ತು ರವಿಕುಮಾರ್ ಮೇಲೆ ಗುಂಪು ಹಲ್ಲೆ ನಡೆಸಿದೆ ಎಂದು ಎಫ್ ಐಆರ್  ನಲ್ಲಿ ಆರೋಪಿಸಲಾಗಿದೆ.

ಆರೋಪಿ ಅರುಣ ರಸ್ತೆಯಲ್ಲಿ ಬಿದ್ದಿದ್ದ ಬಿಯರ್ ಬಾಟಲ್‌ನಿಂದ ಸ್ವಾಮಿ ಅವರ ತಲೆ, ಕೆನ್ನೆ ಹಾಗೂ ಕಿವಿಗೆ ಹೊಡೆದು ರಕ್ತಗಾಯಗೊಳಿಸಿದ್ದಾನೆ. ಬಿಡಿಸಲು ಬಂದ ರಾಕೇಶ್ ಮತ್ತು ನಂತರ ಸ್ಥಳಕ್ಕೆ ಬಂದ ರವಿಕುಮಾರ್ ಮೇಲೂ ಬಿಯರ್ ಬಾಟಲ್‌ನಿಂದ ಹಲ್ಲೆ ನಡೆದಿದೆ ಎನ್ನಲಾಗಿದೆ.

ಹಲ್ಲೆ ಬಳಿಕ “ಇಂದು ಬದುಕಿದ್ದೀರಿ, ಮುಂದೆ ಸಿಕ್ಕರೆ ಕೊಲೆ ಮಾಡುತ್ತೇವೆ” ಎಂದು ಬೆದರಿಕೆ ಹಾಕಿ ಆರೋಪಿಗಳು ಪರಾರಿಯಾಗಿದ್ದಾರೆ. ಮಾರ್ಗವಾಗಿ ಆಟೋದಲ್ಲಿ ತೆರಳುತ್ತಿದ್ದ ಮನೋಜ್ ಮಧ್ಯಪ್ರವೇಶಿಸಿ ಜಗಳ ಬಿಡಿಸಿದ್ದಾರೆ. ಗಾಯಾಳುಗಳನ್ನು 108 ಆಂಬುಲೆನ್ಸ್ ಮೂಲಕ ಕೆ.ಆರ್. ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ಸಂಬಂಧ 10 ಮಂದಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಆರೋಪಿಗಳ ವಿರುದ್ಧ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ENGLISH SUMMARY..

Mysuru: Three Injured in Beer Bottle Attack Over Money Dispute

Mysuru, Sept. 8: Three youths were allegedly assaulted with beer bottles by a group of 20–25 people over a financial dispute near Chikkegowdanahosuru village in Mysuru taluk.

Swamy (22), along with his friends Rakesh and Ravikumar, suffered injuries in the attack. The accused allegedly hit Swamy on the head, cheek and ear with a beer bottle and also assaulted his friends.

The attackers allegedly threatened to kill them if they were found again before fleeing the spot. The injured were shifted to K.R. Hospital by ambulance.

An FIR has been registered against 10 people, and police are investigating

Key words: Mysuru, Three Injured, Attack, Money Dispute

The post ಹಣದ ವಿಚಾರಕ್ಕೆ ಮಾರಣಾಂತಿಕ ಹಲ್ಲೆ: ಮೂವರಿಗೆ ಗಾಯ, 10 ಮಂದಿ ವಿರುದ್ಧ FIR appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

Supreme Court: సీజేపీ నిరసనకారుడికి నోటీసు.. ఎగ్జిక్యూటివ్ మేజిస్ట్రేట్‌పై సుప్రీంకోర్టు ఆగ్రహం

ఢిల్లీ జంతర్‌మంతర్‌లో జరిగిన విద్యార్థుల నిరసనలకు సంబంధించి గౌతమ్ బుద్ధ యూనివర్సిటీకి...

ರೈತರ ವಿಮೆ ಹಣ ಕಟ್ಟದ, ಸೊಸೈಟಿ ಕಾರ್ಯದರ್ಶಿ ವಜಾಕ್ಕೆ ಸಿಎಂ ಡಿ ಕೆ ಶಿವಕುಮಾರ್ ಸೂಚನೆ

ಬೆಂಗಳೂರು, ಸೆಪ್ಟಂಬರ್, 08,2026 (www.justkannada.in): ಬೆಳಗಾವಿಯ ಜೇವರ್ಗಿ ತಾಲ್ಲೂಕಿನ ಇಟ್ಟನಹಳ್ಳಿ...

വംശീയ ഉന്മൂലനം ചൂണ്ടിക്കാട്ടിയതിനും അനധികൃത കുടിയേറ്റങ്ങള്‍ക്കെതിരായ ഉപരോധത്തിനും ബ്രിട്ടനെതിരെ പ്രതികാര നടപടികളുമായി ഇസ്രഈല്‍

ലണ്ടന്‍: വെസ്റ്റ് ബാങ്കിലെ അനധികൃത ഇസ്രഈല്‍ കുടിയേറ്റ കേന്ദ്രങ്ങളുമായുള്ള എല്ലാ വ്യാപാരങ്ങള്‍ക്കുമെതിരെ...

முதல் நாளிலேயே களமிறங்கிய திமுக : இடைத்தேர்தலுக்கான வேட்பாளர்கள் யார் யார்?

தமிழகத்தில் 7 சட்டமன்றத் தொகுதிகள் காலியாக இருக்கும் நிலையில் மதுராந்தகம், தாராபுரம்...