31
August, 2026

A News 365Times Venture

31
Monday
August, 2026

A News 365Times Venture

ಬೆಂಗಳೂರು ಮೇಲಿನ ಒತ್ತಡ ಕಡಿಮೆ ಮಾಡಲು ಮೈಸೂರು ಸೇರಿ 5 ನಗರಗಳ ಅಭಿವೃದ್ಧಿಗೆ ಹೊಸ ಯೋಜನೆ- ಸಿಎಂ ಡಿ.ಕೆ. ಶಿವಕುಮಾರ್

Date:

ಮೈಸೂರು ಆಗಸ್ಟ್ ,29,2026 (www.justkannada.in): ಬೆಂಗಳೂರು ನಗರದಲ್ಲಿ ಹೆಚ್ಚುತ್ತಿರುವ ಜನಸಾಂದ್ರತೆ, ವಾಹನ ದಟ್ಟಣೆ ಹಾಗೂ ಮೂಲಸೌಕರ್ಯಗಳ ಮೇಲಿನ ಒತ್ತಡವನ್ನು ತಗ್ಗಿಸುವ ಉದ್ದೇಶದಿಂದ ರಾಜ್ಯದ ಐದು ಪ್ರಮುಖ ನಗರಗಳಿಗೆ ಹೊಸ ರೂಪ ನೀಡಲು ಸರಕಾರ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹೇಳಿದರು.

ಇಂದು  ನಗರದ ಓವಲ್‌ ಮೈದಾನದಲ್ಲಿ ಹೆಲಿಪ್ಯಾಡ್ಡೆನ ಮೂಲಕ ಮೈಸೂರಿನ ಸುತ್ತೂರು ಮಠದ ಮೈಸೂರು ಶಾಖೆಯಲ್ಲಿ ಜರುಗಲಿರುವ  ಜಗದ್ಗುರು ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ 111ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಲು ಆಗಮಿಸಿದ ಸಂದರ್ಭದಲ್ಲಿ ಅವರು ಮಾತನಾಡಿದರು.

ಬೆಂಗಳೂರಿನ ಮೇಲಿನ ದಟ್ಟಣೆಯನ್ನು ಕಡಿಮೆ ಮಾಡಲು ಮೈಸೂರು, ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಕಲ್ಬುರ್ಗಿ ಸೇರಿದಂತೆ ಐದು ಪ್ರಮುಖ ನಗರಗಳಲ್ಲಿ ಹೊಸ ಉದ್ಯೋಗ ಸೃಷ್ಟಿ, ಶಿಕ್ಷಣ, ಆರೋಗ್ಯ ಮತ್ತು ಮೂಲಸೌಕರ್ಯಗಳ ಅಭಿವೃದ್ಧಿಗೆ ವಿಶೇಷ ಕಾರ್ಯಕ್ರಮ ರೂಪಿಸಲಾಗುವುದು ಎಂದು ತಿಳಿಸಿದರು.

ರಾಜ್ಯದ ಸಣ್ಣ ಮತ್ತು ದೊಡ್ಡ ನಗರಗಳಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸಲು ಪ್ರತ್ಯೇಕ ರಿಂಗ್ ರೋಡ್‌ಗಳ ನಿರ್ಮಾಣಕ್ಕೆ ಈಗಾಗಲೇ  ಸಹಿ ಹಾಕಲಾಗಿದೆ. ಮೈಸೂರು ನಗರವು ಬೆಂಗಳೂರಿಗಿಂತಲೂ ಉತ್ತಮವಾಗಿ ಯೋಜಿತಗೊಂಡ ನಗರ  ಆಗಿದ್ದು, ಇಲ್ಲಿ ಹೊಸ ಮಾದರಿಯ ಯೋಜನೆಗಳನ್ನು ತರಲಾಗುವುದು ಎಂದರು.

ವಿಶ್ವಪ್ರಸಿದ್ಧ ಮೈಸೂರು ದಸರಾ ಮಹೋತ್ಸವಕ್ಕೆ ನೂತನ ಮೆರುಗು ನೀಡಲು ಯೋಜನೆ ರೂಪಿಸಲಾಗಿದೆ. ಈ ಬಾರಿ ಮಿಲಿಟರಿ, ಏರ್‌ಫೋರ್ಸ್ ಹಾಗೂ ರಕ್ಷಣಾ ಪಡೆಗಳ ಪರೇಡ್ ಸೇರ್ಪಡೆಗೊಳಿಸಲು ಮನವಿ ಮಾಡಲಾಗಿದೆ. ಹಾಗೆಯೇ, ಚಲನಚಿತ್ರ ರಂಗದ ಕಲಾವಿದರು ಮತ್ತು ವಿವಿಧ ಸಾಂಸ್ಕೃತಿಕ ತಂಡಗಳು ಒಂದೇ ಸೂರಿನಡಿ ಪಾಲ್ಗೊಳ್ಳುವಂತೆ ಮಾಡಲು ಸೂಚಿಸಲಾಗಿದೆ ಎಂದು ತಿಳಿಸಿದರು.

ಕಾವೇರಿ ನೀರು ಹಂಚಿಕೆ ವಿಷಯಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಆದೇಶಗಳನ್ನು ಪಾಲಿಸುವುದರ ಜೊತೆಗೆ, ರಾಜ್ಯದ ರೈತರ ಹಿತರಕ್ಷಣೆಗೆ ಸರ್ಕಾರ ಬದ್ಧವಾಗಿದೆ ಎಂದು ಸ್ಪಷ್ಟಪಡಿಸಿದರು.ಸ್ಥಳೀಯ ಶಾಸಕರು ಮತ್ತು ಜನಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸಿ ಮೈಸೂರಿನ ಸರ್ವಾಂಗೀಣ ಅಭಿವೃದ್ಧಿಗೆ ಶೀಘ್ರದಲ್ಲೇ ವಿಶೇಷ ಸಭೆ ಕರೆದು ಅಂತಿಮ ರೂಪುರೇಷೆ ಸಿದ್ಧಪಡಿಸುವುದಾಗಿ  ಹೇಳಿದರು.

ಸಂದರ್ಭದಲ್ಲಿ  ಚಾಮರಾಜ ಕ್ಷೇತ್ರದ ಶಾಸಕರಾದ ಕೆ. ಹರೀಶ್‌ ಗೌಡ, ಪ್ರಾದೇಶಿಕ ಆಯುಕ್ತ  ನಿತೇಶ್‌ ಪಾಟೀಲ್‌,ಜಿಲ್ಲಾಧಿಕಾರಿ ಜಿ. ಲಕ್ಷ್ಮಿಕಾಂತರೆಡ್ಡಿ, ಪೊಲೀಸ್‌ ಆಯುಕ್ತ ಸೀಮಾ ಲಾಟ್ಕ‌ರ್, ಪೊಲೀಸ್‌ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ್ ಬಾಲದಂಡಿ ಹಾಗೂ  ಮುಖಂಡರು ಮತ್ತಿತರರು ಉಪಸ್ಥಿತರಿದ್ದರು.

Key words: New plan, development, Mysore, CM, D.K. Shivakumar

The post ಬೆಂಗಳೂರು ಮೇಲಿನ ಒತ್ತಡ ಕಡಿಮೆ ಮಾಡಲು ಮೈಸೂರು ಸೇರಿ 5 ನಗರಗಳ ಅಭಿವೃದ್ಧಿಗೆ ಹೊಸ ಯೋಜನೆ- ಸಿಎಂ ಡಿ.ಕೆ. ಶಿವಕುಮಾರ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ഇറാന്‍ നാവികസേന ഇപ്പോഴും ജീവനോടെയുണ്ട്; ട്രംപിന്റെ അവകാശവാദത്തിനെതിരെ ഇറാന്‍ നാവിക സേന കമാന്‍ഡര്‍

ടെഹ്‌റാന്‍: ഇറാന്റെ നാവികസേന ഇപ്പോഴും നിലനില്‍ക്കുന്നുവെന്നും അതിന് പ്രശ്‌നങ്ങളില്ലെന്നും ഇറാന്‍ നാവിക...

"தமிழக சட்டமன்றத்தின் சூப்பர் ஸ்டார் செளமியா அன்புமணி!" – புகழ்ந்த அன்புமணி ராமதாஸ்

பரந்தூர் விமான நிலையத் திட்டம் கைவிடப்பட்டது தொடர்பாகவும், பெரிய விமான நிலையம்...