ಬೆಂಗಳೂರು, Aug.30,2026: ಆದಾಯ ತೆರಿಗೆ (ಐ-ಟಿ) ಇಲಾಖೆಯೊಂದಿಗೆ 14 ವರ್ಷಗಳ ಸುದೀರ್ಘ ಹೋರಾಟದ ಬಳಿಕ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ (ವಿಟಿಯು) ಸೇರಿದ್ದ 700 ಕೋಟಿಗೂ ಅಧಿಕ ಕಾರ್ಪಸ್ ನಿಧಿಯನ್ನು ಮರಳಿ ಪಡೆದಿದೆ.
2012-13ರಲ್ಲಿ ಆದಾಯ ತೆರಿಗೆ ವಶಪಡಿಸಿಕೊಂಡಿದ್ದ ಈ ನಿಧಿಯನ್ನು ವಿಟಿಯು ಕಾನೂನಿನ ಹೋರಾಟದ ಮೂಲಕ ವಾಪಸ್ ಪಡೆದಿದೆ.
ವಿಟಿಯು ಖಾತೆಗಳನ್ನು ಐಟಿ ಇಲಾಖೆ ಸ್ಥಗಿತಗೊಳಿಸಿದ ಬಳಿಕ ಸರಣಿ ನ್ಯಾಯಾಲಯದ ಪ್ರಕರಣಗಳನ್ನು ಎದುರಿಸಿದ್ದ ವಿಟಿಯುಗೆ ಕೊನೆಗೂ ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಅಡಿ ದೊರೆತ ಮಾಹಿತಿಯ ಮೂಲಕ ಕಾನೂನು ಹೋರಾಟ ನಡೆಸಿ ನಿಧಿಯನ್ನು ಮರಳಿ ಪಡೆಯುವಲ್ಲಿ ವಿವಿಯು ಯಶಸ್ವಿಯಾಗಿದೆ.
ಪ್ರಕರಣದ ಹಿನ್ನೆಲೆ:
2012-13ರಲ್ಲಿ ಆದಾಯ ತೆರಿಗೆ ಇಲಾಖೆಯು ವಿಟಿಯುಗೆ ನೋಟಿಸ್ ನೀಡಿ, ವಿಶ್ವವಿದ್ಯಾಲಯ ಸ್ಥಾಪನೆಯಾದಾಗಿನಿಂದಲೂ ರೂ.250 ಕೋಟಿ ಆದಾಯ ತೆರಿಗೆ ಪಾವತಿಸಬೇಕೆಂದು ಬೇಡಿಕೆ ಇಟ್ಟಿತ್ತು. ಆದಾಯ ತೆರಿಗೆ ಕಾಯ್ದೆಯ 12(ಎ) ಅಡಿಯಲ್ಲಿ ವಿಟಿಯು ತೆರಿಗೆ ವಿನಾಯಿತಿ ಪಡೆದಿರಲಿಲ್ಲ. ಹೀಗಾಗಿ ವಿಶ್ವವಿದ್ಯಾಲಯವು ತೆರಿಗೆ ಬಾಕಿಯನ್ನು ಪಾವತಿಸಬೇಕು ಎಂದು ಆದಾಯ ತೆರಿಗೆ ಇಲಾಖೆ ವಾದಿಸಿತ್ತು.
ವಿಟಿಯು ಈ ವಿಚಾರವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದರೂ, ಆದಾಯ ತೆರಿಗೆ ಇಲಾಖೆಯು ಪ್ರತಿ ಹಂತದಲ್ಲೂ, ಆದಾಯ ತೆರಿಗೆ ನ್ಯಾಯಮಂಡಳಿಯಿಂದ ಹಿಡಿದು ಸುಪ್ರೀಂ ಕೋರ್ಟ್‌ವರೆಗೂ ಪ್ರಕರಣದಲ್ಲಿ ಜಯ ಸಾಧಿಸಿತ್ತು.

700 ಕೋಟಿ ಕಾರ್ಪಸ್ ನಿಧಿ:
ತೆರಿಗೆ ಬಾಕಿ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆ ವಿಟಿಯು ಖಾತೆಗಳನ್ನು ವಶಪಡಿಸಿಕೊಂಡ ಸಂದರ್ಭದಲ್ಲಿ, ವಿಶ್ವವಿದ್ಯಾಲಯದ ವಿವಿಧ ಬ್ಯಾಂಕ್ ಖಾತೆಗಳಲ್ಲಿ ಒಟ್ಟು ರೂ.450 ಕೋಟಿ ಕಾರ್ಪಸ್ ನಿಧಿ ಇತ್ತು. ಇದರ ಜೊತೆಗೆ ವಿವಿಯ 250 ಕೋಟಿ ನಿಧಿ ಎರಡು ಸೇರಿಸಿ 700 ಕೋಟಿ ಅಧಿಕ ಮೊತ್ತವನ್ನು ಮರಳಿ ಪಡೆಯಿದೆ. ಈ ಕಾರ್ಪಸ್ ನಿಧಿಯು ಪರೀಕ್ಷಾ ಶುಲ್ಕ, ಸಂಯೋಜಿತ ಕಾಲೇಜುಗಳ ಶುಲ್ಕ ಹಾಗೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಪ್ರತಿ ವರ್ಷ ಮರುಪಾವತಿಯಾಗುವ ಹಣದಿಂದ ಸಂಗ್ರಹವಾಗಿತ್ತು. ಖಾತೆಗಳನ್ನು ವಶಪಡಿಸಿಕೊಂಡ ಪರಿಣಾಮ ಕಳೆದ ಹಲವು ವರ್ಷಗಳಿಂದ ವಿಶ್ವವಿದ್ಯಾಲಯ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿತ್ತು. ಆದರೆ, ಕೆಲವು ತಿಂಗಳ ಹಿಂದೆ ಕುಲಪತಿ ವಿದ್ಯಾಶಂಕರ್ ಅವರು ವಿಶ್ವವಿದ್ಯಾಲಯದ ಅಧಿಕಾರಿಗಳ ಸಭೆ ಕರೆದು, ಆದಾಯ ತೆರಿಗೆ ಇಲಾಖೆಗೆ ಸಂಬಂಧಿಸಿದ ಎಲ್ಲಾ ಕಡತಗಳನ್ನು ಪರಿಶೀಲಿಸುವಂತೆ ಸೂಚಿಸಿದರು.
ಸಿಬ್ಬಂದಿ ವೇತನಕ್ಕೆ ಬಳಕೆ:
ವಿಟಿಯು ಪಡೆದುಕೊಂಡಿರುವ ಹಣವನ್ನು ವಿವಿಯ ಸಿಬ್ಬಂದಿ ವೇತನಕ್ಕೆ ಬಳಕೆ ಮಾಡಲು ನಿರ್ಧರಿಸಿದೆ. ಹಣವನ್ನು 10 ವರ್ಷಗಳ ಅವಧಿಗೆ ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಠೇವಣಿ ಇಡಲು ನಿರ್ಧರಿಸಲಾಗಿದೆ. 11ನೇ ವರ್ಷದಿಂದ ಠೇವಣಿಯಿಂದ ದೊರೆಯುವ ಬಡ್ಡಿ ಆದಾಯವನ್ನು ಸಿಬ್ಬಂದಿಯ ವೇತನ ಪಾವತಿಗೆ ಬಳಸಲು ವಿಶ್ವವಿದ್ಯಾಲಯ ಯೋಜಿಸಿದೆ.
ಕೋಟ್ :
ವಿಶ್ವವಿದ್ಯಾಲಯವು 1999ರಲ್ಲಿಯೇ 12(ಎ) ಅಡಿಯಲ್ಲಿ ತೆರಿಗೆ ವಿನಾಯಿತಿಗಾಗಿ ಅರ್ಜಿ ಸಲ್ಲಿಸಿತ್ತು ಎಂಬುದು ನಮ್ಮ ಗಮನಕ್ಕೆ ಬಂತು. ಆದರೆ ಅದನ್ನು ಸಾಬೀತುಪಡಿಸುವ ಯಾವುದೇ ದಾಖಲೆಗಳು ಲಭ್ಯವಿರಲಿಲ್ಲ. ಅಂತಿಮವಾಗಿ ನಾವು ಆದಾಯ ತೆರಿಗೆ ಇಲಾಖೆಯ ಮುಂದೆ ಆರ್‌ಟಿಐ ಅರ್ಜಿ ಸಲ್ಲಿಸಿ, 1999ರ ಪ್ರವೇಶ ನೋಂದಣಿ (ಎಂಟ್ರಿ ರಿಜಿಸ್ಟರ್) ಪಡೆದುಕೊಂಡೆವು. ಆ ಮೂಲಕ ನಾವು ನಮ್ಮ ವಿವಿಯ ಹಣವನ್ನು ಮರಳಿ ಪಡೆಯುತ್ತಿದ್ದೇವೆ.
– ಪ್ರೊ. ಎಸ್. ವಿದ್ಯಾಶಂಕರ್, ಕುಲಪತಿ, ವಿಟಿಯು
Key words: After 14 Years of Struggle, VTU, Gets Back, Over Rs. 700 Crore Corpus Fund

ENGLISH SUMMARY:
After 14 Years of Struggle, VTU Gets Back Over Rs. 700 Crore Corpus Fund
* University funds were seized in 2012-13 over non-payment of income tax
* Victory achieved through a legal battle
BENGALURU: After a prolonged 14-year battle with the Income Tax (I-T) Department, Visvesvaraya Technological University (VTU) has recovered more than Rs. 700 crores in corpus funds belonging to the university.

The funds, which had been seized by the Income Tax Department in 2012-13, were recovered by VTU through a legal battle.
After the I-T Department froze VTU’s accounts, the university faced a series of court cases. Finally, using information obtained under the Right to Information (RTI) Act, VTU pursued the legal battle and succeeded in recovering the funds.

Background of the case
In 2012-13, the Income Tax Department issued a notice to VTU demanding payment of Rs. 250 crore in income tax from the time the university was established. The Income Tax Department argued that VTU had not obtained tax exemption under Section 12(A) of the Income Tax Act and therefore had to pay the tax dues.
Although VTU challenged the matter in court, the Income Tax Department succeeded at every stage of the case, from the Income Tax Tribunal to the Supreme Court.
Rs. 700 crore corpus funds
When the Income Tax Department seized VTU’s accounts over the tax dues, the university had a total corpus fund of Rs. 450 crores in various bank accounts. Along with another Rs. 250 crore belonging to the university, VTU has now recovered an amount exceeding Rs. 700 crores.
The corpus fund had been accumulated from examination fees, fees collected from affiliated colleges and money reimbursed every year by the Karnataka Examinations Authority.
As a result of the seizure of its accounts, the university had been facing severe financial difficulties for several years. However, a few months ago, Vice-Chancellor Prof. S. Vidyashankar convened a meeting of university officials and directed them to examine all the files related to the Income Tax Department.
To be used for staff salaries
VTU has decided to use the recovered funds for the salaries of university staff. The university has decided to deposit the money in a nationalised bank for a period of 10 years. From the 11th year onwards, the interest income generated from the deposit will be used to pay the salaries of the staff, according to the university’s plan.
Quote
“We came to know that the university had applied for tax exemption under Section 12(A) as early as 1999. However, there were no documents available to prove this. Finally, we filed an RTI application before the Income Tax Department and obtained the 1999 entry register. Through this, we are now recovering our university’s money.”
— Prof. S. Vidyashankar, Vice-Chancellor, VTU
The post 14 ವರ್ಷಗಳ ಹೋರಾಟದ ಬಳಿಕ ವಿಟಿಯುಗೆ ರೂ.700 ಕೋಟಿಗೂ ಅಧಿಕ ಕಾರ್ಪಸ್ ನಿಧಿ ವಾಪಸ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.





