19
October, 2026

A News 365Times Venture

19
Monday
October, 2026

A News 365Times Venture

87 ಕೋಟಿ ರೂ. ಹಗರಣದ ಮುಜುಗರ ತಪ್ಪಿಸಿಕೊಳ್ಳಲು ನಾಗೇಂದ್ರ ರಾಜೀನಾಮೆ- ಕೇಂದ್ರ ಸಚಿವ HDK

Date:

ಮಂಡ್ಯ,ಆಗಸ್ಟ್,29,2026 (www.justkannada.in): ಪಕ್ಷಕ್ಕೆ ಆಗುವ ಮುಜುಗರ ತಪ್ಪಿಸಲು ಬಿ. ನಾಗೇಂದ್ರ ರಾಜೀನಾಮೆ ಎಂದಿದ್ದಾರೆ. ಯಾವ ಕಾರಣಕ್ಕೆ ಕಾಂಗ್ರೆಸ್ ಗೆ ಮುಜುಗರ ಆಗುತ್ತಿದೆ. 87 ಕೋಟಿ ಹಗರಣದ ಮುಜುಗರ ತಪ್ಪಿಸಲು ರಾಜೀನಾಮೆ ಕೊಟ್ಟಿದ್ದಾ?  ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಕಾಲೆಳೆದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ,   ಹೆಚ್ ಡಿಕೆ ಮೇಲೆ ಆರೋಪ ಇಲ್ವಾ ಎಂದು ನಾಗೇಂದ್ರ ಹೇಳಿದ್ದಾರೆ ನನ್ನ ಮೇಲೆ ಇರೋದು ರಾಜಕೀಯ ಆರೋಪ. ನಾನು ದುಡ್ಡು ಹೊಡೆದಿದ್ದೇನೆ ಎಂದು ಎಲ್ಲೂ ಇಲ್ಲ. 14 ವರ್ಷದಿಂದ ಆರೋಪವನ್ನ ಜೀವಂತ ಇಟ್ಟುಕೊಂಡಿದ್ದಾರೆ ನಾನು ಎರಡು ಬಾರಿ ಸಿಎಂ ಆಗಿದ್ದಾಗ ಮುಚ್ಚಿ ಹಾಕಬಹುದಿತ್ತು ಆರೋಪ ಮಾಡಿರೋರು ತನಿಖೆ ನಡೆಸಲು ಎಂದು ಬಿಟ್ಟಿದ್ದೇನೆ.  ಹಣ ಹೊಡೆದಿರುವ ಮುಜುಗರ ತಪ್ಪಿಸಿಕೊಳ್ಳಲು ನಾಗೇಂದ್ರ ರಾಜೀನಾಮೆ ನೀಡಿದ್ದಾರೆ ಎಂದರು.

ಹಗರಣ ಮಾಡಿದ್ರೆ ರಾಜೀನಾಮೆ ನೀಡುತ್ತೇನೆ ಎಂಬ ಸಚಿವ ಬಾಲಕೃಷ್ಣ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಹೆಚ್ ಡಿ ಕುಮಾರಸ್ವಾಮಿ, ಸರ್ಕಾರ ಹಣ ಖರ್ಚು ಮಾಡಿ ಅಭಿವೃದ್ದಿ ಕಾರ್ಯಕ್ರಮ ಮಾಡಬೇಕಿತ್ತು.  ಆಗ 600 ಕೋಟಿ ಅವ್ಯವಹಾರ ಆಗಿದೆ ಎಂದು ಸಮಿತಿ ಮಾಡಿದರು.  ಅಭಿವೃದ್ದಿ ಹೆಸರಿನಲ್ಲಿ ಲೂಟಿ ಆಗಿದೆ ಎಂದು ಸಮಿತಿ ರಚಿಸಿದ್ದರು.  ಆದರೆ ಆ ಸದನ ಸಮಿತಿ ವರದಿ ಕೊಟ್ರಾ?  ಆ ವರದಿಯಲ್ಲಿ ಏನಿದೆ? ಬಹಳ ಜನ ರಾಜೀನಾಮೆ ಕೊಡುತ್ತೀನಿ ಅಂತೇಳಿ ಹೇಗಿದ್ದಾರೆ ನೋಡಿ ಎಂದು ಟಾಂಗ್ ಕೊಟ್ಟರು.

Key words: Nagendra, resigned, embarrassment, scam, Union Minister, HDK

The post 87 ಕೋಟಿ ರೂ. ಹಗರಣದ ಮುಜುಗರ ತಪ್ಪಿಸಿಕೊಳ್ಳಲು ನಾಗೇಂದ್ರ ರಾಜೀನಾಮೆ- ಕೇಂದ್ರ ಸಚಿವ HDK appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

“அன்புச் சகோதரர் விஜய்-க்கு பணிவான வேண்டுகோள்" – லெஜெண்ட் சரவணன்

ஆயுதப் பூஜை கொண்டாட்டத்தை முன்னிட்டு நடிகர் லெஜெண்ட் சரவணன் ஆட்டோ ஓட்டுநர்களுடன்...

Kiren Rijiju: ‘‘బంగ్లాదేశ్-ఫ్రాన్స్‌ తరహాలో భారత్‌లో కుట్ర’’.. సోరోస్ ప్లాన్ పనిచేయదన్న కిరెన్ రిజిజు..

Kiren Rijiju: బంగ్లాదేశ్, ఫ్రాన్స్ దేశాల్లో చోటుచేసుకుంటున్న హింసాత్మక సంఘటనల తరహాలోనే...

അന്ധമായ രാഷ്ട്രീയ ആരാധന രാജ്യത്തിന്റെ അടിത്തറ തകര്‍ക്കും; ‘അന്ധങ്ങള്‍ ആകാതിരിക്കുക’; ജന്തര്‍മന്തര്‍ സമരത്തിന് പിന്തുണയുമായി ജോബ് കുര്യന്‍

  തിരുവനന്തപുരം: അന്ധമായ രാഷ്ട്രീയ കൂറും നേതാക്കളോടുള്ള ആരാധനയും രാജ്യത്തിന്റെ പുരോഗതിക്ക്...

போதைப்பொருள்: “தவெக கட்சியா இல்ல Narcos கூடாரமா?" – உதயநிதி ஸ்டாலின் கேள்வி

நாகப்பட்டினத்தில் தவெக நிர்வாகிக்கு சொந்தமான வீட்டில் 135 கிலோ எடையுள்ள 'மெத்'...