31
July, 2026

A News 365Times Venture

31
Friday
July, 2026

A News 365Times Venture

ರಾಜ್ಯ ಗೃಹ ಇಲಾಖೆ ಕೇವಲ ಬಿಜೆಪಿಗರ ಭಾಷಣ ಹುಡುಕುವುದರಲ್ಲಿ ನಿರತ-ಶಾಸಕ ಸುನೀಲ್ ಕುಮಾರ್

Date:

ಶಿವಮೊಗ್ಗ,ಜುಲೈ,30,2026 (www.justkannada.in): ರಾಜ್ಯದ ಗೃಹ ಇಲಾಖೆ  ಡ್ರಗ್ಸ್ ದಂಧೆ ಕೊಲೆ ಸುಲಿಗೆ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಕೇವಲ ಬಿಜೆಪಿಗರ ಭಾಷಣ ಹುಡುಕುವ ಕೆಲಸ ಮಾಡುತ್ತಿದೆ ಎಂದು ಬಿಜೆಪಿ ಶಾಸಕ ವಿ.ಸುನೀಲ್ ಕುಮಾರ್ ವ್ಯಂಗ್ಯವಾಡಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ವಿ.ಸುನೀಲ್ ಕುಮಾರ್, ರಾಜ್ಯದ ಗೃಹ ಇಲಾಖೆ ಫೇಸ್ ಬುಕ್ ವಾಟ್ಸಪ್ ಗೆ ಸೀಮಿತ. ಇದರಿಂದ ರಾಜ್ಯದಲ್ಲಿ ಹೊಸ ಇಲಾಖೆ ಕೂಡ ಹುಟ್ಟಿಕೊಂಡಂತಾಗಿದೆ. ಗೃಹ ಇಲಾಖೆ ಎಂಬುದು ಇವತ್ತು ಇಲ್ಲವೇ ಇಲ್ಲ.  ಗೃಹ ಇಲಾಖೆ ಡ್ರಗ್ಸ್ ದಂಧೆ ಕೊಲೆ ಸುಲಿಗೆ ಬಗ್ಗೆ ತಲೆಕೆಡಿಸಿಕೊಳ್ಳುತಿಲ್ಲ. ಕೇವಲ ಬಿಜೆಪಿಗರ ಭಾಷಣ ಹುಡುಕುವ ಕೆಲಸ ಮಾಡುತ್ತಿದೆ.  ಇಲಾಖೆ ಈ ರೀತಿ ಮಾರ್ಪಾಡಾಗಿರುವುದು ಅತ್ಯಂತ ದುರ್ದೈವದ ಸಂಗತಿ ಎಂದರು.

ಎಂಎಲ್ ಸಿ ಸಿಟಿ ರವಿ, ಶಾಸಕ ಯಶ್ ಪಾಲ್ ಗೆ ನೋಟಿಸ್ ನೀಡಿರುವುದು ವಿಷಾದಕರ.  ನೋಟಿಸ್ ನಿಂದ ಹೆದರಿಕೊಳ್ಳಬಹುದು ಎಂಬ ಭ್ರಮೆಯಲ್ಲಿ ಕಾಂಗ್ರೆಸ್ ಇದೆ. ನಾವು ಗೋಲಿಬಾರ್ ಲಾಠಿಚಾರ್ಜ್ ಗೆ ಹೆದರಲ್ಲ ಇನ್ನು ಈ ರೀತಿಯ ಬೆದರಿಕೆಗಳಿಗೆ ನಾವು ಹೆದರಿಕೊಳ್ಳುವ ಪ್ರಶ್ನೆಯೇ ಇಲ್ಲ. ಇನ್ನೂ ಒಂದುವರೆ ವರ್ಷಗಳ ಕಾಲ ರಾಜ್ಯದ ಜನರು ಸಹಿಸಿಕೊಳ್ಳಬೇಕು. 2028ರ ಚುನಾವಣೆಯಲ್ಲಿ ರಾಜ್ಯದ ಜನರು ತಕ್ಕ ಉತ್ತರವನ್ನ ನೀಡಲಿದ್ದಾರೆ ಎಂದು  ವಿ. ಸುನೀಲ್ ಕುಮಾರ್  ಹೇಳಿದರು.

Key words:  Home Department, busy, BJP speeches, MLA, Sunil Kumar

The post ರಾಜ್ಯ ಗೃಹ ಇಲಾಖೆ ಕೇವಲ ಬಿಜೆಪಿಗರ ಭಾಷಣ ಹುಡುಕುವುದರಲ್ಲಿ ನಿರತ-ಶಾಸಕ ಸುನೀಲ್ ಕುಮಾರ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ಚೆನ್ನಮ್ಮರ 11ನೇ ದಿನದ ಕಾರ್ಯ:  ಪತ್ನಿ ಸಮಾಧಿಗೆ ಪೂಜೆ ಸಲ್ಲಿಸಿದ ಮಾಜಿ ಪ್ರಧಾನಿ ಹೆಚ್ ಡಿಡಿ

ಹಾಸನ,ಜುಲೈ,30,2026 (www.justkannada.in):  ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಪತ್ನಿ...

വീണിടത്ത് കിടന്നുരുളുന്ന അവസരവാദികളായ യു.ഡി.എഫ്, ബി.ജെ.പിയുടെ ചെളിക്കുണ്ടില്‍ മുങ്ങിത്താഴുന്നു; പി.എം. ശ്രീയില്‍ എസ്.എഫ്.ഐ

തിരുവനന്തപുരം: ബി.ജെ.പിയുടെ രാഷ്ട്രീയ നിലപാടുകളോട് കോണ്‍ഗ്രസും മുസ്‌ലിം ലീഗും ഒത്തുതീര്‍പ്പ് രാഷ്ട്രീയം...

`நாளையிலிருந்து கோழி இறைச்சி கிடைக்காதா?' – கோழி வணிகர்களின் கூட்டமைப்பு சொல்வது என்ன?

தஞ்சையில் கோழி வணிகர்கள் கூட்டமைப்பின் மாநில செயற்குழு கூட்டம் இந்த மாதத்...

Deputy CM Pawan Kalyan: సాగునీటి సంక్షోభంపై పవన్ సమీక్ష.. ప్రత్యామ్నాయ చర్యలకు ఆదేశాలు

Deputy CM Pawan Kalyan: ఆంధ్రప్రదేశ్‌లో సూపర్ ఎల్ నినో ప్రభావం,...