ನವದೆಹಲಿ,ಜುಲೈ,24,2026 (www.justkannada.in): ಪ್ರಧಾನಿ ಮೋದಿ ಜಿ ಸಂಸತ್ತಿಗೆ ಬರುವ ಮೊದಲು ದಯವಿಟ್ಟು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನ ವಜಾಗೊಳಿಸಿ ಎಂದು ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದ್ದಾರೆ.
ಪ್ರಧಾನಿ ಮೋದಿ ವಿಡಿಯೋ ಹೇಳಿಕೆಗೆ ಕುರಿತು ಟ್ವೀಟ್ ಮಾಡಿರುವ ಮಲ್ಲಿಕಾರ್ಜುನ ಖರ್ಗೆ, ಸಂಸತ್ ಅಧಿವೇಶನ ನಡೆಯುತ್ತಿರುವಾಗ ಪ್ರಧಾನ ಮಂತ್ರಿಗಳು ಸಂಸತ್ತಿನ ಮಹಡಿಯಲ್ಲಿ ಹೇಳಿಕೆ ನೀಡಬೇಕೆ ಹೊರತು ತಡರಾತ್ರಿ ವಿಡಿಯೋ ಮಾಡಿ ಸಂಸತ್ತಿನ ಹೊರಗೆ ಏಕಪಕ್ಷೀಯ ಮನ್ ಕಿ ಬಾತ್ ಭಾಷಣ ಮಾಡುವುದು ಸರಿಯಲ್ಲ ಎಂದು ಟೀಕಿಸಿದ್ದಾರೆ. 
ಮೋದಿ ಜಿ ಇಂದು ಸಂಸತ್ತಿಗೆ ಬರುವ ಮೊದಲು ದಯವಿಟ್ಟು ಪ್ರಧಾನ್ ಅವರನ್ನ ವಜಾಗೊಳಿಸಿ. ಮೊದಲು ನೀವು ವಿದ್ಯಾರ್ಥಿಗಳಲ್ಲಿ ಕ್ಷಮೆಯಾಚಿಸಿ ವಿದ್ಯಾರ್ಥಿಗಳ ಧ್ವನಿಯನ್ನು ಹತ್ತಿಕ್ಕಲು ಕೋಲುಗಳು ಮತ್ತು ಪೆಲೆಟ್ ಗನ್ ಗಳನ್ನು ಬಳಸಿದವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದ್ದಾರೆ.
Key words: Dharmendra Pradhan dismiss, Modi ji, Mallikarjun Kharge
The post ಮೋದಿ ಜಿ ಸಂಸತ್ತಿಗೆ ಬರುವ ಮೊದಲು ದಯವಿಟ್ಟು ಧರ್ಮೇಂದ್ರ ಪ್ರಧಾನ್ ವಜಾಗೊಳಿಸಿ- ಖರ್ಗೆ ಆಗ್ರಹ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.





