ಬೆಂಗಳೂರು, ಜು.10: ನಾಡಿನ ಪರಂಪರೆ, ಸಂಸ್ಕೃತಿ ಮತ್ತು ಇತಿಹಾಸವನ್ನು ಮುಂದಿನ ಪೀಳಿಗೆಗೆ ತಲುಪಿಸುವ ಉದ್ದೇಶದಿಂದ ಈ ಬಾರಿಯ ಮೈಸೂರು ದಸರಾ ಮಹೋತ್ಸವವನ್ನು ಇನ್ನಷ್ಟು ವಿಜೃಂಭಣೆಯಿಂದ ಆಚರಿಸಲು ಎಲ್ಲಾ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಹೇಳಿದರು.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ದಸರಾ ಪೂರ್ವಭಾವಿ ಉನ್ನತ ಮಟ್ಟದ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 16 ರಿಂದ 30 ವರ್ಷದೊಳಗಿನ ಸುಮಾರು 1.9 ಕೋಟಿ ಯುವಕರಿದ್ದು, ವಿಶೇಷವಾಗಿ Gen Z ಪೀಳಿಗೆಗೆ ಕರ್ನಾಟಕದ ಪರಂಪರೆ, ಸಂಸ್ಕೃತಿ ಹಾಗೂ ಮೈಸೂರಿನ ಇತಿಹಾಸವನ್ನು ಪರಿಚಯಿಸುವ ಕಾರ್ಯಕ್ರಮಗಳು ಅಗತ್ಯ ಎಂದು ತಿಳಿಸಿದರು.
ಮೈಸೂರು ಇತಿಹಾಸವನ್ನು ಪ್ರತಿಬಿಂಬಿಸುವ ವಸ್ತುಪ್ರದರ್ಶನ, ಪಾರಂಪರಿಕ ದೀಪಾಲಂಕಾರ ಹಾಗೂ ಯುವ ದಸರಾವನ್ನು ಹೆಚ್ಚು ಅರ್ಥಪೂರ್ಣವಾಗಿ ಆಯೋಜಿಸುವ ಮೂಲಕ ಯುವಜನರಲ್ಲಿ ಇತಿಹಾಸದ ಅರಿವು ಮೂಡಿಸಬೇಕು ಎಂದು ಸಲಹೆ ನೀಡಿದರು.

ವಿಜಯನಗರ ಸಾಮ್ರಾಜ್ಯದ ಮಹಾನವಮಿ ಉತ್ಸವದಿಂದ ಆರಂಭವಾಗಿ, ಮೈಸೂರು ಒಡೆಯರ 400 ವರ್ಷಗಳ ಪರಂಪರೆಯನ್ನು ಹೊತ್ತಿರುವ ದಸರಾ ಕೇವಲ ಉತ್ಸವವಲ್ಲ; ಅದು ಕನ್ನಡ ನಾಡಿನ ಸಾಂಸ್ಕೃತಿಕ ಹೆಗ್ಗುರುತು ಎಂದು ಅವರು ಹೇಳಿದರು.
ಮೈಸೂರು ದಸರಾವನ್ನು ವಿಶ್ವಮಟ್ಟದಲ್ಲಿ ಮತ್ತಷ್ಟು ಪ್ರಚಾರಗೊಳಿಸಿ, ದೇಶ-ವಿದೇಶದ ಪ್ರವಾಸಿಗರನ್ನು ಸೆಳೆಯುವ ಜೊತೆಗೆ ರಾಜ್ಯದ ಪಾರಂಪರಿಕ ಕಟ್ಟಡಗಳ ಸಂರಕ್ಷಣೆಗೆ ಆದ್ಯತೆ ನೀಡಬೇಕು ಎಂದು ಡಿಸಿಎಂ ಸೂಚಿಸಿದರು.
Key words: Mysuru Dasara, to Showcase, History for Gen Z, DCM Parameshwara

SUMMARY:
Mysuru Dasara to Showcase History for Gen Z: DCM Parameshwara
Bengaluru, July 10: Deputy Chief Minister Dr. G. Parameshwara said Mysuru Dasara 2026 will be celebrated on a grand scale with a special focus on introducing Karnataka’s history, culture, and heritage to the Gen Z generation.
Speaking at the high-level preparatory meeting, he suggested organizing historical exhibitions, heritage-themed illuminations, and meaningful youth-centric events to help young people understand Mysuru’s rich legacy.

He emphasized that Dasara is not just a festival but a celebration of Karnataka’s cultural identity and should be used to connect the younger generation with the state’s glorious past.

The post Gen Z ಪೀಳಿಗೆಗೆ ಇತಿಹಾಸ ಪರಿಚಯಿಸಲಿ “ಮೈಸೂರು ದಸರಾ” : ಡಿಸಿಎಂ ಜಿ. ಪರಮೇಶ್ವರ್ ಸಲಹೆ. appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.





