ಕಲಬುರಗಿ,ಜುಲೈ,7,2026 (www.justkannada.in): ಬರಗಾಲ ಹಿನ್ನೆಲೆಯಲ್ಲಿ ಬರಪೀಡಿತ ಎಂದು ಘೋಷಣೆ ಮಾಡಬೇಕು ಎಂಬ ಬೇಡಿಕೆ ಇದೆ. ಸಾಲಮನ್ನಾ ಬಗ್ಗೆಯೂ ಪರಿಶೀಲನೆ ಮಾಡೋಣ ಎಂದು ಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಕಲ್ಬುರ್ಗಿಯಲ್ಲಿ ಇಂದು ಮಾತನಾಡಿದ ಸಿಎಂ ಡಿಕೆ ಶಿವಕುಮಾರ್, ಬರಗಾಲ ಹಿನ್ನೆಲೆಯ ಕಲಬುರಗಿಗೆ ಭೇಟಿ ನೀಡಿದ್ದೇನೆ. ಇನ್ನೂ ಎರಡು ಮೂರು ದಿನ ಬಿಟ್ಟು ಬೆಳಗಾವಿಗೂ ಭೇಟಿ ನೀಡುತ್ತೇನೆ. ಹಳ್ಳಿಗಳಲ್ಲಿ ಏನು ಸಮಸ್ಯೆ ಇದೆ. ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುತ್ತೇನೆ. ಕಾನೂನು ಚೌಕಟ್ಟಿನಲ್ಲಿ ಏನು ಮಾಡಬೇಕು ಮಾಡುತ್ತೇನೆ ಎಂದರು.
ಬರಪೀಡಿತ ಎಂದು ಘೋಷಣೆ ಮಾಡಬೇಕು ಎಂಬ ಬೇಡಿಕೆ ಇದೆ. ಸಾಲಮನ್ನಾ ಬಗ್ಗೆಯೂ ಪರಿಶೀಲನೆ ಮಾಡೋಣ. ಯಾವ ಸಾಲ ಏನು ಸಾಲ ಅನ್ನೋದರ ಬಗ್ಗೆ ಪರಿಶೀಲನೆ ಮಾಡುತ್ತೇನೆ ಎಂದು ಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.
Key words: review, Loan waiver, CM, DK Shivakumar
The post ಸಾಲಮನ್ನಾ ಬಗ್ಗೆಯೂ ಪರಿಶೀಲನೆ ಮಾಡುತ್ತೇನೆ- ಸಿಎಂ ಡಿಕೆ ಶಿವಕುಮಾರ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.





